ಹೊಸ ರೇಷನ್ ಕಾರ್ಡ್ ಅರ್ಜಿಆಹ್ವಾನ
ಏಪ್ರಿಲ್ 1ರಿಂದ ಪ್ರಾರಂಭ
ಕೂಡಲೇ ಅರ್ಜಿ ಸಲ್ಲಿಸಿ
ಆತ್ಮೀಯ ರೈತ ಭಾಂದವರೇ,
ನಿಮ್ಮ ಹತ್ತಿರ ಬಿಪಿಎಲ್ ಕಾರ್ಡ್ ಇಲ್ಲವೇ? ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದೆ? ಸರಿ ಇವತ್ತಿನಿಂದಲೇ ಪ್ರಾರಂಭವಾಗುತ್ತಿರುವ ಬಿಪಿಎಲ್ ಕಾರ್ಡಿಗೆ ಅರ್ಜಿ ಸಲ್ಲಿಸಿರಿ.
ಎಫ್ರಿಲ್ ಒಂದರಿಂದ ಹೊಸ ರೇಷನ್ ಕಾರ್ಡನ್ನು ಮಾಡಲು ಅರ್ಜಿಯನ್ನು ಆಹ್ವಾನಿಸಲಾಗಿದೆ. ಪಡಿತರ ಚೀಟಿಯನ್ನು ಪಡೆದುಕೊಳ್ಳಲು ಇದು ಒಂದು ನಿಮಗೆ ಉತ್ತಮ ಅವಕಾಶವಾಗಿದೆ. ಅವಕಾಶವನ್ನು ಕಳೆದುಕೊಂಡು ನಿರಾಶರಾಗಬೇಡಿ ಇದನ್ನು ಉಪಯೋಗಿಸಿಕೊಂಡು ಬೇಗನೆ ನಿಮ್ಮ ಕೆಲಸವನ್ನು ಮಾಡಿಕೊಳ್ಳಿ.
ಹೊಸದಾಗಿ ಮದುವೆಯಾದವರು ಹೇಗೆ ಅರ್ಜಿಯನ್ನು ಸಲ್ಲಿಸಬಹುದು, ಹೆಸರನ್ನು ಹೇಗೆ ಬದಲಾಯಿಸಿಕೊಳ್ಳುವುದು, ರೇಷನ್ ಕಾರ್ಡ್ ಗೆ ಹೇಗೆ ಅರ್ಜಿ ಸಲ್ಲಿಸುವುದು ಮತ್ತು ಹೇಗೆ ಅದನ್ನು ಆನ್ಲೈನಲ್ಲಿ ಸಲ್ಲಿಸುವುದು ಎಂಬುದನ್ನು ನೋಡೋಣ. ರೇಷನ್ ಕಾರ್ಡ್ ಗೆ ಅರ್ಜಿಸಲ್ಲಿಸಲು ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.
* ಮತದಾರರ ಗುರುತಿನ ಚೀಟಿ
* ಮೊಬೈಲ್ ನಂಬರ್
* ಆದಾಯ ಪ್ರಮಾಣ ಪತ್ರ
* ಜಾತಿ ಪ್ರಮಾಣ ಪತ್ರ
* ಆಧಾರ್ ಕಾರ್ಡ್
* ಪಾಸ್ಪೋರ್ಟ್ ಸೈಜ್ ಫೋಟೋ
ಹೀಗೆ ನೀವು ಎಲ್ಲಾ ದಾಖಲೆಗಳನ್ನು ನೀವು ಹೊಂದಿದ್ದರೆ ಹೊಸ ಪಡಿತರ ಚೀಟಿಗೆ ನೀವು ಅರ್ಜಿಯನ್ನು ಸಲ್ಲಿಸಬಹುದು ಮತ್ತು ಹೊಸ ಪಡಿತರ ಚೀಟಿಯನ್ನು ನೀವು ಪಡೆದುಕೊಳ್ಳಬಹುದು. ನೀವು ಸೇವಾ ಸಿಂಧು ಕೇಂದ್ರಗಳಿಗೆ ಅಥವಾ ಮನೆಯಲ್ಲಿ ಕುಳಿತುಕೊಂಡು ನಿಮ್ಮ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸುವಾಗ ನಿಮ್ಮ ಮೊಬೈಲ್ ನಂಬರ್ ಗೆ ಓಟಿಪಿ ಬರುತ್ತದೆ.
ರೇಷನ್ ಕಾರ್ಡ್ ಹೊಂದಿರುವವರಿಗೆ ಆಗುವ ಲಾಭಗಳು ಲಾಭಗಳು :
* ಉಚಿತವಾಗಿ ಅಕ್ಕಿಯನ್ನು ವಿತರಣೆ ಮಾಡುತ್ತಾರೆ.
* ನ್ಯೂ ಬಿಪಿಎಲ್ ರೇಷನ್ ಕಾರ್ಡ್ ಹೊಂದಿದ್ದು ಬಡತನ ರೇಖೆಗಿಂತ ಕೆಳಗಡೆ ಇದ್ದರೆ ಉಜ್ವಲ ಯೋಜನೆಯಲ್ಲಿ ಉಚಿತವಾಗಿ ಗ್ಯಾಸನ್ನು ವಿತರಣೆ ಮಾಡುತ್ತಾರೆ.
* ಉಜ್ವಲ ಯೋಜನೆಯಲ್ಲಿರುವ ಗ್ಯಾಸ್ ಸಿಲೆಂಡರ್ ಗೆ ನೂರು ರೂಪಾಯಿ ಸಬ್ಸಿಡಿಯನ್ನು ನೀಡಲಾಗುತ್ತದೆ.
* ವೇಳೆ ನೀವು ಬಿಪಿಎಲ್ ಕಾರ್ಡನ್ನು ಹೊಂದಿದ್ದರೆ ರಾಜ್ಯ ಸರ್ಕಾರದವರು ನಿಮಗೆ ನನ್ನ ಭಾಗ್ಯ ಯೋಜನೆ ಅಡಿ ಮೊತ್ತವನ್ನು ನಿಮ್ಮ ಖಾತೆಗೆ ಡಿಬಿಟಿ ಮುಖಾಂತರ ನೇರವಾಗಿ ಹಾಕುತ್ತಾರೆ.
ಹೀಗೆ ಬಿಪಿಎಲ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅನ್ನು ಹೊಂದಿದ್ದರೆ ಅನೇಕ ಲಾಭಗಳನ್ನು ನೀವು ಪಡೆದುಕೊಳ್ಳಬಹುದು ಆದ ಕಾರಣ ಬೇಗನೆ ಪಡಿತರ ಚೀಟಿ ಮಾಡಿಸಿಕೊಳ್ಳಿ.