ಯಾವುದೇ ದಾಖಲಾತಿಗಳು ಇಲ್ಲದೆ ಮರಣ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳಬಹುದು?

ಆತ್ಮೀಯ ಓದುಗರೇ,
ಯಾವುದೇ ದಾಖಲೆಗಳಿಲ್ಲದೆ  ಮರಣ ಪಣ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳಬಹುದು. ಒಬ್ಬ ವ್ಯಕ್ತಿ ಮರಣ ಹೊಂದಿದ ನಂತರ  ಕೆಲವು ದಿನಗಳು ಅಥವಾ ಬಹಳ ದಿನಗಳ ಆದಮೇಲೆ ಮರಣ ಪ್ರಮಾಣ ಪತ್ರವನ್ನು ಪಡೆಯುವುದು ತುಂಬಾ ಕಷ್ಟಕರವಾಗಿದೆ. ಪ್ರಮಾಣ ಪತ್ರವನ್ನು ಪಡೆಯಲು ಅಡಚಣೆ ಆಗಲಿ ನೀವು ಈ ರೀತಿ ಮಾಡಿದರೆ ನೀವು ನಮಗೆ ಬೇಕಾದ ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.

ಮರಣ ಪ್ರಮಾಣ ಪತ್ರವನ್ನು ಮಾಡಿಸಲು ಏನು ಮಾಡಬೇಕು ಮತ್ತು ಎಲ್ಲಿ ಹೋಗಿ ಅರ್ಜಿ ಸಲ್ಲಿಸಬೇಕು ಹೇಗೆ ಸಲ್ಲಿಸಬೇಕು ಎಂಬುದನ್ನು ನೋಡೋಣ.ಮರಣ ಹೊಂದಿದ ವ್ಯಕ್ತಿಯ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವಾಗ  ಮರಣ ಪ್ರಮಾಣ ಪತ್ರವನ್ನು ಹೇಗೆ ಪಡೆದುಕೊಳ್ಳಬಹುದು. ನೋಡೋಣ ಬನ್ನಿ.

ಮರಣ ಪ್ರಮಾಣ ಪತ್ರ ಮಾಡಿಸುವ ಮೂರು ಸಂದರ್ಭಗಳು :


1. ಒಬ್ಬ ವ್ಯಕ್ತಿ ಸತ್ತು ಬಹಳ ದಿನಗಳು ಕಳೆದ ಮೇಲೆ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವಾಗ.
2. ವ್ಯಕ್ತಿ ಮರಣ ಹೊಂದಿದ ನಂತರ ಅವನ ಹೆಸರಿನಲ್ಲಿ ಯಾವುದಾದರೂ ದಾಖಲೆಗಳು ಇದ್ದಾಗ.
3. ವ್ಯಕ್ತಿ ಸತ್ತ 21 ದಿನದ ಒಳಗಾಗಿ ನೋಂದಣಿ ಮಾಡಿಸಿ ಮರಣ ಪ್ರಮಾಣ ಪತ್ರ ಪಡೆಯುವ ವಿಧಾನ.


ವ್ಯಕ್ತಿಯು ಸತ್ತು ಅವನ ಹೆಸರಿನಲ್ಲಿ ಯಾವುದೇ ದಾಖಲೆಗಳು ಇಲ್ಲದಿರುವಾಗ ಈ ವಿಧಾನವನ್ನು ಬಳಸಿ ನಾವು ಮರಣ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದು.


