ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ 2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳ ನೋಂದಣಿ ಮಾಡಿಕೊಳ್ಳುವ ಕುರಿತು.
2025-26 ರಿಂದ 2026-27 ರವರೆಗಿನ ಯೋಜನಾ ಅವಧಿಗೆ ಮತ್ತು ರಾಜ್ಯದಾದ್ಯಂತ ಜೇನುಸಾಕಣೆ ಅಭಿವೃದ್ಧಿ ಯೋಜನೆಗಳ ಅಡಿಯಲ್ಲಿ ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳು ಇಲಾಖೆ “ಹಸಿರು” ಸಾಫ್ಟ್‌ವೇರ್‌ನಲ್ಲಿ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.ಸದರಿ ನೋಂದಣಿಯು ಯೋಜನಾ ಅವಧಿಯು ಆರ್ಥಿಕ ವರ್ಷ 2025-26 ರಿಂದ ಪ್ರಸ್ತುತ ಯೋಜನಾ ಅವಧಿಯ ಕೊನೆಯ ವರೆಗೂ ಅಂದರೆ 31.03.2027 ರ ವರೆಗೂ ಮಾನ್ಯವಿರುತ್ತದೆ.
ಇದನ್ನು ಓದಿ :ಪಿಎಂ ಕಿಸಾನ್’ ಹಣ ಜಮೆ ಆಗಿಲ್ವಾ? ತಕ್ಷಣವೇ ಈ ಸಂಖ್ಯೆಗೆ ಕರೆ ಮಾಡಿ.!
ಆಸಕ್ತಿಯುಳ್ಳ, ಜೇನು ಪೆಟ್ಟಿಗೆಗಳು, ಕುಟುಂಬ ಮತ್ತು ಸಂಬಂಧಿತ ಪರಿಕರಗಳ ಉತ್ಪಾದನಾ ಸಂಸ್ಥೆಗಳು ಇಲಾಖಾ ಷರತ್ತು ನಿಬಂಧನೆಗಳನ್ನೊಳಗೊಂಡ ನೋಂದಣಿ ಪ್ರಪತ್ರವನ್ನು ಮತ್ತು User Manual ಅನ್ನು ಇಲಾಖೆಯ “ಹಸಿರು” ತಂತ್ರಾಂಶದಲ್ಲಿ ಪಡೆಯಬಹುದಾಗಿರುತ್ತದೆ.ಎಲ್ಲಾ ಅಗತ್ಯ ದಾಖಲಾತಿಗಳೊಂದಿಗೆ ನಿಗಧಿತ ದಿನಾಂಕದೊಳಗೆ ಇಲಾಖೆಯ “ಹಸಿರು” ತಂತ್ರಾಂಶ https://hasiru.karnataka.gov.in ನಲ್ಲಿ upload ಮಾಡಬೇಕಾಗಿರುತ್ತದೆ.
ಯೋಜನಾ ಅವಧಿಗೆ ಪ್ರಕ್ರಿಯೆಯನ್ನು ದಿನಾಂಕ :14-02-2025 50 2:21-03-2025 ರ ವರೆಗೂ upload ಮಾಡಲು ಅವಕಾಶವಿರುತ್ತದೆ. ದಿನಾಂಕ: 21-03-2025 ರಂದು ಸಂಜೆ 5.30 ರ ನಂತರ upload ಮಾಡುವಂತಹ ಅರ್ಜಿಗಳನ್ನು ನೋಂದಣಿಗೆ ಪರಿಗಣಿಸಲಾಗುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ತೋಟಗಾರಿಕೆ ಅಪರ ನಿರ್ದೇಶಕರ ಕಛೇರಿ, ತಾಳೆ ಬೆಳೆ, ಲಾಲ್ ಬಾಗ್, ಬೆಂಗಳೂರು-04 (ಇ ಮೇಲ್ : additionaldirectoropdp@gmail.com ) ಅನ್ನು ಸಂಪರ್ಕಿಸಬಹುದು.
ಸದರಿ ನೋಂದಣಿ ಪ್ರಕ್ರಿಯೆಯಲ್ಲಿ ನಿರ್ದೇಶಕರು, ತೋಟಗಾರಿಕೆ ಇಲಾಖೆ ಮತ್ತು / ಅಥವಾ ರಾಜ್ಯ ಮಟ್ಟದ ತಾಂತ್ರಿಕ ಪರಿಶೀಲನಾ ಸಮಿತಿಯು ತೆಗೆದುಕೊಳ್ಳುವ ನಿರ್ಧಾರವು ಅಂತಿಮವಾಗಿರುತ್ತದೆ.
[…] […]