ನಿಮ್ಮ ಪಹಣಿಯನ್ನು ಆಧಾರ್ ನೊಂದಿಗೆ ಹೇಗೆ ಲಿಂಕ್ ಮಾಡಿಕೊಳ್ಳುವುದು?
ಆತ್ಮೀಯ ರೈತ ಬಾಂಧವರೇ,
ನಿಮ್ಮ ಪಹಣಿಯನ್ನು ನಿಮ್ಮ ಆಧಾರ್ ಕಾರ್ಡಿನ ನಂಬರನ್ನು ಜೊತೆ ಲಿಂಕ್ ಮಾಡಿಸಿಕೊಳ್ಳಿ. ನೀವು ನಿಮ್ಮ ಪಹಣಿಯನ್ನು ಆಧಾರ್ ಕಾರ್ಡ್ ನಂಬರ್ ನೊಂದಿಗೆ ಲಿಂಕ್ ಮಾಡಿಸಿಕೊಳ್ಳುವುದರಿಂದ ನಿಮಗೆ ಬರುವ ಜಮೆ ಪರಿಹಾರದ ಹಣವನ್ನುನಿಮ್ಮ ಮೊಬೈಲ್ ಸ್ಟೇಟಸ್ನಿಂದಲೇ ತಿಳಿದುಕೊಳ್ಳಬಹುದು.
ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪಹಣಿಯೊಂದಿಗೆ ಲಿಂಕ್ ಮಾಡಿಕೊಂಡಿಲ್ಲವೇ? ಬನ್ನಿ ಹಾಗಿದ್ದರೆ ನೋಡೋಣ ಇದನ್ನು ಹೇಗೆ ನಿಮ್ಮ ಮೊಬೈಲ್ ನಲ್ಲಿ ಸರಳವಾಗಿ ಮಾಡಿಕೊಳ್ಳಬಹುದು ಎಂಬುದನ್ನು ತಿಳಿಸುತ್ತೇನೆ. ಮೊಬೈಲ್ ಫೋನ್ ಅಥವಾ ಸಿಸ್ಟಮ್ ನಲ್ಲಿ ಇದನ್ನು ಹೇಗೆ ಮಾಡಿಕೊಳ್ಳಬಹುದು ಎಂಬುದನ್ನು ಹಂತ ಹಂತವಾಗಿ ನೋಡೋಣ.
1.landrecords. karnatak.gov. in ನಮ್ಮ ಕರ್ನಾಟಕ ಸರ್ಕಾರದ ವೆಬ್ಸೈಟ್ ಆಗಿದ್ದು ಇದರಲ್ಲಿ ಎಲ್ಲಾ ಭೂ ದಾಖಲೆಗಳು ಇವೆ. ಓಪನ್ ಮಾಡಿಕೊಳ್ಳಿ.
2. ಹಾಗೆ ನೀವು ಸ್ಕ್ರೋಲ್ ಮಾಡಿಕೊಳ್ಳುತ್ತಾ ಕೆಳಗಡೆ ಬಂದರೆ ಅಲ್ಲಿ ಸಿಟಿಜನ್ ರೇಜಿಸ್ಟ್ರೇಷನ್ (citizen registration )ಮೇಲೆ ಕ್ಲಿಕ್ ಮಾಡಿ.
3.ಅಲ್ಲಿ ಭೂಮಿ ನಾಗರಿಕ ಸೇವೆಗಳು ಎಂದು ಓಪನ್ ಆಗುತ್ತದೆ.
4. ಮೊಬೈಲ್ ನಂಬರ್ ಅನ್ನು ಎಂಟರ್ ಮಾಡಿ.
5. ಕೆಳಗೆ ಕ್ಯಾಪ್ಚಾವನ್ನು ಎಂಟರ್ ಮಾಡಿ.
6. ಸೆಂಡ್ ಓಟಿಪಿ ಮೇಲೆ ಕ್ಲಿಕ್ ಮಾಡಿ.
7. ಒಟಿಪಿಯನ್ನು ಎಂಟರ್ ಮಾಡಿ ಲಾಗಿನ್ ಆಗಿ.
8. ಡ್ಯಾಶ್ ಬೋರ್ಡ್ ಓಪನ್ ಆಗುತ್ತದೆ.
9. ಎಡ ಭಾಗದಲ್ಲಿ ಪ್ರೊಫೈಲ್ ನಲ್ಲಿ ಲಿಂಕ್ ಆಧಾರ್ ಎಂಬ ಆಪ್ಷನ್ ಕಾಣುತ್ತದೆ.
10. ಅದರ ಮೇಲೆ ಕ್ಲಿಕ್ ಮಾಡಿ.
11. ಆಧಾರ್ ಮತ್ತು ಪಹಣಿಯಲ್ಲಿರುವಂತೆ ಹೆಸರುಗಳು ಹೊಂದಾಣಿಕೆ ಆದರೆ ಡನ್ ಎಂಬ ಆಪ್ಷನ್ ಬರುತ್ತದೆ ಅದರ ಮೇಲೆ ಕ್ಲಿಕ್ ಮಾಡಿ.
12. ನಂತರ ಕೆಳಗೆ ಸ್ಕ್ರೋಲ್ ಮಾಡಿ ಅಲ್ಲಿ ಬಟನ್ ಒತ್ತಿದರೆ ಕೊನೆಯದಾಗಿ ನಿಮಗೆ ಅತ್ತೆ ನಿಮ್ಮ ಮೊಬೈಲ್ ನಂಬರ್ ಗೆ ಇನ್ನೊಂದು ಒಟಿಪಿ ಬರುತ್ತದೆ. ವೆರಿಫೈ ಓಟಿಪಿ ಮೇಲೆ ಕ್ಲಿಕ್ ಮಾಡಿ. ಕೊನೆಯದಾಗಿ ನಿಮ್ಮ ಪಹಣಿಯನ್ನು ಆಧಾರ್ನೊಂದಿಗೆ ಲಿಂಕ್ ಮಾಡುವಿರ ಎಂದು ಹೇಳುತ್ತದೆ ನೀವು ಓಕೆ ಎಂದು ಕ್ಲಿಕ್ ಮಾಡಿ.
ಅದನ್ನು ಹಾಕಿದರೆ ಆಪ್ಷನ್ ಬರುತ್ತದೆ ಅದನ್ನು ಒತ್ತಿದರೆ ಆಯ್ತು ನಿಮ್ಮ ಆಧಾರ್ ಕಾರ್ಡ್ ನೊಂದಿಗೆ ಪಹಣಿಯು ಲಿಂಕ್ ಆಗಿರುತ್ತದೆ.
ಆಡುವುದರಿಂದ ನಿಮ್ಮ ಆಧಾರ್ ಅನ್ನು ಪಹಣಿಯೊಂದಿಗೆ ಸುಲಭವಾಗಿ ನಿಮ್ಮ ಮೊಬೈಲ್ ನಲ್ಲಿ ಅಥವಾ ಸಿಸ್ಟಮ್ ನಲ್ಲಿ ಮನೆಯಲ್ಲಿ ಕುಳಿತುಕೊಂಡು ಲಿಂಕ್ ಮಾಡಬಹುದು.