2023 -24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಿರಸ್ಕೃತಗೊಂಡಿರುವ ಲಿಸ್ಟ್?

2023 24ನೇ ಸಾಲಿನಲ್ಲಿ ರೈತರು ತಮ್ಮ ಬೆಳೆಗಳಿಗೆ ಬೆಳೆ ರಕ್ಷಣೆ ಗೋಸ್ಕರ ಬೆಳೆ ವಿಮೆ ಮಾಡಿಸಿದ್ದು ಎಲ್ಲರಿಗೂ ಗೊತ್ತಿದೆ ಮತ್ತು ನೀವು ಬೆಳೆ ವಿಮೆ ಮಾಡಿಸಿದ್ದರೆ ನಿಮಗೆ ಇದರ ಬಗ್ಗೆ ಗೊತ್ತೇ ಇರುತ್ತದೆ. ಪ್ರತಿಯೊಬ್ಬರ ಸಮಸ್ಯೆ ಏನೆಂದರೆ ಬೆಳೆ ವಿಮೆ ತುಂಬಿರುತ್ತೀರಿ ಮತ್ತು ನೀವು ಅದನ್ನು ಪರೀಕ್ಷೆ ಮಾಡುವುದಿಲ್ಲ ಅದನ್ನು ಸ್ಟೇಟಸ್ ಮೂಲಕ ಚೆಕ್ ಮಾಡುವುದಿಲ್ಲ ಸ್ಟೇಟಸ್ ಮೂಲಕ ಚೆಕ್ ಮಾಡಿದಾಗ ನಿಮ್ಮ ಬೆಳೆ ವಿಮೆ ಅರ್ಜಿ ಸ್ಥಿತಿಯನ್ನು ನೋಡಬಹುದು ಮತ್ತು ನೀವು ದಾಖಲಿಸಿರುವ ಬೆಳೆ ಸರಿಯಾಗಿ ದಾಖಲೆ ಆಗಿದೆ ಅಥವಾ ನೀವು ಬೆಳೆ ವಿಮೆ ಕಟ್ಟಿರುತ್ತೀರಿ ಆದರೆ ನಿಮ್ಮ ಬೆಳೆ ಸಮೀಕ್ಷೆಯಲ್ಲಿ ಬೇರೆ ಬೆಳೆ ತೆಗೆದುಕೊಂಡಿರುತ್ತದೆ ಅದಕ್ಕೆ ಹೊಂದಾಣಿಕೆ ಆಗದೆ ಇದ್ದಲ್ಲಿ ನಿಮ್ಮ ಅರ್ಜಿಯನ್ನು ತಿರಸ್ಕೃತಗೊಳಿಸಲಾಗುತ್ತದೆ.

2023 -24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಿರಸ್ಕೃತಗೊಂಡಿರುವ ಲಿಸ್ಟ್?

2023 -24ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ತಿರಸ್ಕೃತಗೊಂಡಿರುವ ಬೆಳೆ ವಿಮೆ ಪ್ರಕಟಿಸಿದೆ ಎಂದು ಯಾದಗಿರಿ ಸಹಾಯಕ ಕೃಷಿ ನಿರ್ದೇಶಕರು ಸುರೇಶ ಅವರು ತಿಳಿಸಿದ್ದಾರೆ. ಮುಂಗಾರು ಹಂಗಾಮಿನಲ್ಲಿ ಗುರುಮಠಕಲ್ ತಾಲೂಕು 37 ಹಾಗೂ ಯಾದಗಿರಿ ತಾಲೂಕು 121 ಬೆಳೆ ಸಮೀಕ್ಷೆ ಹಾಗೂ ಬೆಳೆವಿಮೆಗೆ ತಾಳೆ ಹೊಂದದೆ ತಿರಸ್ಕೃತಗೊಂಡಿರುವ ಒಟ್ಟು 158 ಪ್ರಕರಣಗಳನ್ನು ಸಂಬಂಧಪಟ್ಟ ಹೋಬಳಿ ಹಾಗೂ ಪಂಚಾಯತಿಯಲ್ಲಿ ಫಲಾನುಭವಿಯ ವಿವರವನ್ನು ಕಚೇರಿಯ ಗೋಡೆಯ ಮೇಲೆ ಪ್ರದರ್ಶಿಸಲಾಗಿದೆ.

ಬೇಕಾಗಿರುವ ದಾಖಲೆಗಳೇನು?

ಒಂದು ವೇಳೆ ನೀವು ತುಂಬಿದ ಬೆಳೆ ಸರಿಯಾಗಿದ್ದರೆ ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕ, ಬೆಳೆ ದೃಢೀಕರಣ ಹಾಗೂ ಎ.ಪಿ.ಎಂ.ಸಿಗೆ ಮಾರಾಟ ಮಾಡಿದ ರಶೀದಿಯನ್ನು ನಿಮ್ಮ ವ್ಯಾಪ್ತಿಗೆ ಬರುವ ಹೋಬಳಿ ಅಧಿಕಾರಿಗಳಿಗೆ 2025 ಫೆಬ್ರವರಿ ವರಿ 25ರ ಒಳಗೆ ಸಲ್ಲಿಸಬೇಕು ಎಂದು ತಿಳಿಸಿದ್ದಾರೆ.

ಇದನ್ನು ಓದಿ:New Ration Card Application ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಬೇಗ ಅರ್ಜಿ ಸಲ್ಲಿಸಿ https://krushiyogi.com/archives/493

ಇದನ್ನು ಓದಿ:ಈ ವರ್ಷದ ಮೈಲಾರ ಕಾರ್ಣಿಕ ನುಡಿ! ಆಕಾಶ ಹೊಳೆಯಿತು ಭೂಮಿ ಬೆಳಗಿತಲೆ
https://krushiyogi.com/archives/490

Leave a Comment