ರೈತರಿಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು?

ಆತ್ಮೀಯ ರೈತ ಬಾಂಧವರೇ,
ನಿಮಗೆ ಲಭ್ಯ ವಿರುವ ಸಾಲಗಳು ಅಥವಾ ಲೋನ್ಗಳ ಬಗ್ಗೆ ನಿಮಗೆಷ್ಟು ಗೊತ್ತು? ಒಂದು ವೇಳೆ ನಿಮಗೆ ಗೊತ್ತಿರದ ಸಾಲಗಳು ಅಥವಾ ಲೋನ್ ಬಗ್ಗೆ ನಿಮಗೆ ಗೊತ್ತಿಲ್ಲದಿದ್ದರೆ ಇಲ್ಲಿ ತಿಳಿದುಕೊಳ್ಳೋಣ ಬನ್ನಿ. ರೈತರಿಗೆ ಸಿಗುವ ಸಾಲಗಳ ಪ್ರಕಾರಗಳು ಎಷ್ಟು? ಎಷ್ಟು ರೂಪಾಯಿಗಳವರೆಗೆ ರೈತರಿಗೆ ಸಾಲ ದೊರೆಯುತ್ತದೆ.? ಬನ್ನಿ ಎಲ್ಲ ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.

ರೈತರಿಗೆ ಸಿಗುವ ಸಾಲದ ವಿಧಗಳು ಯಾವುವು ಎಂಬುದನ್ನು ನೋಡೋಣ.
1. ವಾರ್ಷಿಕ ಬೆಳೆ ಸಾಲ ಅಥವಾ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲ.
2. ಮಧ್ಯಂತರ ರ ಸಾಲ
3. ದೀರ್ಘವದಿ ಸಾಲ
ಮುಖ್ಯವಾಗಿ ಈ ಮೂರು ಪ್ರಕಾರದ ಸಾಲುಗಳು ರೈತನಿಗೆ ಬ್ಯಾಂಕ್ನಿಂದ ದೊರೆಯುತ್ತವೆ.
* ಮೊದಲನೇದಾಗಿ ವಾರ್ಷಿಕ ಬೆಳೆ ಸಾಲ ಎಂದರೇನು ನೋಡೋಣ.
ರೈತರ ಆಧಾರ್ ಕಾರ್ಡ್ ಜಮೀನಿನ ಪಹಣಿಯನ್ನು ನಿಮ್ಮ ಹತ್ತಿರದ ಬ್ಯಾಂಕ್ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ನೀಡಿದರೆ ತಕ್ಷಣವೇ ನಿಮಗೆ ಸಾಲ ಮಂಜೂರಾಗುತ್ತದೆ ಇದನ್ನು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವೆಂದು ಕರೆಯುತ್ತಾರೆ. ವನ್ನು ಪಡೆಯಲು ನೀವು ಆ ಬ್ಯಾಂಕಿನಲ್ಲಿ ಅಥವಾ ಸಂಸ್ಥೆಯಲ್ಲಿ ನೀಡುವ ನಮೂನೆ ಅರ್ಜಿಯನ್ನು ತುಂಬಿ ಕೊಡಬೇಕಾಗುತ್ತದೆ .
*ಈ ಸಾಲಗಳು ಖುದ್ದಾಗಿ ರೈತರಿಗೆ ಇರುವ ಕಾರಣ ಯಾವುದೇ ಸಾಕ್ಷಿಗಳ ಅವಶ್ಯಕತೆ ಎಲ್ಲಿ ಇರುವುದಿಲ್ಲ
* ಸಾಲ ಅತಿ ಬೇಗನೆ ಸಿಗುತ್ತದೆ ಮತ್ತು ಇದರ ಬಡ್ಡಿ ದರವು ಕೇವಲ ನಾಲ್ಕು ಪರ್ಸೆಂಟ್ ಆಗಿರುತ್ತದೆ.
* ಯೋಜನೆ ಅಡಿ ಜಮೀನನ್ನು ಒತ್ತೆ ಇಡುವ ಪ್ರಸಂಗ ಬರುವುದಿಲ್ಲ.
* ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ಈ ಸಾಲವನ್ನು ಪಡೆದರೆ ಬಡ್ಡಿ ರಹಿತವಾಗಿ ಈ ಸಾಲವನ್ನು ರೈತರಿಗೆ ನೀಡಲಾಗುತ್ತದೆ.
# ಮಧ್ಯಮಾವಧಿಯ ಸಾಲಗಳ ಬಗ್ಗೆ ನೋಡೋಣ.
* ಗಳನ್ನು ಬೆಳೆ ಬೆಳೆಯ ಉದ್ದೇಶಕ್ಕಾಗಿ ಮತ್ತು ಸಣ್ಣ ನೀರಾವರಿ ಮಾಡಿಕೊಳ್ಳುವುದಕ್ಕಾಗಿ ನೀಡಲಾಗುತ್ತದೆ.
* ಐದು ವರ್ಷದ ಮುದ್ದತ್ತು ಸಾಲ ಹತ್ತು ಲಕ್ಷದವರೆಗೆ ಈ ಹಣವನ್ನು ನೀಡಲಾಗುತ್ತದೆ.
* ನೀರವರಿ ಉದ್ದೇಶ ಪೈಪ್ ಲೈನ್ ಖರೀದಿ ಸಣ್ಣ ಚಟುವಟಿಕೆಗಳನ್ನು ಮಾಡಿಕೊಳ್ಳಲು ಈಗ ಸಾಲವನ್ನು ರೈತರಿಗೆ ನೀಡಲಾಗುತ್ತದೆ.
* ಈ ಸಲಕ್ಕಾಗಿ ಆರ್ ಟಿ ಸಿ ಮತ್ತು ನೋಡಿ ಸರ್ಟಿಫಿಕೇಟ್ ಗಳು ಕಡ್ಡಾಯವಾಗಿ ಬೇಕೆ ಬೇಕು.
* ಕಡ್ಡಾಯಾವಾಗಿ ನೋಂದಣಿ ಮಾಡಿಸಿಕೊಳ್ಳಬೇಕು.

