ಆತ್ಮೀಯ ರೈತ ಬಾಂಧವರೇ ಭೂಮಿ ಸರ್ವೆ ಮಾಡುವುದು ಹಿಂದಿನಿಂದ ಬಂದಿರುವ ಒಂದು ವಿಧಾನವಾಗಿದೆ ಏಕೆಂದರೆ ಅಣ್ಣ ತಮ್ಮಂದಿರು ಸಣ್ಣವರಿದ್ದಾಗ ಚೆನ್ನಾಗಿ ಇದ್ದು ಮುಂದೆ ಒಂದು ದಿನ ದೊಡ್ಡವರಾದಾಗ ಮದುವೆಯಾದ ಮೇಲೆ ತಮ್ಮ ಜಮೀನು ತಮಗೆ ಬೇಕು ಎಂದು ಹಠ ಹಿಡಿಯುತ್ತಾರೆ.
ಈ ಸಮಯದಲ್ಲಿ ನೀವು ನಿಮ್ಮ ಜಮೀನನ್ನು ಅಳತೆ ಮಾಡಬೇಕಾಗುತ್ತದೆ ಮತ್ತು ಅವನ ಪಾಲಿಗೆ ಎಷ್ಟು ಬರುತ್ತದೆ ಅವನಿಗೆ ನೀಡಬೇಕಾಗುತ್ತದೆ ಮತ್ತು ನಿಮ್ಮ ಪಾಲಿಗೆ ಎಷ್ಟು ಬರುತ್ತದೆ ಅದನ್ನು ನೀವು ಇಟ್ಟುಕೊಳ್ಳಬೇಕಾಗುತ್ತದೆ.
ಹಾಗಿದ್ದರೆ ನಿಮ್ಮಿಬ್ಬರ ಜಮೀನನ್ನು ಬೇರೆ ಬೇರೆ ಮಾಡಲು ಅಂದರೆ ಅಳತೆ ಮಾಡಲು ಸರ್ವೆ ಬರಬೇಕಾಗುತ್ತದೆ?
ಹೌದು ಆಗಿನ ಕಾಲದಲ್ಲಿ ಸರ್ವೆಯರ್ ಬರುವುದು ಅವಶ್ಯಕತೆ ಇತ್ತು, ಆದರೆ ಈಗಿನ ಕಾಲದಲ್ಲಿ ಅಂದರೆ ಪ್ರಸ್ತುತ ದಿನಗಳಲ್ಲಿ ಅದರ ಅವಶ್ಯಕತೆ ಇಲ್ಲ ನೀವು ಆನ್ಲೈನ್ ನಲ್ಲಿ ಸರ್ವೆ ಮಾಡಲು ಅರ್ಜಿಯನ್ನು ಹಾಕಬಹುದು ಅಥವಾ ಮೊಬೈಲ್ನಲ್ಲಿ ಸರ್ವೆ ಮಾಡುವ ಅವಕಾಶವನ್ನು ಸಹ ಸರ್ಕಾರ ಅಥವಾ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಹಲವಾರು ಉಪಯೋಗವಾಗುವ ಮೊಬೈಲ್ ಅಪ್ಲಿಕೇಶನ್ಗಳನ್ನು ಅಭಿವೃದ್ಧಿಪಡಿಸಿದೆ.
ಹೇಗೆ ಜಮೀನಿನ ಸರ್ವೆ ಸರಿಯಾಗಿ ಆಗುತ್ತಾ?
1.ಹೌದು ಖಂಡಿತವಾಗಿಯೂ 90% ಗಿಂತ ಹೆಚ್ಚು ಸರಿಯಾಗಿ ಭೂಮಿಯನ್ನು ಆನ್ಲೈನ್ನಲ್ಲಿ ಅಳತೆ ಮಾಡಬಹುದು ಅಳತೆ ಮಾಡಲು ನೀವು ಕೆಲವೊಂದು ವಿಧಾನಗಳನ್ನು ಅನುಸರಿಸಬೇಕು ಮತ್ತು ನೀವು ವಿಧಾನದ ಅನುಗುಣವಾಗಿ ನಿಮಗೆ ಸಾಮಾನ್ಯವಾಗಿ ಒಂದು ಎಕರೆಗೆ ಎಷ್ಟು ಹೆಜ್ಜೆಗಳು ಎಂದು ಇದ್ದೇ ಇರುತ್ತದೆ.
