ಕರಕುಶಲಕರ್ಮಿಗಳ ಉತ್ತೇಜನಕ್ಕೆ ವಿಶ್ವಕರ್ಮ ಯೋಜನೆ
ಆತ್ಮೀಯ ಓದುಗರೇ, ಅಕ್ಕಸಾಲಿಗ, ಚಮ್ಮಾರ, ಕುಂಬಾರ, ಕಂಬಾರ ಹಲವು ಕರಕುಶಲ ಸಮುದಾಯಗಳಿಗೆ ಸರಕಾರ ಸಿಹಿ ಸುದ್ದಿ ನೀಡಿದೆ. ಕರಕುಶಲಕರ್ಮಿಗಳ ಸಮುದಾಯಕ್ಕೆ ಸರ್ಕಾರ ಸಿಹಿ ಸುದ್ದಿಯನ್ನು ನೀಡಿದೆ. ಏನಿದು ಆ ಸಿಹಿ ಸುದ್ದಿ? ಬನ್ನಿ ನೋಡೋಣ.
ಕುಶಲಕರ್ಮಿಗಳಿಗೆ ಸಹಾಯವಾಗುವಂತೆ ಸರ್ಕಾರ ಎರಡು ಲಕ್ಷ ರೂಪಾಯಿ ಸಾಲವನ್ನು ನೀಡುವ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಸ್ವತಂತ್ರ ದಿನದ ಅಂಗವಾಗಿ ಮಾತನಾಡಿದ ಪ್ರಧಾನಿ ಮೋದಿ ಅವರು ಈ ಯೋಜನೆಯನ್ನು ಅನುಮೋದನೆ ಮಾಡುವುದಾಗಿ ಹೇಳಿದ್ದಾರೆ. ಸರ್ಕಾರ ನೀಡುವ ಎರಡು ಲಕ್ಷ ರೂಪಾಯಿ ಗಳಿಂದಾಗಿ ಕುಶಲಕರ್ಮಿಗಳು ತಮ್ಮ ಕರಕುಶಲಕರ್ಮಿಗಾರಿಕೆಯನ್ನು ಮುಂದುವರಿಸಬಹುದಾಗಿದೆ.
ಯೋಜನೆ ಲಾಭವನ್ನು ಹೇಗೆ ಪಡೆಯಬಹುದು?
ಕೇಂದ್ರದ ಪಿಎಂ ವಿಶ್ವಕರ್ಮ ಯೋಜನೆಗೆ ಸ್ವತಂತ್ರ ದಿನಾಚರಣೆಯ ಅಂಗವಾಗಿ ಮಾತನಾಡಿದ ನರೇಂದ್ರ ಮೋದಿ ಕುಶಲಕರ್ಮಿಕಗಳ ಸಬ್ಸಿಡಿ ಬಡ್ಡಿ ದರದಲ್ಲಿ ಭದ್ರತೆ ರಹಿತವಾಗಿ ಸಾಲವನ್ನು ನೀಡಲಾಗುವುದು. 30 ಲಕ್ಷ ಕುಟುಂಬಗಳಿಗೆ ಇದು ಆಧಾರವಾಗಲಿದೆ. ಮೊದಲ ಹಂತದಲ್ಲಿ 5%ಬಡ್ಡಿ ದರದಲ್ಲಿ ಒಂದು ಲಕ್ಷ ರೂಪಾಯಿ ಸಾಲವನ್ನು ನೀಡುವುದಾಗಿ ಹೇಳಿದೆ. ಮುಂದಿನ ಐದು ವರ್ಷಗಳಿಗಾಗಿ 13,000 ಕೋಟಿ ರೂಪಾಯಿ ಹಣವನ್ನು ಇದು ಮೀಸಲಿಟ್ಟಿದೆ.
ಪಿಎಂ ವಿಶ್ವಕರ್ಮ ಸ್ಕೀಮ್ ಯಾರಿಗೆಲ್ಲ ಲಭ್ಯ?