ದೀರ್ಘವದಿ ಸಾಲಗಳ ಬಗ್ಗೆ ನೋಡೋಣ.
* ಭೂಮಿ ಅನ್ನು ಅಭಿವೃದ್ಧಿ ಮಾಡಲು ಸುಮಾರು 20 ಲಕ್ಷದವರೆಗೆ ಈ ಸಾಲವನ್ನು ನೀಡಲಾಗುತ್ತದೆ.
*ಪಾಳು ಬಿದ್ದ ಭೂಮಿಯನ್ನು ಸುಧಾರಣೆ ಮಾಡಿಕೊಳ್ಳಲು ಈ ಸಾಲವನ್ನು ಉಪಯೋಗಿಸಿಕೊಳ್ಳಬಹುದು.
* ಇದಕಾಗಿ ನೀವು ಬೇಕಾದ ಎಲ್ಲ ದಾಖಲೆಗಳನ್ನು ಕೂಡ ಕಡ್ಡಾಯವಾಗಿ ಹೊಂದಿಸಲೇಬೇಕಾಗುತ್ತದೆ.
*ಹೈನುಗಾರಿಕೆ ಮತ್ತು ಮೀನುಗಾರಿಕೆಗಳನ್ನು ಮಾಡಲು ಪ್ರತ್ಯೇಕವಾಗಿ ಸಾಲವನ್ನು ನೀಡಲಾಗುತ್ತದೆ.
* ಬ್ಯಾಂಕಿನಲ್ಲಿ ತೆಗೆದುಕೊಳ್ಳುವ ಬಡ್ಡಿಗಳಿಗೆ ಸಾಲವಿರುತ್ತದೆ. ಆದರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳಲ್ಲಿ ತೆಗೆದುಕೊಳ್ಳುವ ಸಾಲಕ್ಕೆ ಯಾವುದೇ ರೀತಿಯ ಸಾಲ ಇರುವುದಿಲ್ಲ.








Leave a Reply

Your email address will not be published. Required fields are marked *