ರಾಜ್ಯಕೆ 8 ದಿನಗಳ ಕಾಲ ಉಷ್ಣಭೀತಿ
ಬಿಸಿಲು ಹೆಚ್ಚಾಗುವ ಸಾಧ್ಯತೆ
ಆತ್ಮೀಯ ರೈತ ಬಾಂಧವರೇ,
ಮೊದಲೇ ಮಳೆ ಇಲ್ಲದೆ ನೀರು ಇಲ್ಲದೆ ಪರದಾಡುವ ಹೊತ್ತಿನಲ್ಲಿ ಮತ್ತೊಂದು ಸಮಸ್ಯೆ ಶೀಘ್ರದಲ್ಲೇತಲೆದೊರಲಿದೆ.ಏಪ್ರಿಲ್‌ನಿಂದ ಜೂನ್ ಅವಧಿಯಲ್ಲಿ ಭಾರತವು ತೀವ್ರವಾದ ಬೇಸಿಗೆ ಅನುಭವಿಸಲಿದೆ. ಮಧ್ಯ ಭಾರತ ಮತ್ತು ದಕ್ಷಿಣ ಭಾರತ ಕೆಟ್ಟ ಪರಿಣಾಮ ಎದುರಿಸುವ ನಿರೀಕ್ಷೆಯಿದೆ. ಕರ್ನಾಟಕವು ಏಪ್ರಿಲ್‌ನಲ್ಲಿ ಸಾಮಾನ್ಯದ 1ರಿಂದ 3 ದಿನಗಳ ಬದಲು 2ರಿಂದ 8 ದಿನ ಉಷ್ಣ ಅಲೆಯನ್ನು ಅನುಭವಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಸೋಮವಾರ ಮುನ್ಸೂಚನೆ ನೀಡಿದೆ.
ಏಪ್ರಿಲ್-ಜೂನ್ ಅವಧಿಯಲ್ಲಿ ದೇಶದ ಹೆಚ್ಚಿನ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಗರಿಷ್ಠ ತಾಪಮಾನದ ಸಾಧ್ಯತೆಯಿದೆ, ಮಧ್ಯ ಮತ್ತು ದಕ್ಷಿಣ ಭಾರತದಲ್ಲಿ ಇದರ ಹೆಚ್ಚಿನ ಸಂಭವನೀಯತೆ ಇರುತ್ತದೆ ಎಂದು ಐಎಂಡಿ ಮಹಾನಿರ್ದೇಶಕ ಮೊಹಾಪಾತ್ರ ಹೇಳಿದ್ದಾರೆ.
ಪಶ್ಚಿಮ ಹಿಮಾಲಯ ಪ್ರದೇಶ, ಈಶಾನ್ಯ ರಾಜ್ಯಗಳು ಮತ್ತು ಉತ್ತರ ಒಡಿಶಾದ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ. ಈ ಅವಧಿಯಲ್ಲಿ ಬಯಲು ಸೀಮೆಯ ಬಹುತೇಕ ಭಾಗಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚಿನ ಶಾಖದ ದಿನಗಳು ಕಂಡುಬರುತ್ತವೆ. ದೇಶದ ವಿವಿಧ ಭಾಗಗಳಲ್ಲಿ ಸಾಮಾನ್ಯವಾಗಿ ಕಂಡುಬರುವ 4ರಿಂದ 8 ದಿನಗಳವರೆಗಿನ ಶಾಖದ ದಿನಗಳು ಈ ಸಲ 20ಕ್ಕೆ ಏರುವ ಸಾಧ್ಯತೆ ಇದೆ ಎಂದಿದ್ದಾರೆ.
ಮೊದಲೇ ಬರಪೀಡಿತ ಎಂದು 223ತಾಲೂಕುಗಳು ಘೋಷಣೆಯಾಗಿವೆ.
ದೇಶದ ಯಾವ ಯಾವ ಸ್ಥಳಗಳಿಗೆ ಹೆಚ್ಚಿನ ಬಿಸಿ ಮುಟ್ಟಲಿದೆ.ಭಾರತದ ಹಲವಾರು ರಾಜ್ಯಗಳಿಗೆ ಇದರ ಬಿಸಿ ಮುಟ್ಟಲಿದೆ. ಈ ಸಮಯದಲ್ಲಿ ಜನರು ತಮ್ಮ ಅರೋಗ್ಯ ಕಾದುಕೊಳ್ಳುವುದು ಬಹಳ್ ಮುಖ್ಯವಾಗಿದೆ.
ಗುಜರಾತ್, ಮಧ್ಯ ಮಹಾರಾಷ್ಟ್ರ, ಉತ್ತರ ಕರ್ನಾಟಕ, ರಾಜಸ್ಥಾನ, ಮಧ್ಯಪ್ರದೇಶ, ಒಡಿಶಾ, ಉತ್ತರ ಛತ್ತೀಸ್‌ಗಢ ಮತ್ತು ಆಂಧ್ರಪ್ರದೇಶಗಳು ಬಿಸಿ ಗಾಳಿಯ ಕೆಟ್ಟ ಪರಿಣಾಮವನ್ನು ಅನುಭವಿಸುವ ಸಾಧ್ಯತೆಯಿದೆ. ಏಪ್ರಿಲ್‌ನಲ್ಲಿ ಪಶ್ಚಿಮ ಹಿಮಾಲಯ ಪ್ರದೇಶ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಲ್ಲಿ ಸಾಮಾನ್ಯದಿಂದ ಸಾಮಾನ್ಯಕ್ಕಿಂತ ಕಡಿಮೆ ಗರಿಷ್ಠ ತಾಪಮಾನದ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಮಳೆರಾಯ ಬಂದು ಭೂಮಿ ಸ್ಪರ್ಶ ಮಾಡುವವರೆಗೆ ಈ ಸ್ಥಿತಿ ತಪ್ಪಿದಲ್ಲ. ಮಳೆ ಬರುವಿಕೆಗಾಗಾಗಿ ಕಾಯುವುದು ಸಂಧಿಗ್ದ ಪರಿಸ್ಥಿತಿ ಆಗಿದೆ. ಮನ್ಸೂನ್ ಬರುವಿಕೆಗೆ ರೈತ ಕಾಯಬೇಕಾಗಿರುದು ಅನಿವಾರ್ಯವಾಗಿದೆ.