1. ತಾಲೂಕಿನ ತಹಶೀಲ್ದಾರ್ ಕಚೇರಿಗೆ ಭೇಟಿ ನೀಡಿ.
2. ಜನನ ಮತ್ತು ಮರಣ ಶಾಖೆಗೆ ಭೇಟಿ ನೀಡಿ.
3. ಕಚೇರಿಗೆ ಭೇಟಿ ನೀಡಿ ಯಾವುದೇ ದಾಖಲೆಗಳು ಇಲ್ಲ ಎಂದು ಅವರಿಗೆ ಒಂದು ಅರ್ಜಿಯನ್ನು ಬರೆದುಕೊಟ್ಟರೆ, ನಿಮಗೆ ಮರಣ ಪ್ರಮಾಣ ಪತ್ರ ಲಭ್ಯವಿಲ್ಲ ಎಂದು ಬರೆದು ಕೊಡುತ್ತಾರೆ.ಇದನ್ನು ಹಿಂಬರಹ ಪತ್ರ ಎಂದು ಕರೆಯುತ್ತಾರೆ.
4. ನಂತರ ಕೋರ್ಟಿನಲ್ಲಿ ಯಾವ ಯಾವ ಪ್ರಕ್ರಿಯೆಗಳು ನಡೆಯುತ್ತವೆ ಎಂಬುದನ್ನು ನೋಡೋಣ.
5. ನಂತರ ನೀವು ಕೋರ್ಟಿನಲ್ಲಿ ಹೋಗಿ ನಿಮ್ಮ ಹತ್ತಿರವಿರುವ ಎಲ್ಲಾ ದಾಖಲೆಗಳು ಅಂದರೆ ಹಿಂಬರಹ ಪತ್ರ ಮತ್ತು ನಿಮ್ಮಲ್ಲಿರುವ ನಮೂನೆಗಳನ್ನು ತೆಗೆದುಕೊಂಡು ಹೋಗಿ ತಡ ನೊಂದಣಿಗಾಗಿ ನೀವು ಅರ್ಜಿ ಸಲ್ಲಿಸಬಹುದು.
6.ನಿಗದಿ ಪಡಿಸಿದ ದಿನಾಂಕದಂದು ಅರ್ಜಿದಾರ ಮತ್ತು ಸಾಕ್ಷಿಗಳೊಂದಿಗೆ ಹೇಳಿಕೆ ನೀಡಬೇಕು. ನಂತರ ನ್ಯಾಯಾಲಯದಿಂದ ಆದೇಶ ಪತ್ರ ದೊರೆಯುತ್ತದೆ.
7. ಆದೇಶ ಪತ್ರವನ್ನು ತೆಗೆದುಕೊಂಡು ಹೋಗಿ ಪುನಹ ತಹಸೀಲ್ದಾರ್ ಕಚೇರಿಯ ಕಚೇರಿಯ ಜನನ ಮರಣ ಭಾಗಕ್ಕೆ ಹೋಗಿ ಮರಣ ಪತ್ರಕ್ಕಾಗಿ ಅರ್ಜಿ ಸಲ್ಲಿಸಬೇಕು.
8. ಎಲ್ಲಾ ಕೆಲಸಗಳು ಪ್ರಕ್ರಿಯೆಗಳು ಮುಗಿಯಬೇಕಾದರೆ ಕನಿಷ್ಠವಾದರೂ ಒಂದು ತಿಂಗಳು ಆಗುತ್ತದೆ.

ನಿಮಗೆ ಇಲ್ಲಿ ಮುಖ್ಯವಾದ ಮಾಹಿತಿ ಇದೆ :


* ಕಡಾಯವಾಗಿ 20 ದಿನದ ಒಳಗಾಗಿ ಜನನ ಅಥವಾ ಮರಣ ಪ್ರಮಾಣದ ಪತ್ರವನ್ನು ನೀವು ಪಡೆದುಕೊಳ್ಳಬೇಕು
* ವರ್ಷದ ಒಳಗೆ ಮಾಡಿಸಿದರೆ ದಂಡದೊಂದಿಗೆ ಪತ್ರವನ್ನು ಮಾಡಿಸಿಕೊಳ್ಳುವ ಅವಕಾಶವಿದೆ.
*  ಒಂದು ವರ್ಷ ಮೇಲ್ಪಟ್ಟು ಜನನ ಅಥವಾ ಮರಣ ಪ್ರಮಾಣ ಪತ್ರಗಳನ್ನು ಪಡೆಯಬೇಕಾದರೆ ಕೋರ್ಟ್ ಗೆ ಹೋಗಿ ಭೇಟಿ ನೀಡಬೇಕಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ!

ನಿಮ್ಮ ನಿಮ್ಮ ಹತ್ತಿರದ ಕಂದಾಯ ಇಲಾಖೆಯನ್ನು ಭೇಟಿ ನೀಡಬಹುದು ಅಥವಾ ನೀವು ಯೌಟ್ಯೂಬ್ಗಳಲ್ಲಿ ಇದರ ಮಾಹಿತಿಯನ್ನು ಸಹ ಪಡೆದುಕೊಳ್ಳಬಹುದು.

Leave a Reply

Your email address will not be published. Required fields are marked *