bara parihara status ಮೊಬೈಲ್ ನಂಬರ್ ಹಾಕಿ ಬರ ಪರಿಹಾರ ಪೇಮೆಂಟ್ ಚೆಕ್ ಮಾಡುವುದು ಹೇಗೆ?
ಹಂತ 1: ಇಲ್ಲಿ ನೀಡಿರುವ ಅಧಿಕೃತ ಜಾಲತಾಣದ ಲಿಂಕನ ಮೇಲೆ ಕ್ಲಿಕ್ ಮಾಡಬೇಕು ಇದು ನೇರವಾಗಿ ನಿಮಗೆ ಪರಿಹಾರ ಪೋರ್ಟಲ್ ಗೆ ತೆಗೆದುಕೊಂಡು ಹೋಗುತ್ತದೆ. ತೆಗೆದುಕೊಂಡ ಹೋದ ನಂತರ ತಕ್ಷಣವೇ ನೀವು ಅಲ್ಲಿ ಕೇಳಿರುವ ಮಾಹಿತಿಗಳನ್ನು ಹಾಕಬೇಕು.
https://parihara.karnataka.gov.in/service92/
ಹಂತ 2: ಇಲ್ಲಿ ನೀಡಿರುವ ಮಾಹಿತಿಯು ಮೇಲೆ ನೀವು ಲಿಂಕ್ ಕ್ಲಿಕ್ ಮಾಡಿದ ಮೇಲೆ ಓಪನ್ ಆಗುತ್ತದೆ ಇದರಲ್ಲಿ ನಿಮಗೆ ಮೊದಲಿಗೆ ಈ ವರ್ಷವನ್ನು ಆಯ್ಕೆ ಮಾಡಲು ಕೇಳುತ್ತದೆ 2022-23 ರನ್ನು ಆಯ್ಕೆ ಮಾಡಿಕೊಳ್ಳಬೇಕು ಅದಾದ ನಂತರ ವೃತಮಾನವನ್ನು ಆಯ್ಕೆ ಮಾಡಿಕೊಳ್ಳಬೇಕು ಕರ್ನಾಟಕದಲ್ಲಿ ಸದ್ಯಕ್ಕೆ ಹಾಕಿರುವ ಬರಗಾಲ ಮುಂಗಾರು ಹಂಗಾಮಿಗೆ ಸಂಬಂಧಪಟ್ಟಾಗಿದೆ. ಅದೇ ರೀತಿಯಾಗಿ ವಿಪತ್ತಿನ ವಿಧ ಕೇಳುತ್ತದೆ ಅದರಲ್ಲಿ ಬರಗಾಲ ಎಂದು ಆಯ್ಕೆ ಮಾಡಿಕೊಳ್ಳಬೇಕು. ಇದಾದ ನಂತರ ಕೊನೆಯದಾಗಿ ಗೆಟ್ ಡೇಟಾ ಎಂಬ ಬಟನ್ ಕಾಣಿಸುತ್ತದೆ ಅದರ ಮೇಲೆ ಕ್ಲಿಕ್ ಮಾಡಿಕೊಳ್ಳಬೇಕು.
ಹಂತ 3: ಈ ಹಂತದಲ್ಲಿ ನಿಮಗೆ ಮತ್ತೆ ಕೆಳಗಡೆ ಮೊಬೈಲ್ ನಂಬರ್ ಆಯ್ಕೆವನ್ನು ಆಯ್ಕೆ ಮಾಡಿಕೊಳ್ಳಬೇಕು. ಮತ್ತು ನಿಮ್ಮ 10 ಸಂಖ್ಯೆಯ ಆಧಾರ ಸಂಖ್ಯೆಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ನೀವು ಹಾಕಿ ಸರ್ಚ್ ಅಥವಾ ಪಡೆಯಿರಿ ಎಂಬ ಬಟನ್ ಮೇಲೆ ಕ್ಲಿಕ್ ಮಾಡಬೇಕು ಈಗ ಕೂಡ ನಿಮಗೆ ಜಮಾದ ಪರಿಹಾರ ಹಣದ ಸ್ಟೇಟಸ್ ಅನ್ನು ತೋರಿಸುತ್ತದೆ.