ರೈತರ ಬರ ಪರಿಹಾರದ ಹಣ ಬಿಡುಗಡೆ
ಆತ್ಮೀಯ ರೈತ ಬಾಂಧವರೇ, ಬರ ಪರಿಹಾರದ ಒಂದನೇ ಕಂತು 2000ರೂಪಾಯಿ ಬಿಡುಗಡೆ.
ಪ್ರಥಮವಾಗಿ ಕೃಷಿ ಮೇಲೆ ಅವಲಂಬನೆಯಾಗಿರುವ ದೇಶ ನಮ್ಮದು. ಒಂದು ವರ್ಷ ಮಳೆ ಬರಲಿಲ್ಲವೆಂದರೆ ರೈತನ ಬದುಕು ಬರುಡಾಗುವುದು. ಒಂದು ವರ್ಷ ಮಳೆ ಆಗದಿದ್ದರೆ ಭಾರಿ ಪ್ರಮಾಣದ ನಷ್ಟ ರೈತನಿಗೆ ಉಂಟಾಗುತ್ತದೆ. ಇದು ಕರ್ನಾಟಕದ ಅನೇಕ ರೈತರು ಅನಾವೃಷ್ಟಿಯಿಂದಾಗಿ ರೈತರು ತೊಂದರೆಗಿಡಾಗಿದ್ದಾರೆ.ಈ ಕಾರಣದಿಂದಾಗಿ ರಾಜ್ಯ ಸರ್ಕಾರವು ಕೆಲವು ಪ್ರದೇಶಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಿದೆ.
ಒಂದು ಮಳೆಗಾಲ ಕಳೆದು ಇನ್ನೊಂದು ಮಳೆಗಾಲ ಬರುತ್ತಿದ್ದರು,ಬರ ಪರಿಹಾರ ಇನ್ನು ರೈತನಿಗೆ ದೊರಕಿಲ್ಲ.ಬಹಳ ಹಿಂದೆಯೇ ರಾಜ್ಯ ಸರ್ಕಾರವು 223 ತಾಲೂಕುಗಳನ್ನು ಬರಪೀಡಿತ ಪ್ರದೇಶಗಳೆಂದು ಗುರುತಿಸಿದೆ.48.19 ಹೆಕ್ಟಾರ್ ಜಮೀನಿನಲ್ಲಿ ಮಳೆ ಬರದ ಕಾರಣ ಬೆಳೆ ನಾಶವಾಗಿದೆ. ಇಂತಹ ಪ್ರದೇಶದಲ್ಲಿ ವಾಸಿಸುವ ರೈತರಿಗೆ ಪರಿಹಾರ ಧನವಾಗಿ ತಿಂಗಳಿಗೆ ಮೊತ್ತವನ್ನು ಕೊಡುವುದಾಗಿ ಸರ್ಕಾರ ಹೇಳಿತ್ತು. ಕೇಂದ್ರ ಸರ್ಕಾರವು ಈವರೆಗೆ ಹಣವನ್ನು ನೀಡಿಲ್ಲದ ಕಾರಣ ಕೇಂದ್ರ ಸರ್ಕಾರವು ಈವರೆಗೂ ಬರಪೀಡಿತರಿಗೆ ನೀಡಲು ಹಣವನ್ನು ಮಂಜೂರು ಮಾಡಿಲ್ಲದ ಕಾರಣ, ರಾಜ್ಯ ಸರ್ಕಾರವು ತನ್ನ ರೈತರಿಗೆ ಇನ್ನೂ ಹಣವನ್ನು ನೀಡಿಲ್ಲ. ಸಚಿವಾಲಯವು ಒಂದು ಮಹತ್ವದ ನಿರ್ಧಾರವನ್ನು ಕೈಗೊಂಡಿರುವುದನ್ನು ಕೃಷ್ಣಬೈರೇಗೌಡರು ತಿಳಿಸಿದ್ದಾರೆ.
ಬರ ಪರಿಹಾರ ಇಂದು ಬರುತ್ತದೆ ನಾಳೆ ಬರುತ್ತದೆ ಎಂದು ರೈತರು ಕಾಯುತ್ತಾ ಕುಳಿತಿದ್ದಾರೆ. ರೈತರ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ಈವರೆಗೆ ಯಾವುದೇ ಒಂದು ರೂಪಾಯಿ ಕೂಡ ಅವರಿಗೆ ಲಭಿಸಿಲ್ಲ. ಇದೀಗ ರಾಜ್ಯ ಸರ್ಕಾರ ರೈತರಿಗೆ ಗುಡ್ ನ್ಯೂಸ್ ನೀಡಿದೆ. ಮುಂದಿನ ಒಂದು ವಾರದ ಒಳಗೆ 30 ಲಕ್ಷ ರೈತರಿಗೆ ಒಂದು ತಿಂಗಳ ಬರ ಪರಿಹಾರವಾಗಿ 2000ಗಳನ್ನು ಮೊದಲನೇ ಕಂತಿನ ಹಣವನ್ನು ಅವರ ಖಾತೆಗೆ ಜಮಾ ಮಾಡುವುದಾಗಿ ತಿಳಿಸಿದ್ದಾರೆ.ಬರ ಪರಿಹಾರದ ಹಣವನ್ನು ಪಡೆಯಬೇಕಾದರೆ ರೈತರು ಕಡ್ಡಾಯವಾಗಿ ಫ್ರೂಟ್ಸ್ ಐಡಿಯನ್ನು ಹೊಂದಿರಬೇಕೆಂದು ಹೇಳಲಾಗಿದೆ. ಈಗಾಗಲೇ 75% ರೈತರ ದಾಖಲಾತಿಗಳನ್ನು ಸರ್ಕಾರದ ದಾಖಲೆ ಪಟ್ಟಿಗಳಲ್ಲಿ ಸೇರಿಸಲಾಗಿದೆ. ರೈತರು ಇನ್ನೂ ಒಂದು ವಾರದಲ್ಲೇ ತಮ್ಮ ಪರಿಹಾರದ ಮೊದಲನೇ ಕಂತಿನ ಹಣವನ್ನು ಪಡೆಯಲಿದ್ದಾರೆ. ಕೇವಲ ಒಂದು ವಾರದಲ್ಲಿ ರೈತರ ಖಾತೆಗೆ ಮೊದಲನೇ ಕಂತಿನ ಬರ ಪರಿಹಾರದ ಮೊತ್ತವಾದ ಎರಡು ಸಾವಿರ ರೂಪಾಯಿಗಳು ಬಂದು ಜಮೆಯಾಗುತ್ತವೆ.ಫ್ರೂಟ್ಸ್ ಐಡಿ ಇಲ್ಲದ ರೈತರು ಫ್ರೂಟ್ಸ್ ಐಡಿಯನ್ನು ಮಾಡಿಕೊಳ್ಳಿ.ಬ್ಯಾಂಕ್ ಖಾತೆಗೆ ಈಕೆ ವೈಸಿಯನ್ನು ಮಾಡಿಸಿಕೊಳ್ಳುವುದನ್ನು ಮರೆಯಬೇಡಿ. ಈ ಎರಡು ಕೆಲಸವನ್ನು ಮಾಡದಿದ್ದರೆ ನಿಮ್ಮ ಖಾತೆಗೆ ಹಣ ಜಮಯ ಆಗುವುದಿಲ್ಲ.