ಬೆಂಬಲ ಬೆಲೆಯಲ್ಲಿ ಬಿಳಿಜೋಳ ಖರೀದಿ ಈ ಜಿಲ್ಲೆಯವರಿಗೆ ಮಾತ್ರ ಅವಕಾಶ

ರಾಜ್ಯ ಸರ್ಕಾರ 2024-25ನೇ ಸಾಲಿನಲ್ಲಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ಬಿಳಿಜೋಳ ಖರೀದಿಸಲು ಆದೇಶ ಮಾಡಿದೆ. ಜಿಲ್ಲಾ ಟಾಸ್ಕ್‌ಫೋರ್ಸ್‌ಗಳ ಶಿಫಾರಸ್ಸಿನಂತೆ ವಿಜಯಪುರ, ಕಲಬುರಗಿ, ಬಾಗಲಕೋಟೆ, ಯಾದಗಿರಿ, ಬೀದರ್‌, ಕೊಪ್ಪಳ, ರಾಯಚೂರು, ವಿಜಯನಗರ, ಬಳ್ಳಾರಿ, ಬೆಳಗಾವಿ, ಗದಗ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗಳಲ್ಲಿ ಖರೀದಿ ಕೇಂದ್ರಗಳನ್ನು ಆರಂಭಿಸಲಾಗಿದೆ.

ರೈತಬಾಂಧವರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಬಿಳಿಜೋಳವನ್ನು ಮಾರಾಟ ಮಾಡದೇ ಖರೀದಿ ಕೇಂದ್ರಗಳಲ್ಲಿ ಮಾರಾಟ ಮಾಡಿ ಸರ್ಕಾರದ ಬೆಂಬಲ ಬೆಲೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು.

ಬೆಂಬಲ ಬೆಲೆ ಎಷ್ಟು?

  1. ಹೈಬ್ರಿಡ್ ಜೋಳ ರೂ.3,371/- (ಪ್ರತಿ ಕ್ವಿಂಟಾಲ್‌ಗೆ)
  2. ಮಾಲ್ದ೦ಡಿ ಜೋಳ ರೂ.3,421/- (ಪ್ರತಿ ಕ್ವಿಂಟಾಲ್‌)
  3. ಪ್ರತಿ ಎಕರೆಗೆ ನಿಗದಿಪಡಿಸಿರುವ ಪ್ರಮಾಣ : 20 ಕ್ವಿಂಟಾಲ್
  4. ಪ್ರತಿ ರೈತರಿಂದ ಖರೀದಿ ಪ್ರಮಾಣ : 150 ಕ್ವಿಂಟಾಲ್

ಮಾರಾಟ ಹೇಗೆ?

ಫೂಟ್ಸ್ ಐ.ಡಿ. ಯೊಂದಿಗೆ ಬಯೋಮೆಟ್ರಿಕ್ ನೀಡಿ ಖರೀದಿ ಕೇಂದ್ರದಲ್ಲಿ ನೋಂದಣಿ ಮಾಡಿ. ಆಧಾರ್ ಜೋಡಣೆಯಾದ ಎನ್.ಸಿ.ಪಿ.ಐ. ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆ ಖಾತರಿಪಡಿಸಿ. ಎಫ್.ಎ.ಕ್ಯೂ ಗುಣಮಟ್ಟದ ಬಗ್ಗೆ ಗ್ರೇಡರ್ ಪರಿಶೀಲಿಸಿ ದೃಢೀಕರಿಸಿದ ನಂತರ ಖರೀದಿ. ಮದ್ಯವರ್ತಿಗಳು ಖರೀದಿ ಕೇಂದ್ರಗಳನ್ನು ದುರ್ಬಳಕೆ ಮಾಡಿಕೊಂಡರೆ ಕಾನೂನು ಕ್ರಮ ಜರುಗಿಸಲಾಗುವುದು.

ಹಣ ಪಾವತಿ ಹೇಗೆ?

ರೈತರ ಬ್ಯಾಂಕ್ ಖಾತೆಗೆ ಡಿ.ಬಿ.ಟಿ ಮೂಲಕ ಹಣ ನೇರವಾಗಿ ಜಮೆ ಹೆಚ್ಚಿನ ಮಾಹಿತಿಗಾಗಿ ಕಚೇರಿ ಸಮಯದಲ್ಲಿ ಉಚಿತ ದೂರವಾಣಿ ಸಂಖ್ಯೆಗೆ 1800 425 1552 ಕರೆ ಮಾಡಿ.

Leave a Comment

Open chat
Hello 👋
Can we help you?