government schemes

ಮೀನುಗಾರಿಕೆ ಸಲಕರಣೆಗಳ  ಕಿಟ್ :ಇಂದೇ ಅರ್ಜಿ ಸಲ್ಲಿಸಿ

ಆತ್ಮೀಯ ರೈತ ಭಾಂದವರೇ,
ಇತ್ತೀಚಿಗೆ ಪ್ರಾಮುಖ್ಯತೆ ಪಡೆಯುತ್ತಿರುವ ಮೀನುಗಾರಿಕೆ ರೈತರಿಗೆ ಒಂದು ಉಪಾಕಸುಬು ಆಗಿ ಸಹಾಯ ಮಾಡುತ್ತಿದೆ. ಕರಾವಳಿ ಭಾಗದಲ್ಲಿ ಜನರ ಜೀವಾಳ ಆಗಿರುವ ಮೀನುಗಾರಿಕೆ ಈಗ ಎಲ್ಲಾ ಕಡೆ ಅಂದರೆ ನೀರು ಹೊಂದಿರುವ ಎಲ್ಲಾ ಭಾಗಗಳಲ್ಲಿ ತನ್ನ ಪ್ರಭಾವ ಬಿರುತ್ತಿದೆ.ಮೀನುಗಾರಿಕೆಯು ವಿದೇಶಿ ವಿನಿಮಯ ಹಾಗೂ ಉದ್ಯೋಗಾವಕಾಶದ ಸೃಷ್ಟಿಯ ಮೂಲವಾಗಿರುವುದರಿಂದ ದೇಶದ ಆರ್ಥಿಕ ಪ್ರಗತಿಯಲ್ಲಿ ಪ್ರಮುಖ ಸ್ಥಾನವನ್ನು ಹೊಂದಿದೆ.

ಮೀನುಗಾರಿಕೆ ಇಲಾಖೆಯು ಈ ಸಂಪನ್ಮೂಲಗಳ ಸಾರ್ವಜನಿಕರ ಸದ್ಬಳಕೆಗಾಗಿ ಹಾಗೂ ವಿಶೇಷವಾಗಿ ಮೀನುಗಾರರ ಕಲ್ಯಾಣಕ್ಕಾಗಿ ಹಲವಾರು ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಕೃಷಿ ಹೊಂಡಗಳಲ್ಲಿ ಮೀನು ಸಾಕಾಣಿಕೆ ಹೆಚ್ಚು ಬಯಲು ಸೀಮೆ ಜಿಲ್ಲೆಗಲ್ಲಿಲ್ಲಿ ಕಾಣಸಿಗುತ್ತದೆ.ಮೀನುಗಾರಿಕೆ ಮಾಡುವುದರಿಂದ ರೈತರಿಗೆ ಹೆಚ್ಚಿನ ಲಾಭ ಲಭಿಸುತ್ತದೆ. ಇದನ್ನು ಕೃಷಿ ಜೊತೆಗೆ ಪರ್ಯಾಯ ಉದ್ಯಮವಾಗಿ ಮಾಡಬಹುದು.


ಗಣಿಬಾಧಿತ ಜಿಲ್ಲೆಗಳ ಸಮಗ್ರ ಅಭಿವೃದ್ಧಿ ಯೋಜನೆ ಅಡಿ (CEPMIZ) 2023-24ನೇ ಸಾಲಿಗೆ ಸಂಬಂಧಿಸಿದಂತೆ ಅರ್ಹ ಫಲಾನುಭವಿಗಳಿಗೆ ಶೇ.100ರಷ್ಟು ಸಹಾಯಧನದಲ್ಲಿ ಮೀನುಗಾರಿಕೆ ಸಲಕರಣೆ ಯೋಜನೆಯಡಿ ಆಸಕ್ತ ಮೀನುಗಾರ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಏ.20 ಕೊನೆದಿನವಾಗಿದೆ. ಚಿತ್ರದುರ್ಗ ತಾಲೂಕಿಗೆ ಮಾತ್ರ ಯೋಜನೆ ಸೀಮಿತವಾಗಿದ್ದು, ಭೀಮಸಮುದ್ರ, ವಿ. ಪಾಳ್ಯ, ಮೇಗಳಹಳ್ಳಿ, ಮಾರಿಜೋಗಿಹಳ್ಳಿ, ಕಡ್ಲೆಗುದ್ದು, ಬೋಮವ್ವನಾಗ್ತಿಹಳ್ಳಿ, ತುರೆಬೈಲು, ಮಳಲಿ, ನೆಲ್ಲಿಕಟ್ಟೆ, ಹಿರೇಗುಂಟನೂರು, ಹಳಿಯೂರು, ಬೆಟ್ಟದನಾಗೇನಹಳ್ಳಿ, ಬಸವಪುರ, ಅಮೃತಪುರ, ದಿಂಡನಹಳ್ಳಿ, ಬೊಮ್ಮೆನಹಳ್ಳಿ, ಸಿದ್ದಾಪುರ, ಮಾನಂಗಿ, ಮಾಳಪ್ಪನಹಟ್ಟಿ, ಕೋಣನೂರು, ಚಿಕ್ಕನಹಳ್ಳಿ, ಡಿ.ಮದಕರಿಪುರ, ಆಲಘಟ್ಟ, ಸಿರಿಗೆರೆ, ಓಬವ್ವನಾಗ್ತಿಹಳ್ಳಿ, ಸಿದ್ದವ್ವನಹಳ್ಳಿ, ದೊಡ್ಡಿಗನಾಳ್‌, ಡಿ. ಹೊಸಹಟ್ಟಿ ಗ್ರಾಮಗಳ ಸಾರ್ವಜನಿಕರು ಮಾತ್ರ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.



ಹೆಚ್ಚಿನ ಮಾಹಿತಿಗಾಗಿ ಚಿತ್ರದುರ್ಗ ಮೀನುಗಾರಿಕೆ ಸಹಾಯಕ ನಿರ್ದೇಶಕರನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಿ ಮಾಹಿತಿಯನ್ನು ಪಡೆಯಬಹುದು ಎಂದು ತಿಳಿಸಿದೆ.ಈ ಯೋಜನೆ ಚಿತ್ರದುರ್ಗ ಜಿಲ್ಲೆಗೆ ಮಾತ್ರವೇ ಸಂಬಂಧಿಸಿರುತ್ತದೆ.

LEAVE A RESPONSE

Your email address will not be published. Required fields are marked *

Open chat
Hello 👋
Can we help you?