ಕೂಲಿ ಕಾರ್ಮಿಕರಿಗೆ ಆಧಾರವಾಗಲಿದೆ ಉದ್ಯೋಗ ಖಾತ್ರಿ ಯೋಜನೆ.
ಉದ್ಯೋಗ ಖಾತ್ರಿ ಯೋಜನೆ ಏಪ್ರಿಲ್ 1 ರಿಂದ ಆರಂಭ.

ಆತ್ಮೀಯ ರೈತ ಬಾಂಧವರೇ,
ಬರಗಾಲದಿಂದಾಗಿ ರೈತರು ಮತ್ತು ಕೂಲಿ ಕಾರ್ಮಿಕರು ಬಹಳಷ್ಟು ಸಂಕಷ್ಟವನ್ನು ಮಳೆ ಬಾರದ ಕಾರಣ ಜೀವನ ಸಾಗಿಸಲು ಪರದಾಡುತ್ತಿದ್ದಾರೆ. ಪರಿಹಾರವೆಂಬಂತೆ ಏಪ್ರಿಲ್ ಏಪ್ರಿಲ್ 1ರಂದು ಉದ್ಯೋಗ ಖಾತ್ರಿ ಯೋಜನೆಯನ್ನು ಆರಂಭ ಮಾಡಬೇಕೆಂದು ನಿರ್ಧರಿಸಿದೆ. ಮಳೆ ಬಾರದ ಕಾರಣ ಹೊಲಗಳಲ್ಲಿ ಕೆಲಸವಿಲ್ಲದೆ ಹಳ್ಳಿ ಜನರ ತುಂಬಾ ಸಂಕಷ್ಟಕ್ಕೆ ಇದಾಗಿದ್ದಾರೆ. ಹೊಲಗಳಲ್ಲಿ ಕೆಲಸವಿಲ್ಲದೆ ಅವರು ಪರದಾಡು ದಾಡುತ್ತಿದ್ದಾರೆ. ಮುಂದೆ ಬರುವ ಮುಂಗಾರಿನಲ್ಲಿ ತಮ್ಮ ಬೆಳೆಗಳನ್ನು ಬೆಳೆದುಕೊಳ್ಳಲು ಕೂಡ ಅವರಲ್ಲಿ ಹಣವಿಲ್ಲ. ಕೈ ಖಾಲಿ ಮಾಡಿಕೊಂಡಿರುವ ರೈತರಿಗೆ ಸರ್ಕಾರವು ಒಂದು ಒಳ್ಳೆಯ ಅವಕಾಶವನ್ನು ನೀಡುತ್ತಿದೆ.


ಉದ್ಯೋಗ ಖಾತ್ರಿ ಯೋಜನೆ ಅಡಿ 100 ದಿನಗಳ ಕೆಲಸವನ್ನು ಪಂಚಾಯಿತಿ ವತಿಯಿಂದ ನೀಡಲಾಗುತ್ತದೆ. ಕಾರ್ಮಿಕ ನೂರು ದಿನಗಳ ಕಾಲ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಮಾಡಬಹುದು. ಬೇಸಿಗೆಯಲ್ಲಿ 60 ದಿನಗಳ ಕಾರ್ಯವನ್ನು ಅವರು ಪಡೆದುಕೊಂಡರೆ, ಹಣದಿಂದ ಅವರು ಮುಂಬರುವ ಮುಂಗಾರಿನಲ್ಲಿ ಬೀಜ ಗೊಬ್ಬರಗಳನ್ನು ತೆಗೆದುಕೊಂಡು ಮೊಲದ ಉಳುಮೆಯನ್ನು ಮಾಡಿಕೊಂಡು ಅದರಿಂದ ಬಂದ ಹಣದಲ್ಲಿ ತಮ್ಮ ಜೀವನವನ್ನು ಸಾಗಿಸಬಹುದು. ಇದನ್ನು ಲಕ್ಷದಲ್ಲಿ ತೆಗೆದುಕೊಂಡ ಸರ್ಕಾರವು ಉದ್ಯೋಗ ಖಾತ್ರಿ ಯೋಜನೆಯನ್ನು ಏಪ್ರಿಲ್ ಒಂದರಿಂದ ಪ್ರಾರಂಭಿಸಬೇಕೆಂದು ನಿರ್ಧರಿಸಿದೆ.. ಬೇಸಿಗೆಯಲ್ಲಿ ಕೆಲಸಗಳು ಇಲ್ಲದ ಕಾರಣ ಕೂಲಿ ಕಾರ್ಮಿಕರಿಗೆ ತುಂಬಾ ಕಷ್ಟಕರವಾಗುತ್ತಿದೆ. ಒಂದು ಹೊತ್ತಿನ ಊಟವನ್ನು ಹೊಂದಿಸಲು ಅವನು ಪರದಾಡಬೇಕಾಗುತ್ತದೆ.

ಬರಗಾಲವಿದೆ ಎಂದು ಗ್ರಾಮೀಣ ಪ್ರದೇಶದ ರೈತ, ಕೃಷಿ ಕೂಲಿಕಾರರಿಗೆ ಭಯಬೇಡ. ಏ.1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾ ಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರು ಸಹ ಯೋಜನೆ ಸದುಪಯೋಗಪಡೆದುಕೊಳ್ಳಬೇಕು. ಇದರಿಂದ ಗ್ರಾಮೀಣ ಜನರು ಕುಳೆ ಹೋಗುವುದನ್ನು ತಪ್ಪಿಸಲು ಸರ್ಕಾರವು ಈ ಯೋಜನೆಯನ್ನು ಜಾರಿ ತಂದಿದೆ. ಈ ಯೋಜನೆಯ ಅಡಿ ಕಡುಬಡವರಾದವರು ಈ ಯೋಜನೆಯಲ್ಲಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸಬಹುದಾಗಿದೆ.

60 ದಿನಗಳ ಕೆಲಸ ಮಾಡಿದರೆ ಸುಮಾರು 18 ಸಾವಿರ ರೂಪಾಯಿಗಳು ದೊರೆಯುವವು.  ಈ ಹಣದಲ್ಲಿ ಬೀಜ, ಗೊಬ್ಬರ ಮತ್ತು ಭೂಮಿಗೆ ಏನೇನು ಬೇಕು ಅಥವಾ ಕೃಷಿ ಬಿತ್ತನೆ ಸಾಮಗ್ರಿಗಳನ್ನು ತೆಗೆದುಕೊಳ್ಳಬಹುದು. ಇದರಿಂದ ಕೂಲಿ ಕಾರ್ಮಿಕರು ನೆಮ್ಮದಿಯಿಂದ ತಮ್ಮ ಜೀವನವನ್ನು ಸಾಗಿಸಬಹುದು. ಸದ್ಯದಲ್ಲಿ ಅಂದರೆ ಏಪ್ರಿಲ್ ಒಂದರಿಂದ ಉದ್ಯೋಗ ಖಾತ್ರಿ ಯೋಜನೆ ಪ್ರಾರಂಭವಾಗಲಿದೆ ಎಲ್ಲರೂ ಇತರ ಉಪಯೋಗಗಳನ್ನು ಪಡೆದುಕೊಳ್ಳಬೇಕು.


Leave a Reply

Your email address will not be published. Required fields are marked *