ಬಾಗಲಕೋಟೆಯಲ್ಲಿ ಮೂರು ದಿನಗಳ ಕಾಲ ತೋಟಗಾರಿಕಾ ಮೇಳ

ಆತ್ಮೀಯ ರೈತ ಬಾಂಧವರೇ, ಇಂದಿನಿಂದ ಮೂರು ದಿನಗಳ ಕಾಲ ಬಾಗಲಕೋಟೆ ತೋಟಗಾರಿಕಾ ವಿಶ್ವವಿದ್ಯಾಲಯದಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ. ಫೆಬ್ರುವರಿ 10 ರಿಂದ ಫೆಬ್ರುವರಿ 12ರವರೆಗೆ ಮೂರು ದಿನಗಳ ಕಾಲ ತೋಟಗಾರಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

 

ಫೆಬ್ರವರಿ 10 ಅಂದರೆ ಬೆಳಗ್ಗೆ 11 ಗಂಟೆಗೆ ಶ್ರೀ ಸಿದ್ದರಾಮಯ್ಯನವರು ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಫಲಶ್ರೇಷ್ಠ ರೈತರಿಗೆ ಸನ್ಮಾನ ಮಾಡಲಿದ್ದಾರೆ. ಮೂರು ದಿನಗಳ ಕಾಲ ನಡೆಯುವ ತೋಟಗಾರಿಕಾ ಮೇಳದಲ್ಲಿ  ರಾಜಕೀಯ ಗಣ್ಯ ವ್ಯಕ್ತಿಗಳಲ್ಲ ಭಾಗವಹಿಸಲಿದ್ದಾರೆ.

 

ಕಾರ್ಯಕ್ರಮದ ವಿವರಗಳು:
* ಫಲಶ್ರೇಷ್ಠ ರೈತರಿಗೆ ಸನ್ಮಾನ ಕಾರ್ಯಕ್ರಮ
*ಬರ ಸಹಿಷ್ಣುತೆಗಾಗಿ ಬರ  ನಿರ್ವಹಣಾ ಕ್ರಮಗಳು
* ಕಿರು ಸಂಸ್ಕರಣ ಘಟಕಗಳಾಗಿ ರೈತರ ತೋಟಗಳು
* ಸಮಗ್ರ ತೋಟಗಾರಿಕಾ ನಿರ್ವಹಣಾ ಕ್ರಮಗಳು :ಸವಾಲು ಗಳು ಮತ್ತು ಸಾಧ್ಯತೆಗಳು.
* ಭೌಗೋಳಿಕ ಮಾನ್ಯತೆ ಪಡೆದ ತೋಟಗರಿಕ ಕ ಬೆಳೆಗಳ ಮಹತ್ವದ ಕುರಿತು ತಾಂತ್ರಿಕ ಗೋಷ್ಠಿಗಳು ನಡೆಯಲಿವೆ.


*ಬರ ಪರಿಸ್ಥಿತಿಯಲ್ಲಿ ತೋಟಗಾರಿಕಾ ಬೆಳೆಗಳ ನಿರ್ವಹಣಾ ತಾಂತ್ರಿಕತೆಗಳು ಬರ ಸಹಿಷ್ಣು ಬೆಳೆಗಳು : ಡ್ರಾಗನ್ ಹಣ್ಣು, ಅಂಜೂರ,ಸೀತಾಫಲ, ನೇರಳೆ, ಬೇಲ, ಚವಳಿಕಾಯಿ,ಚೆಂಡು ಹೂ, ಇತ್ಯಾದಿ
*ನೀರು ಸಂರಕ್ಷಣೆಗಾಗಿ ಹೊದಿಕೆ ತಂತ್ರಜ್ಞಾನ
*ಸ್ವಯಂ ಚಾಲಿತ ನೀರಾವರಿ ವ್ಯವಸ್ಥೆ ಮತ್ತು ರಸಾವರಿ ಮಾದರಿಗಳು
*ಕೃಷಿ ಹೊಂಡ / ತುಂತುರು ನೀರಾವರಿ / ಹನಿ ನೀರಾವರಿ


