ಬೈಕ್ ಬೆಲೆಯಲ್ಲಿ ಮಿನಿ ಟ್ರ್ಯಾಕ್ಟರ್ ಖರೀದಿ
ಆತ್ಮೀಯ ರೈತ ಬಾಂಧವರೇ, ಬೈಕ್ ಬೆಲೆಯಲ್ಲಿ ಈಗ ಮಿನಿ ಟ್ಯಾಕ್ಟರ್ ಕೊಂಡುಕೊಳ್ಳುವುದು ಹೇಗೆ ಮತ್ತು ಅದು ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಇಲ್ಲಿ ನೋಡೋಣ.
ಏನಿದು ಮಿನಿ ಟ್ರಾಕ್ಟರ್? ರೈತನ ಕೆಲಸದಲ್ಲಿ ಇದು ಹೇಗೆ ಸಹಾಯ ಮಾಡುತ್ತದೆ ನೋಡೋಣ.
ಬೈಕ್ ನಡೆಸಲು ಹೇಗೆ ಹ್ಯಾಂಡಲ್ ಇರುತ್ತದೆಯೋ ನಡೆಸಲು ಹಾಗೆ ಇದನ್ನು ನಡೆಸಲು ಸ್ಟೇರಿಂಗ್ ಮತ್ತು ಹ್ಯಾಂಡಲ್ ಎರಡು ಕೂಡ ಇರುತ್ತದೆ. ಇದಕ್ಕೆ ನೇಗಿಲು ಹೊಡೆಯುವುದು ಟ್ರಾಲಿ ಅಥವಾ ರೋಟೋವೇಟರ್ ಅನ್ನು ಅಟ್ಯಾಚ್ ಅಥವಾ ಜೋಡಿಸಬಹುದು. ಚಿಕ್ಕ ಪುಟ್ಟ ಮೂಟೆ ಮತ್ತು ಗೊಬ್ಬರಗಳನ್ನು ಕೂಡ ಇದರ ಮೇಲೆ ಹೀರಿಕೊಂಡು ಹೋಗಬಹುದು. ಎಲ್ಲಾ ರೀತಿಯ ಕೆಲಸಕ್ಕೆ ಇದನ್ನು ಬಳಸಬಹುದು.
ಮಿನಿ ಟ್ಯಾಕ್ಟರ್ ಹೆಸರು ಹೇಳುವಂತೆ ಇದು ಸಣ್ಣದಾದರೂ ಕೂಡ ದೊಡ್ಡ ಟ್ರಾಕ್ಟರ್ ಮಾಡುವ ಕೆಲಸವನ್ನು ಇದು ಮಾಡುತ್ತದೆ. ಒಂದು ಬೈಕ್ ಬೆಲೆಯಲ್ಲಿ ಇದನ್ನು ನಾವು ಕೊಂಡುಕೊಳ್ಳಬಹುದು. ಆರು ಗೇರ್ ಹಿಂದೆ ಎರಡು ಗೇರು ಇರುತ್ತದೆ. ಸ್ಪೀಡ್ ಅಡ್ಜಸ್ಟ್ಮೆಂಟ್ ಕೂಡ ಇರುತ್ತದೆ. ಡೀಸೆಲ್ ಇಂಜಿನ್ ಇದ್ದು ಡೀಸೆಲ್ ಅನ್ನು ಇಂಧನವಾಗಿ ಬಳಸಲಾಗುತ್ತದೆ ಮತ್ತು 5ಲೀಟರ್ ಟ್ಯಾಂಕ್ ಹೊಂದಿದೆ. ಒಂದು ಲೀಟರ್ ಡೀಸೆಲ್ ಒಂದು ಗಂಟೆ ಕೆಲಸ ಮಾಡುತ್ತದೆ. ಹೆಚ್ಚು ಮೈಲೇಜ್ ನೀಡುವ ಟ್ರ್ಯಾಕ್ಟರ್ ಇದಾಗಿದೆ. ದೊಡ್ಡ ಟ್ರ್ಯಾಕ್ಟರ್ ಗಳಲ್ಲಿ ಸಿಂಗಲ್ ಬ್ರೇಕ್ ಕೊಟ್ಟಿರುತ್ತಾರೆ ಆದರೆ ಈ ಟ್ರಾಕ್ಟರ್ ನಲ್ಲಿ ಎಡ ಮತ್ತು ಬಲಕ್ಕೆ ಎರಡು ಬ್ರೇಕ್ ಗಳನ್ನು ಕೊಟ್ಟಿರುತ್ತಾರೆ. ಕಾಲಲ್ಲಿ ಮತ್ತು ಕೈಯಲ್ಲಿ ಎರಡು ಕಡೆ ಆಕ್ಸಿಲಾರೇಟರ್ ಕೊಟ್ಟಿರುತ್ತಾರೆ. ಬೇಕಾಗುವ ಎಲ್ಲಾ ರೀತಿಯ ಟ್ರಾಲಿ ರೋಟೋವೇಟರ್ ಸ್ಲಾಷೆರ್ ಎಲ್ಲವೂ ಕೂಡ ಲಭ್ಯವಿದೆ.ಕೃಷಿ ಹೊಡದಲ್ಲಿನ ನೀರನ್ನು ಕೂಡ ಎತ್ತಬಹುದು. ಕಡಿಮೆ ಬೆಲೆಯಲ್ಲಿ ಇದನ್ನು ಖರೀದಿಸಿ ಹೆಚ್ಚಳ ಲಾಭವನ್ನು ರೈತರು ಪಡೆಯಬಹುದಾಗಿದೆ
ಹೆಚ್ಚಿನ ಮಾಹಿತಿಗಾಗಿ ಕೆಳಗಿನ ನಂಬರ್ ಗೆ ಸಂಪರ್ಕಿಸಿ
8660384147/872213006