agriculture

ಕಿಸಾನ್ ಆಶೀರ್ವಾದ ಯೋಜನಾ, 25,000 ರೂಪಾಯಿಗಳ ಸಹಾಯಧನ

ಆತ್ಮೀಯ ರೈತ ಬಾಂಧವರೇ, ಸರ್ಕಾರದಿಂದ ನಿಮಗೊಂದು ಸಿಹಿ ಸುದ್ದಿ. ಮೂಲತಃ ಕೃಷಿ ಪ್ರಧಾನವಾಗಿರುವ ದೇಶ ನಮ್ಮದು. ನಮ್ಮ ದೇಶದ ಬೆನ್ನೆಲುಬಾಗಿರುವ ಕೃಷಿ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೃಷಿಯ ಮೇಲೆ ಆಸಕ್ತಿಯನ್ನು ಕಡಿಮೆ ತೋರಿಸುತ್ತಿದ್ದಾರೆ. ಮುಖ್ಯ ಕಾರಣ ಬಂಡವಾಳದ ಸಮಸ್ಯೆ ಮತ್ತು ರೈತ ತಾನು ಹಾಕಿದ ಮೊತ್ತದ ಹಣವನ್ನು ಹಿಂಪಡೆಯಲಾಗುತ್ತಿಲ್ಲ. ಈ ಕಾರಣಗಳಿಂದಾಗಿ ರೈತನ ತೊಂದರೆಗಿಡಲಾಗುತ್ತಿದ್ದಾನೆ ಮತ್ತು ಸಾಲವನ್ನು ಮಾಡುತ್ತಿದ್ದಾನೆ. ತೊಂದರೆಯನ್ನು ಕಡಿಮೆ ಮಾಡುವುದು ಮತ್ತು ಕೃಷಿಯನ್ನು ಪ್ರೋತ್ಸಾಹಿಸುವುದಕ್ಕಾಗಿ ರಾಜ ಮತ್ತು ಕೇಂದ್ರ ಸರ್ಕಾರಗಳು ಅನೇಕ ಯೋಜನೆಗಳನ್ನು ಜಾರಿಗೆ ತಂದಿವೆ.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಕಿಸಾನ್ ಆಶೀರ್ವಾದ ಯೋಜನೆಯನ್ನು ಪ್ರಾರಂಭಸಿದೆ. ಈ ಯೋಜನೆಯನ್ನು ಯಾವ ಯಾವ ರೈತರು ಪಡೆದುಕೊಳ್ಳಬಹುದು  ಪಡೆದುಕೊಳ್ಳಬಹುದು?ನೋಡೋಣ ಬನ್ನಿ.

ಐದು ಅಥವಾ ಐದಕ್ಕಿಂತ ಕಡಿಮೆ ಎಕರೆ ಪ್ರದೇಶವನ್ನು ಹೊಂದಿರುವ ರೈತರು ಕಿಸಾನ್ ಆಶೀರ್ವಾದ ಯೋಜನೆಯಲ್ಲಿ 25,000 ಸಹಾಯಧನವನ್ನು ಪಡೆಯಬಹುದು. ಈ ಮುಂಚೆ ಕೇಂದ್ರ ಸರ್ಕಾರವುಕೃಷಿ ಸಮಾನ ಯೋಜನೆಯನ್ನು ಜಾರಿಗೆ ತಂದಿದ್ದು ರೈತರಿಗೆ ತುಂಬಾ ಅನುಕೂಲಕರವಾಗಿದೆ. ಕಿಸಾನ್ ಆಶೀರ್ವಾದ ಯೋಜನೆಯಲ್ಲಿ  ,5 ಎಕರೆ ಜಮೀನಿಗೆ 25000 ಸಹಾಯಧನವನ್ನು ಪಡೆಯಬಹುದು. ಅಂದರೆ ತಲಾ ಒಂದು ಎಕರೆಗೆ 5000 ಅಂತೆ ಸಹಾಯಧನವನ್ನು ನೀಡಲಾಗುತ್ತದೆ. ಎರಡು ಎಕರೆಗೆ 10,000ಮೂರು ಎಕರೆಗೆ 15,000 ನಾಲ್ಕು ಎಕರೆಗೆ 20 ಸಾವಿರ ರೂಪಾಯಿಗಳನ್ನು ನೀಡಲಾಗುವುದು. ಕಿಸಾನ್ ಸಮ್ಮಾನ್ ಯೋಜನೆಯಲ್ಲಿ 6,000 ಗಳು  ಕಿಸಾನ್ ಆಶೀರ್ವಾದ ಯೋಜನೆಯಲ್ಲಿ 25000 ಅಂದರೆ ಒಟ್ಟಾಗಿ 31,000 ಹಣವನ್ನು ಸರ್ಕಾರದಿಂದ ರೈತರು ಪಡೆದುಕೊಳ್ಳಬಹುದು.

ಇದಕ್ಕೆ ಬೇಕಾಗಿರುವ ದಾಖಲಾತಿಗಳು :
* ಭೂಮಿಯ ಪಹಣಿ ಪತ್ರ
* ಆಧಾರ್ ಕಾರ್ಡ್
*ಬ್ಯಾಂಕ್ ಖಾತೆ ವಿವರಗಳು
* ಆಧಾರ್ ಕಾರ್ಡ್ ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆ
*ಭಾವಚಿತ್ರ

ಹತ್ತಿರದ ಕೃಷಿ ಕಚೇರಿಗೆ ಹೋಗಿ ರೈತರು ಸಂಬಂಧ ಪಟ್ಟ ಕೃಷಿ ಅಧಿಕಾರಿಗಳನ್ನು ಭೇಟಿ ಮಾಡಿ ಅವರನ್ನು ಭೇಟಿ ಮಾಡಿ ದಾಖಲಾತಿಗಳನ್ನು ನೀಡಿ ಅರ್ಜಿ ಸಲ್ಲಿಸಬಹುದಾಗಿದೆ.ಈ ಯೋಜನೆ ಲಾಭವನ್ನು ಜಾರ್ಖಂಡ್ ನಲ್ಲಿರುವ 35 ಲಕ್ಷ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ.

ಸೂಚನೆ : ಈ ಯೋಜನೆ ಜಾರ್ಕಂಡ್ ನಲ್ಲಿ ಸಕ್ಸಸ್ ಆದರೆ ರಾಷ್ಟ್ರ ವ್ಯಾಪಿ ಇದನ್ನು  ವಿಸ್ತರಿಸಲಾಗುವುದು ಎಂದು ವರದಿ ಲಭ್ಯವಾಗಿದೆ.

LEAVE A RESPONSE

Your email address will not be published. Required fields are marked *

Open chat
Hello 👋
Can we help you?