*ಮಳೆ ನೀರು ಕೊಯ್ದು ಮತ್ತು ಅಂತರ್ಜಲ ಮರುಪೂರಣ
*ಸಾವಯವ ಕೃಷಿಯಲ್ಲಿ ಹಣ್ಣಿನ ಬೆಳೆಗಳ ಪ್ರಾತ್ಯಕ್ಷಿಕೆ
*ತರಕಾರಿ ಮತ್ತು ಹೂ ಬೆಳಗಳ ಪ್ರಾತ್ಯಕ್ಷಿಕೆ
*ಬರ ನಿರ್ವಹಣೆಗೆ ಪರ್ಯಾಯ ಬೆಳೆಗಳ ಆಯ್ಕೆ
*ಸಿರಿ ಫಲಗಳ ಪ್ರಾತ್ಯಕ್ಷಿಕೆ
*ದ್ರಾಕ್ಷಿ ತಳಿಗಳ ಪ್ರಾತ್ಯಕ್ಷಿಕೆ
*ಔಷಧಿ ಮತ್ತು ಸುಗಂಧ ದ್ರವ್ಯ ಬೆಳೆಗಳ ಪ್ರದರ್ಶನ
* ಕೃಷಿ ಅರಣ್ಯದಲ್ಲಿ ತೋಟಗಾರಿಕಾ ಬೆಳೆಗಳು
*ಫಲ ಪುಷ್ಪ ಪ್ರದರ್ಶನ


*ಸಮಗ್ರ ಮತ್ತು ಸುಸ್ಥಿರ ಕೃಷಿ ಪದ್ಧತಿಗಳು+ ಜೇನು ಕೃಷಿ – ಮಧುವನ ಪ್ರದರ್ಶನ
*ರಾಸಾಯನಿಕ /ಸಾವಯವ ಗೊಬ್ಬರಗಳು ಹಾಗೂ ಪೀಡೆನಾಶಕಗಳು.
*ಶ್ರೇಷ್ಠ ತೋಟಗಾರಿಕಾ ರೈತ ಪ್ರಶಸ್ತಿ ಪ್ರದಾನ
*ಮಣ್ಣಿನ ವಿವಿಧ ಮಾದರಿಗಳ ಪ್ರಾತ್ಯಕ್ಷಿಕೆ
*ತೋಟಗಾರಿಕಾ ಉತ್ಪನ್ನಗಳ ಮೌಲ್ಯವರ್ಧನೆ
*ಪದವಿ ವಿದ್ಯಾರ್ಥಿಗಳ ಹೊಸ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ


* ಕೃಷಿ ಬ್ಯಾಂಕಿಂಗ್ ವ್ಯವಹಾರಗಳ ಮಾಹಿತಿ
*ಕೃಷಿ ಮತ್ತು ತೋಟಗಾರಿಕಾ ಪ್ರಕಟಣೆಗಳು
*ಸಸ್ಯ ಸಂರಕ್ಷಣೆಯಲ್ಲಿ ಡೋನ್‌ಗಳ ಬಳಕೆ
*ಕೃಷಿಯಲ್ಲಿ ಡಿಜಿಟಲ್ ಆ್ಯಪ್‌ಗಳ ಬಳಕೆ
*ಸಾವಯವ ಹಾಗೂ ನೈಸರ್ಗಿಕ ಕೃಷಿ ಮಾಹಿತಿ
*ತಾಂತ್ರಿಕ ಗೋಷ್ಠಿ – ರೈತರಿಗೆ ಅತ್ಯಸ್ಥೆರ್ಯ ತುಂಬುವ ಕಾರ್ಯಕ್ರಮಗಳು
*ವಿಜ್ಞಾನಿಗಳಿಂದ ತಾಂತ್ರಿಕ / ಮಾರುಕಟ್ಟೆ ಮಾಹಿತಿ
*ಉತ್ಪಾದಕರ-ಖರೀದಿದಾರರ ಉತ್ತೇಜನ ಮಾಹಿತಿ
*ಶ್ವಾನ ಮತ್ತು ಮಧ್ಯ ಪ್ರದರ್ಶನ
*ಜೈವಿಕ ಗೊಬ್ಬರ ಹಾಗೂ ಪೀಡೆನಾಶಕಗಳ ಪ್ರದರ್ಶನ ಮತ್ತು ಮಾರಾಟ

*ಕೃಷಿ ಯಂತ್ರೋಪಕರಣ/ಪರಿಕರಗಳ ಪ್ರದರ್ಶನ.

Leave a Reply

Your email address will not be published. Required fields are marked *