ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿ
ಆತ್ಮೀಯ ರೈತ ಬಾಂಧವರೇ,
ತೋಟಗಾರಿಕೆ ಬೆಳೆಗಳಿಗೆ ಸಹಾಯಧನ ಇಂದೇ ಅರ್ಜಿ ಸಲ್ಲಿಸಿರಿ.
ತೋಟಗಾರಿಕೆ ಬೆಳೆಗಳು ಬಹು ವಾರ್ಷಿಕ ಬೆಳೆಗಳಾಗಿದ್ದು, ಅವುಗಳನ್ನು ಬೆಳೆಯಲು ಮತ್ತು ಅವುಗಳಿಗೆ ವ್ಯವಸ್ಥೆ ಮಾಡಲು ಅತಿ ಹೆಚ್ಚು ಹಣ ಬೇಕಾಗುತ್ತದೆ. ನಾಟಿ, ಔಷಧೋಪಚಾರ, ರೋಗ, ಪೋಷಕಶ ಕೊರತೆ ಇತ್ಯಾದಿದಿಗಳನ್ನು ನೀಗಿಸಲು ಅತಿ ಹೆಚ್ಚು ಹಣ ಬೇಕಾಗುತ್ತದೆ.
ತೋಟಗಾರಿಕೆ ಬೆಳೆಗಳಲ್ಲಿ ಬರುವ ಒಂದು ಮುಖ್ಯ ಲಕ್ಷಣವೆಂದರೆ ಅವುಗಳನ್ನು ಮನೆಯಲ್ಲಿ ಇಟ್ಟುಕೊಂಡು ಇರುವುದು ಆಗುವುದಿಲ್ಲ, ಮೌಲ್ಯವರ್ಧನೆ ಮಾಡಿ ಮಾರುಕಟ್ಟೆಗೆ ಸಾಗಿಸಬೇಕಾಗುತ್ತದೆ.ಮೌಲ್ಯ ವರ್ಧನೆಗಾಗಿ ಅನೇಕ ಯಂತ್ರಗಳು ಕೂಡ ಬೇಕಾಗುತ್ತದೆ. ಎಲ್ಲಾ ವೆಚ್ಚ ತಗುಲುವ ಗಳನ್ನು ಬೆಳೆಯಲು ರೈತನ ಅತಿ ಹೆಚ್ಚು ಬಂಡವಾಳವನ್ನು ಹಾಕಬೇಕಾಗುತ್ತದೆ. ಬಂಡವಾಳಕ್ಕೆ ಒಂದಿಷ್ಟು ಸಹಾಯಧನವನ್ನು ಸರ್ಕಾರ ನೀಡಿದರೆ ರೈತನಿಗೆಬಹಳ ಅನುಕೂಲವಾಗುತ್ತದೆ. ತೋಟಗಾರಿಕಾ ಇಲಾಖೆ ವತಿಯಿಂದ ತೋಟಗಾರಿಕಾ ಬೆಳೆಗಳನ್ನು ಬೆಳೆಯಲು ಸರ್ಕಾರವು ಸಹಾಯಧನವನ್ನು ನೀಡುತ್ತಿದೆ. ಇದನ್ನು ಪಡೆಯಲು ನೀವು ಕೂಡಲೇ ಅರ್ಜಿ ಸಲ್ಲಿಸಬೇಕಾಗುತ್ತದೆ. ವಿಷಯಕ್ಕೆ ಸಂಬಂಧಿಸಿದಂತೆ ಈ ಮಾಹಿತಿ ಕೆಳಗಿದೆ.
ಮಂಗಳೂರು: 2024-25ನೇಸಾಲಿಗೆ ರಾಷ್ಟ್ರೀಯ ತೋಟಗಾರಿಕೆ ಮಿಷನ್ ಯೋಜನೆಯಡಿ ಕಂದುಬಾಳೆ, ಅಂಗಾಂಶ ಬಾಳೆ, ಅನನಾಸು, ರಾಂಬುಟಾನ್, ಮ್ಯಾಂಗೋಸ್ಟಿನ್, ಬೆಣ್ಣೆ ಹಣ್ಣು, ಮಲ್ಲಿಗೆ, ಕಾಳುಮೆಣಸು, ಜಾಯಿಕಾಯಿ, ಗೇರು, ಕೊಕೊ ಇತ್ಯಾದಿ ತೋಟಗಾರಿಕೆ ಬೆಳೆಗಳ ಹೊಸ ತೋಟ ಸ್ಥಾಪನೆಗೆ, ಹಳೆ ಕಾಳುಮೆಣಸು ತೋಟಗಳ ಪುನಶ್ಚತನ ಕೈಗೊಳ್ಳಲು, ನೀರು ಸಂಗ್ರಹಣಾ ಘಟಕ, ಪ್ಯಾಕ್‌ಹೌಸ್, ಪಾಲಿಮನೆ, ಅಣಬೆ ಉತ್ಪಾದನಾ ಘಟಕ ನಿರ್ಮಾಣ ಮಾಡಲು ಸಹಾಯಧನ ಸೌಲಭ್ಯ ಲಭ್ಯವಿದೆ. . ಹೆಚ್ಚಿನ ಮಾಹಿತಿಗೆ ಮಂಗಳೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ : 9449258204 (0824-2423615), ಬಂಟ್ವಾಳ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ: 9448206393, (08255-234102), ಪುತ್ತೂರು ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ: 9731854527 (08251-230905), ಸುಳ್ಯ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು, ದೂ.ಸಂಖ್ಯೆ: 9880993238 (08257-232020) ಹಾಗೂ ಬೆಳ್ತಂಗಡಿ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ದೂ.ಸಂಖ್ಯೆ – 9448336863 (08256-232148) ಸಂಪರ್ಕಿಸಬಹುದು ಎಂದು ತೋಟಗಾರಿಕೆ ಇಲಾಖೆಯ ಉಪನಿರ್ದೇಶಕರ ಪ್ರಕಟಣೆ ತಿಳಿಸಿದೆ.
ಸೂಚನೆ : ಅರ್ಜಿ ಸಲ್ಲಿಸುವುದು ಈ ಭಾಗದ ರೈತರಿಗೆ ಮಾತ್ರ ಅನ್ವಯಿಸಲಾಗಿದ್ದು, ಆ ಭಾಗದ ರೈತರು ಅರ್ಜಿ ಸಲ್ಲಿಸುವ ಮೂಲಕ ತಮಗೆ ಬೇಕಾದ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಕೂಡಲೇ ಅರ್ಜಿ ಸಲ್ಲಿಸಿ ನಿಮಗೆ ಬೇಕಾದ ಸೌಲಭ್ಯವನ್ನು ಮತ್ತು ಸಹಾಯಧನವನ್ನು ನೀವು ಸರ್ಕಾರದಿಂದ ಪಡೆದುಕೊಳ್ಳಬಹುದು. ಅವರಿಗೆ ಮೊದಲಿನ ಆದ್ಯತೆಯನ್ನು ನೀಡಲಾಗುವುದು. ನೀಡಿರುವ ದೂರವಾಣಿ ಸಂಖ್ಯೆಗಳಿಗೆ ನೀವು ಸಂಪರ್ಕಿಸಬಹುದು.