ವಿಶ್ವಕರ್ಮ ಯೋಜನೆಯು ವಿಶ್ವಕರ್ಮ ಸಮುದಾಯವನ್ನು ಬಿಟ್ಟು ಉಳಿದ ಕರಕುಶಲ ಕಲೆಗಳಲ್ಲಿ ತೊಡಗಿರುವ ವ್ಯಕ್ತಿಗಳಿಗೆ ಇದು ಅನ್ವಯವಾಗುತ್ತದೆ. ಆರು 18 ಕರಕುಶಲ ಕಲೆಗಳನ್ನು ಇದರಲ್ಲಿ ಅಳವಡಿಸಲಾಗಿದೆ. ಕೆಲಸವನ್ನು ಮಾಡುವ ವ್ಯಕ್ತಿಗಳಿಗೆ ಪಿಎಂಐಡಿ ಕಾರ್ಡ್ ಮತ್ತು ಪ್ರಮಾಣ ಪತ್ರಗಳನ್ನು ಒದಗಿಸಲಾಗುತ್ತದೆ. ಮೊದಲ ಹಂತದಲ್ಲಿ ಒಂದು ಲಕ್ಷ ರೂಪಾಯಿ ಮತ್ತು ಎರಡನೇ ಹಂತದಲ್ಲಿ ಎರಡು ಲಕ್ಷ ರೂಪಾಯಿಗಳನ್ನು ಒದಗಿಸಲಾಗುತ್ತದೆ. ಕಲೆಗಾರರಿಗೆ ಮತ್ತು ಕರಕುಶಲಕರ್ಮಿಗಳಿಗೆ ನಾಡಪತ್ರ ಮತ್ತು ಐಡಿ ಕಾರ್ಡನ್ನು ಒದಗಿಸಲಾಗುತ್ತದೆ.
ಈ ಯೋಜನೆ ಕೌಶಲ್ಯ ಉನ್ನತಿಕರಣ, ಸಲಕರಣಿಗಳ ಪಟ್ಟಿ ಡಿಜಿಟಲ್ ವಹಿವಾಟಿಗೆ ಉತ್ತೇಜನ ಮಾರುಕಟ್ಟೆ ಬೆಂಬಲ ದಂತಹ ಕಾರ್ಯಗಳನ್ನು ಮಾಡಲಿದೆ ಎಂದು ಸರಕಾರ ಹೇಳಿಕೆ ನೀಡಿದೆ.
ಮೊದಲ ಹಂತದಲ್ಲಿ ಬಡಿಗರು, ದೋಣಿ ತಯಾರಕರು,ಬೀಗ ತಯಾರಿಸುವವರು, ಕಮ್ಮಾರರು, ಶಿಲ್ಪಿಗಳು, ಚಮ್ಮರರು, ದರ್ಜಿಗಳು,ಹೂ ಕಟ್ಟುವವರು, ದೋಬಿಗಳು, ಗೊಂಬೆ ತಯಾರಕರು ಹಾಗೂ ಕಲ್ಲು ಕುಟಿಕರು ಒಳಗೊಂಡಿರುತ್ತಾರೆ. ಇದು ಕಾಗದ ರಹಿತ ಸಾಲರಹಿತ ಯೋಜನೆ ಆಗಿರುತ್ತದೆ,ಇದರಿಂದ ಜಾಗತಿಕ ಮಾರುಕಟ್ಟೆಯಲ್ಲಿ ಎಲ್ಲಾ ರೀತಿಯ ಕರಕುಶಲ ವಸ್ತುಗಳಿಗೆ ಮಾನ್ಯತೆ ಸಿಗಲಿದೆ. ಕುಶಲ ತರಬೇತಿಗೆ ಪ್ರತಿದಿನ ಐದು ನೂರು ರೂಪಾಯಿ ಸ್ಟೇಫಂಡ್ ಪಡೆಯುವ ಅವಕಾಶ ಇದೆ. ಹಾಗೆ ಆಧುನಿಕ ಸಲಕರಣೆಗಳ ಖರೀದಿಗಾಗಿ 1500ರೂಪಾಯಿ ನೀಡಲಾಗುತ್ತಿದೆ.
ಈ ಯೋಜನೆಗಾಗಿ ಹಳ್ಳಿಗಳಲ್ಲಿನ ಸಾಮಾನ್ಯ ಸೇವ ಕೇಂದ್ರಗಳಲ್ಲಿ ನೊಂದಣಿ ಮಾಡಬಹುದಾಗಿದೆ. ಕರ್ಮ ಯೋಜನೆಯ ಸಂಪೂರ್ಣ ಹಣವನ್ನು ಕೇಂದ್ರ ಸರ್ಕಾರವೇ ಭರಿಸಲಿದೆ. ಮುಂದಿನ ಐದು ವರ್ಷಗಳಲ್ಲಿ 30 ಲಕ್ಷ ಕುಟುಂಬಗಳಿಗೆ ಕರಕುಶಲಕರ್ಮಿಗಳ ಸಮುದಾಯಗಳಿಗೆ ಇದು ನೆರವಾಗಲಿದೆ ಎಂದು ಸರ್ಕಾರ ತಿಳಿಸಿದೆ.