ಬೇಸಿಗೆಯಲ್ಲಿ ಮೇವಿನ ಕೊರತೆಯಿಂದ ಯೋಚಿಸುತ್ತಿರುವ ರೈತನಿಗೆ ಇಲ್ಲೊಂದಿದೆ ರಾಮಬಾಣ!!

ಆತ್ಮೀಯ ರೈತ ಬಾಂಧವರೇ,
ನಿಮ್ಮ ಮನೆಯಲ್ಲಿ ಆಕಳು ಮತ್ತು ಕುರಿ ಇದ್ದು ಅದು ಕಡಿಮೆ ಹಾಲನ್ನು ನೀಡುತ್ತಿದೆಯೇ? ನಿಮ್ಮ ಆಕಳು ಮತ್ತು ಕುರಿ ಹೆಚ್ಚು ಹಾಲನ್ನು ನೀಡಲು ನೀವು ಯಾವ ಯಾವ ಆಹಾರವನ್ನು ಅವುಗಳಿಗೆ ನೀಡಬೇಕು?ಆಕಳು ಮತ್ತು ಕುರಿಯ ಹೆಚ್ಚು ಹಾಲನ್ನು ಕೊಡಲು ಏನು ಮಾಡಬೇಕು? ಯಾವ ರೀತಿಯ ಆಹಾರವನ್ನು ನೀಡಿದರೆ ಆಕಳು ಮತ್ತು ಕುರಿ ಅತಿ ಹೆಚ್ಚು ಹಾಲನ್ನು ಕೊಡುತ್ತದೆ.
70 ರಿಂದ 85 ದಿನದ ಮೆಕ್ಕೆಜೋಳ ಅಥವಾ ಜೋಳದ ಗಣಿಕೆಗಳನ್ನು ತಂದು ಅದನ್ನು ಸೈಲೆಜ್ ಮಾಡುವ ಮುಖಾಂತರ ಪಶುಗಳಿಗೆ ನೀಡುವುದರಿಂದ ಹಾಲಿನಲ್ಲಿ ಏರಿಕೆಯನ್ನು ಕಾಣಬಹುದು ಎಂದು ರೈತರು ಹೇಳುತ್ತಾರೆ.
ಹಾಗಾದರೆ ಉತ್ತಮ ಗುಣಮಟ್ಟದ ಸೈಲೆಜನ್ನು ಹೇಗೆ ತಯಾರಿಸುತ್ತಾರೆ ಎಂದು ನೋಡೋಣ. ಸೈಲೇಜ್ ಅನ್ನು ತಯಾರಿಸಲು ಯಾವ ಯಾವ ಪದಾರ್ಥಗಳು ಬೇಕು ಅದನ್ನು ನೋಡೋಣ.
ಸೈಲೆಜ್ ಮಾಡಲು ಅತಿ ಪ್ರಮುಖವಾಗಿ ಬಳಸುವ ಬೆಳೆ ಎಂದರೆ ಅದು ಮೆಕ್ಕೆಜೋಳ. 70 ರಿಂದ 85 ದಿನದ ಮೆಕ್ಕೆಜೋಳವನ್ನು ತೆಗೆದುಕೊಂಡು ಬಂದು ಅದನ್ನು ಚಿಕ್ಕದಾಗಿ ಕತ್ತರಿಸಿ ಮತ್ತೆ ಮರಡಿ ಅದನ್ನು ಬ್ಯಾಗ್ ಗಳಲ್ಲಿ ತುಂಬಿ ಸೈಲೆಜನಾಗಿ ಮಾಡಿ ರೈತರಿಗೆ ಒದಗಿಸಲಾಗುತ್ತದೆ. ಬೇಸಿಗೆ ಕಾಲವಿರುವುದರಿಂದ ಒಣ ಮೆವು ದೊರಕದ ಕಾರಣ ಈ ಶೈಲೇಜನ್ನು ಒಂದು ಉತ್ತಮವಾದ ಆಹಾರವಾಗಿ ಪಶುಗಳಿಗೆ ಬಳಸಬಹುದು. ಆರ್ಗ್ಯಾನಿಕ್ ಬೆಲ್ಲವನ್ನು ಉಪಯೋಗ ಮಾಡುವುದರಿಂದ ಶೈಲೇಜಿನಲ್ಲಿ ಅತಿ ಹೆಚ್ಚು