ಪಿಎಂ ಕಿಸಾನ್ ಯೋಜನೆಯ 16ನೆ ಕಂತಿನ ಹಣ ಶೀಘ್ರದಲ್ಲಿ ಬಿಡುಗಡೆ

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೆ, ನಿಮಗೆ ಇಲ್ಲಿದೆ ಒಂದು ಸಿಹಿ ಸುದ್ದಿ. ಪಿ ಎಂ ಕಿಸಾನ್ ಹಣವನ್ನು ಎದುರು ನೋಡುತ್ತಿರುವ ರೈತರಿಗೆ ಸಿಹಿ ಸುದ್ದಿಯನ್ನು ನೀಡಿದ ಕೇಂದ್ರ ಸರ್ಕಾರ. ಈ ದಿನಾಂಕದಂದು ಅವನು ಬಿಡುಗಡೆ ಮಾಡುವುದಾಗಿ ಹೇಳಿದ ಕೇಂದ್ರ ಸರ್ಕಾರ. ಪಿಎಮ್ ಕಿಸಾನ್ನ 16ನೇ ಕಂತಿನ ಸಾವಿರ ರೂಪಾಯಿ ಈ ದಿನಾಂಕದಂದು ಬಿಡುಗಡೆಯಾಗಲಿದೆ.
ಕೇಂದ್ರ ಸರ್ಕಾರದ ಯೋಜನೆಯಾದ ಪಿಎಂ ಕಿಸಾನ್ ಸಮ್ಮಾನ್ ನಿಧಿ ಯು  ಐದು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದೆ. ನಂಬಿರುವ ಅನೇಕ ಯೋಜನೆಗಳಲ್ಲಿ ಕೇಂದ್ರ ಸರ್ಕಾರದ ಈ ಯೋಜನೆಯು ನನಗೆ ತುಂಬಾ ಸಹಾಯಕವಾಗಿದೆ. ವರ್ಷ ರೈತ ಪರಾನುಭವಿಗಳಿಗೆ 6,000ಗಳನ್ನು ಈ ಯೋಜನೆ ನೀಡುತ್ತಿದೆ. 11 ಕೋಟಿ  ಜನ ರೈತರಿಗೆ ಈ ಯೋಜನೆಯು ಲಭಿಸಿದೆ. 6000 ರೂಪಾಯಿಗಳನ್ನು ಮೂರು ಕಂತುಗಳನ್ನಾಗಿ ಮಾಡಿ ಎರಡು ಸಾವಿರಗಳನ್ನು( 2000)ನೀಡಲಾಗುತ್ತದೆ.

