ಆತ್ಮೀಯ ರೈತ ಬಾಂಧವರೇ,

ನಿನ್ನೆ ಅಷ್ಟೇ ಬಿಡುಗಡೆಯದ ರಾಜ್ಯ ಸರ್ಕಾರದ ಬಜೆಟ್ ಮಂಡನೆ ಕುರಿತು ನೋಡೋಣ.

ಹೈನುಗಾರಿಕೆ ಮೀನುಗಾರಿಕೆ ರೇಷ್ಮೆ ಸಾಕಾಣಿಕೆ ಜೇನು ಸಾಕಾಣಿಕೆ ಮತ್ತು ಕೃಷಿ ವಲಯದ ವಿವಿಧ ವಲಯಗಳಿಗೆ ಎಷ್ಟೆಷ್ಟು ಅನುದಾನ ಬಿಡುಗಡೆ ಮಾಡಲಾಗಿದೆ ಅಥವಾ ಲಾಭಗಳನ್ನು ನೀಡಲಾಗಿದೆ ಎಂದು ನೋಡೋಣ.

ಸರ್ಕಾರದ ಬಜೆಟ್ ನಲ್ಲಿ ಕೃಷಿ ಕ್ಷೇತ್ರಕ್ಕೆ ಏನೇನು ಸವಲತ್ತುಗಳನ್ನು ನೀಡಲಾಗಿದೆ. ರೈತನಿಗೆ ಸಹಾಯವಾಗುವಂತೆ ಯಾವ ಯಾವ ಯೋಜನೆಗಳನ್ನು ಜಾರಿಗೊಳಿಸಲಾಗಿದೆ.

*ಮೀನುಗಾರಿಕೆ ವೇಳೆ ಅಫಘಾತ ಉಂಟಾದರೆ ಚಿಕಿತ್ಸೆಗಾಗಿ ಸಮುದ್ರ ಅಂಬುಲೆನ್ಸ್

*ಮತ್ಯ ಆಶಾಕಿರಣ ಯೋಜನೆಯಡಿಯಲ್ಲಿ ನೀಡುವ ಪರಿಹಾರ 1500ದಿಂದ 3000ರೂಪಾಯಿಗೆ ಏರಿಕೆ

*ಆಲಮಟ್ಟಿಯಲ್ಲಿ ಒಳನಾಡು ಕೌಶಲ್ಯಾಭಿವೃದ್ಧಿ ಕೇಂದ್ರ

*ಮುರುಡೇಶ್ವರದಲ್ಲಿ ಮೀನುಗಾರಿಕ ಹೊರಬಂದರು ನಿರ್ಮಾಣ

*ಭದ್ರವತಿಯಲ್ಲಿ ಅತ್ಯಾಧುನಿಕ ಮೀನುಮಾರುಕಟ್ಟೆ ಸ್ಥಾಪನೆ

*ಹೊನ್ನಾವರ ತಾಲ್ಲೂಕಿನ ಕಾಸರಕೋಡದಲ್ಲಿ ಮೀನುಗಾರಿಕೆ ಸಂಶೋಧನಾ ಕೇಂದ್ರ

*ಮೀನುಗಾರಿಕೆ ಕ್ಷೇತ್ರಕ್ಕೆ 3000 ಕೋಟಿ ರೂಪಾಯಿ ಮೀಸಲಿಟ್ಟು ಆ ಮೂಲಕ ವಿವಿಧ ಯೋಜನೆಗಳ ಅನುಷ್ಠಾನ ಮಾಡಲಿದ್ದೇವೆ ಅಂತ ಸಿದ್ದರಾಮಯ್ಯ ಹೇಳಿದ್ದಾರೆ

*ಸಂಚಾರಿ ಕುರಿಗಾಹಿಗಳಿಗೆ ಗುರುತಿನ ಚೀಟಿ ತೆಗೆದುಕೊಳ್ಳಲು ಕ್ರಮ

*ವಲಸೆ ಕುರಿಗಾಹಿಗಳ ಮತ್ತು ಸ್ವತ್ತುಗಳ ಮೇಲೆ ದೌರ್ಜನ್ಯ ತಡೆ ಕಾಯ್ದೆ ಜಾರಿ

*ಹೈನುಗಾರಿಕೆ ಮಾಡುವ ಮಹಿಳೆಯರಿಗೆ ಹಸು ಎಮ್ಮೆ ಖರೀದಿ ಸಾಲಕ್ಕೆ ಶೇ6ರಷ್ಟು ಬಡ್ಡಿ ಸಹಾಯಧನವನ್ನ ರಾಜ್ಯ ಸರ್ಕಾರ ಭರಿಸುತ್ತೆ