ರುಚಿಕರವಾಗಿ ಬರುತ್ತದೆ. ಬೆಲ್ಲ ಮತ್ತು ಉಪ್ಪನ್ನು ಬಳಸುವುದರಿಂದ ಸೈಲೆಜ್ ಅತಿ ರುಚಿಕರವಾಗಿ ಇದನ್ನು ಕುರಿ ಆಕಳು ಎಲ್ಲವುಗಳಿಗೂ ಕೂಡ ಹಾಕಬಹುದು ಇದರಿಂದ ಹಾಲಿನಲ್ಲಿ ಅತಿ ಹೆಚ್ಚು  ಏರಿಕೆ ಕಂಡು ಬರುತ್ತದೆ. ನಿಮಗೆ ನೇರವಾಗಿ ತಯಾರಿಸಿದ ಸೈಲೇಜ್ ಬೇಕಾದರೆ ಈ ಕೆಳಗಿನ ನಂಬರ್ಗೆ ಸಂಪರ್ಕಿಸಿರಿ ಅವರು ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನೀಡುತ್ತಾರೆ.
ಶೈಲೇಶ ಎಂಬುದು ಒಂದು ಮೇವಿನ ವಿಧಾನ ವಾಗಿದ್ದು, ಮೇವಿನ ಬೆಳೆಗಳಾದ ಜೋಳ ಮತ್ತು ಮೆಕ್ಕೆಜೋಳವನ್ನು ಚೆನ್ನಾಗಿ ಕತ್ತರಿಸಿ ಅದಕ್ಕೆ ಬೆಲ್ಲ ಮತ್ತು ಉಪ್ಪನ್ನು ಸೇರಿಸಿ ಹುದುಗುವಿಕೆ ಕ್ರಿಯೆಗೆ ಒಳಪಡಿಸಿ ಶೇಖರಿಸಿ ಇಟ್ಟುಕೊಂಡು ದನಗಳಿಗೆ ಯಾವಾಗ ಬೇಕು ಅವಾಗ ಅದನ್ನು ಹಾಕಿಕೊಳ್ಳಬಹುದು. ಈ ಶೈಲಜನ್ನು ಆಹಾರವಾಗಿ ಬಳಸುವುದರಿಂದ ಹಾಲಿನಲ್ಲಿ ಅತಿ ಹೆಚ್ಚು ಇಳುವರಿಯನ್ನು ಕಾಣಬಹುದು. ಇದರಿಂದಾಗುವ ಇನ್ನೊಂದು ಲಾಭವೆಂದರೆ ಮೇವನ್ನು ಸಣ್ಣದಾಗಿ ಕತ್ತರಿಸುವುದರಿಂದ ಯಾವುದೇ ರೀತಿಯ ಮೇವು ವೇಸ್ಟ್ ಆಗುವುದಿಲ್ಲ. ಉದ್ದನೆಯದಾಗಿ ಮೇವು ಹಾಕಿದರೆ ಕೆಳಗಡೆ ಬಿದ್ದು ಮೇವು ಹಾಳಾಗುತ್ತದೆ, ಈ ರೀತಿ ಸಣ್ಣದಾಗಿ ಕತ್ತರಿಸಿದ ದನಗಳಿಗೆ ನೀಡುವುದರಿಂದ ಅವುಗಳ ಆರೋಗ್ಯವೂ ಕೂಡ ಸುಧಾರಿಸುತ್ತದೆ ಮತ್ತು ಮೇವನು ಸಮರ್ಪಕವಾಗಿ ಕೂಡ ಬಳಸಿದಂತಾಗುತ್ತದೆ.


ದೂರವಾಣಿ ಸಂಖ್ಯೆ :8694951035/9902059159


Leave a Reply

Your email address will not be published. Required fields are marked *