ಆಗಲೇ ಎಲ್ಲ ರೈತರ ಖಾತೆಗೆ 14 ರಿಂದ 15 ಕಂತು ಗಳನ್ನು ಖಾತೆ ಮಾಡಲಾಗಿದ್ದು ರೈತರು 16ನೇ ಕಂತಿನ ಹಣ ಅವಾಗ ಬರುತ್ತದೆ ಎಂದು ಕಾಯುತ್ತಿದ್ದಾರೆ. ಅತಿ ಶೀಘ್ರದಲ್ಲಿ 16ನೇ ಕಂತಿನ ಹಣ ನಿಮ್ಮ ಅಕೌಂಟಿಗೆ ಬಂದು ಜಮೆಯಾಗಲಿದೆ. ಈ ಕಂತಿನ ಹಣವನ್ನು ಪಡೆಯಬೇಕಾದರೆ ಕಡ್ಡಾಯವಾಗಿ ಈ ಕೆ ವೈ ಸಿ ಯನ್ನು ಮಾಡಿಸಿರಲೇಬೇಕು . ಈ ವರ್ಷದ ಲೋಕಸಭಾ ಚುನಾವಣೆಯ ಮುಂಚೆ ಅಥವಾ ಈ ತಿಂಗಳ ಕೊನೆಗೆ ರೈತರ ಖಾತೆಗೆ 16ನೇ ಕಂತಿನ ಹಣ ಬಂದು ಜಮೆಯಾಗಲಿದೆ. ಸದ್ಯದಲ್ಲೇ ನಿಮ್ಮ ಖಾತೆಗೆ ಹಣ ಬರಲಿದ್ದು ಈಗಲೇ ನೀವು ಕೆವೈಸಿಯನ್ನು ಮಾಡಿಸಿಕೊಳ್ಳಬೇಕು. ಈ ಕೆ ವೈ ಸಿ ಎರಡು ರೀತಿ ಮಾಡಿಕೊಳ್ಳಬಹುದು. ಓಟಿಪಿ ಬೇಸ್ ಆಧಾರಿತ ಇನ್ನೊಂದು ಬಯೋಮೆಟ್ರಿಕ್ ಮೂಲಕ. ಆಧಾರ್ ಕಾರ್ಡ್ ಗೆ ನೋಂದಣಿಯಾಗಿರುವ ಮೊಬೈಲ್ ನಂಬರ್ ಗೆ ಒಟಿಪಿ ಬರುತ್ತದೆ. ಆಧಾರ್ ಕಾರ್ಡ್ ಗೆ ಯಾವುದೇ ಮೊಬೈಲ್ ನಂಬರ್ ಲಿಂಕ್ ಇರೋದಿದ್ದರೆ ಹತ್ತಿರದ ಸಿಎಸ್‌ಸಿ ಸೆಂಟರ್ ಗಳಿಗೆ ಹೋಗಿ ಬಯೋಮೆಟ್ರಿಕ್ ಮಾಡಿಸುವ ಮೂಲಕ ನಿಮ್ಮ ಈ ಕೆ ವೈ ಸಿ ಮಾಡಿಸಿಕೊಳ್ಳಬಹುದು.

ಪಿ ಎಂ ಕಿಸಾನ್ ಒಂದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ರೈತರನ್ನು ಆರ್ಥಿಕವಗಿ ಸಹಾಯ ಮಾಡಲು ಸರ್ಕಾರವು ಪ್ರತಿವರ್ಷ 6,000ಗಳನ್ನು ಅವರ ಅಕೌಂಟಿಗೆ ಡಿಬೀಟಿಗೆ ಮೂಲಕ ಹಾಕಲಾಗುತ್ತದೆ. ಆಗಲೇ ಇದು ಸಂಪೂರ್ಣವಾಗಿ ಐದು ವರ್ಷಗಳನ್ನು ಪೂರೈಸಿದ್ದು, ರೈತರ ಮೆಚ್ಚುಗೆ ಪಾತ್ರವಾದ ಒಂದು ಯೋಜನೆಯಾಗಿದೆ.ಮೊದಲು ಈ ಯೋಜನೆಯು ಕೇವಲ ಸ್ವಲ್ಪ ಪ್ರಮಾಣದ ರೈತರಿಗೆ  ಅನ್ವಯ ವಾಗುತ್ತಿತ್ತು. ಸರಿ ಈಗ ಎಲ್ಲಾ  ರೈತರಿಗೂ ಇದು ಅನ್ವಯವಾಗುತ್ತದೆ. ರೈತರು ಎಷ್ಟೇ ಜಮೀನನ್ನು ಹೊಂದಿದ್ದರು ಅವರು ಈ ಯೋಜನೆಗೆ ಅರ್ಹರಾಗಿರುತ್ತಾರೆ. ರೈ ತರು ಈಕೆ ವೈ ಸಿ ಮಾಡಿಸುವ ಮೂಲಕ ತಮ್ಮ ಹಣ ವನ್ನು ಪಡೆದುಕೊಳ್ಳಬಹುದು ಎಂದು ಕೇಂದ್ರ ಸರ್ಕಾರವು ತಿಳಿಸಿದೆ.

WhatsApp Group Join Now
Telegram Group Join Now

Leave a Comment