*ಬೈವೋಲ್ಟಿ ರೇಷ್ಮೆಗೂಡಿಗಳಿಗೆ ನೀಡುತ್ತಿರುವ ಸಹಾಯ ಧನ 10ರೂಪಾಯಿಯಿಂದ 30ರೂಗೆ ಏರಿಕೆ

*ಸಾಂಬಾರು ಪದಾರ್ಥ ಬೆಳೆಗಳನ್ನ ಪ್ರೋತ್ಸಾಹಿಸೋಕೆ ಚಿಕ್ಕಮಗಳೂರಿನಲ್ಲಿ ಸೈಸ್ ಪಾರ್ಕ್‌ ಅಭಿವೃದ್ಧಿ

*ಪುಷ್ಪಬೆಳೆಗಳ ಉತ್ತೇಜನಕ್ಕಾಗಿ ಖಾಸಗೀ ಸಹಭಾಗಿತ್ವದಲ್ಲಿ ಬೆಂಗಳೂರಿನಲ್ಲಿ ಅಂತರಾಷ್ಟ್ರೀಯ ಮಟ್ಟದ ಪುಷ್ಪ ಮಾರುಕಟ್ಟೆ ಸ್ಥಾಪನೆ

*ಕೃಷಿ ಕ್ಷೇತ್ರವನ್ನ ಉತ್ತೇಜಿಸುವುದಕ್ಕಾಗಿ ಕೃಷಿ ವಲಯದ ಸ್ಟಾರ್ಟ್‌ಅಪ್‌ಗಳ ಸ್ಥಾಪನೆ.

*ಕೃಷಿ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆ, ರಫ್ತು ಹೆಚ್ಚಿಸಲು ರಾಜ್ಯದ ವಿಮಾನ ನಿಲ್ದಾಣಗಳ ಹತ್ತಿರದಲ್ಲಿ ಆಹಾರ ಪಾರ್ಕ್‌ ಸ್ಥಾಪನೆ.

*5 ವರ್ಷಗಳಲ್ಲಿ ನರೇಗಾ ಸ್ಕಿಮ್ ಅಡಿಯಲ್ಲಿ 5000 ಸಣ್ಣ ಸರೋವರಗಳ ನಿರ್ಮಾಣ.

*ಸಿರಿ ಧಾನ್ಯ ಬೆಳೆಯೋದು, ಮೌಲ್ಯವರ್ಧನೆ ಮತ್ತು ಮಾರ್ಕೆಟಿಂಗ್‌ಗೆ ‘ನಮ್ಮ ಮಿಲ್ಲೆಟ್’ ಹೊಸ ಕಾರ್ಯಕ್ರಮ.

*ಕಣ್ಮರೆಯಾಗುತ್ತಿರೋ ಸ್ಥಳೀಯ ಬೆಳೆ ತಳಿ ರಕ್ಷಣೆಗೆ ಸಿದ್ದು ‘ಬೀಜ ಬ್ಯಾಂಕ್’ ಘೋಷಣೆ ಮಾಡಿದ್ದಾರೆ.

*ಸಿದ್ದು ಸರ್ಕಾರ ಮೊದಲ ಅವಧಿಯ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿ. ಇದಕ್ಕಾಗಿ 200 ಕೋಟಿ ಅನುದಾನ.

*ಸಿದ್ದು ಸರ್ಕಾರ ಮೊದಲ ಅವಧಿಯ ಕೃಷಿ ಭಾಗ್ಯ ಯೋಜನೆ ಮತ್ತೆ ಜಾರಿ. ಇದಕ್ಕಾಗಿ 200 ಕೋಟಿ ಅನುದಾನ.

*ಇದೇ ಉದ್ದೇಶಕ್ಕೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ

*ಕೃಷಿ, ಪಶುಸಂಗೋಪನೆ, ತೋಟಗಾರಿಕೆ, ಹೈನುಗಾರಿಕೆ ಎಲ್ಲವೂ ಸೇರಿ ಸಮಗ್ರ ಕೃಷಿ ಮಾಡಿ ಲಾಭ ಗಳಿಸಲು ರೈತರಿಗೆ ಬೆಂಬಲ