2.ಅಲ್ಲಿಯವರೆಗೆ ನೀವು ಮೊಬೈಲ್ ಹಿಡಿದುಕೊಂಡು ನಡೆಯುತ್ತಾ ಹೋದರೆ ಅಲ್ಲಿ ನಿಮಗೆ ಸರಿಯಾಗಿ ಗೊತ್ತಾಗುತ್ತದೆ. ಹೇಗೆ ಗೊತ್ತಾಗುತ್ತದೆ ನೀವು ಎಲ್ಲವೂ ನಿಮ್ಮ ಅಪ್ಲಿಕೇಶನ್ ನಲ್ಲಿಯೇ ಸೆಟ್ ಮಾಡಬೇಕಾಗುತ್ತದೆ.
https://play.google.com/store/apps/details?id=lt.noframe.fieldsareameasure
ಇಲ್ಲಿ ನೀಡಿರುವ ಲಿಂಕ್ನ ಮೇಲೆ ಕ್ಲಿಕ್ ಮಾಡಿದರೆ ನಿಮಗೆ ಒಂದು ಮೊಬೈಲ್ ಅಪ್ಲಿಕೇಶನ್ ದೊರೆಯುತ್ತದೆ ಮತ್ತು ಅದನ್ನು ಯಾವ ರೀತಿಯಾಗಿ ಬಳಕೆ ಮಾಡಬೇಕು ಎಲ್ಲವೂ ನಿಮಗೆ ಕೆಳಗಡೆ ಚಿತ್ರಗಳ ಮೂಲಕ ತೋರಿಸಲಾಗುತ್ತದೆ ಅದೇ ರೀತಿಯಾಗಿ ನೀವು ಕೂಡ ಅದನ್ನು ಬಳಕೆ ಮಾಡಿ.
3.ಗೊತ್ತಿಲ್ಲದಿದ್ದರೆ ತಿಳಿದವರಿಗೆ ಅದನ್ನು ಬಳಕೆ ಮಾಡುವುದು ಹೇಗೆ ಅದಕ್ಕೆ ಆದ ಪ್ರತ್ಯೇಕ ವಿಡಿಯೋಗಳನ್ನು ಸಹ ಅಪ್ಲೋಡ್ ಮಾಡಲಾಗಿದೆ ಇಂತಹ ಉಚಿತವಾಗಿರುವ ಅಪ್ಲಿಕೇಶನ್ಗಳ ಸಹಾಯದಿಂದ ನೀವು ಆನ್ಲೈನ್ ನಲ್ಲಿಯೇ ಜಮೀನು ಸರ್ವೆ ಮಾಡಬಹುದು.
4.ಮೊದಲಿಗೆ ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಿ ನಂತರ ನೀವು ಲೆಕ್ಕಾಚಾರ ಮಾಡುವ ಮೊದಲೇ ಎಕರೆ ಕಿಲೋಮಿಟರ್ ಮತ್ತು ಅಡಿ ಅಥವಾ ಪೀಠಗಳಲ್ಲಿ ನೀವು ಮೊಬೈಲ್ ಅಪ್ಲಿಕೇಶನ್ ಅನ್ನು ಸೆಟ್ ಮಾಡಬೇಕಾಗುತ್ತದೆ.
5. ನಂತರ ಒಂದು ದಿಕ್ಕಿನಿಂದ ಪ್ರಾರಂಭಿಸಿ ನಿಮ್ಮ ಜಮೀನಿನ ಯಾವ ಯಾವ ಭಾಗದಲ್ಲಿ ನೀವು ಹೋಗಬೇಕು ಅದೇ ರೀತಿಯಾಗಿ ಹೋಗಬೇಕು ಹೋದ ನಂತರ ನಿಮಗೆ ವಾಪಸ್ ಅದೇ ಜಾಗಕ್ಕೆ ಬಂದಾಗ ನೀವು ಓಕೆ ಮಾಡಿದ ಮೇಲೆ ಸೇವ್ ಮಾಡಿದ ಮೇಲೆ ನಿಮಗೆ ಎಷ್ಟು ಏರಿಯಾ ಆಗಿದೆ ಅಥವಾ ಎಷ್ಟು ಜಮೀನಿನ ಅಳತೆಯಾಗಿದೆ ನೀವು ನಡೆದಾಡಿರುವ ಪ್ರದೇಶ ಎಷ್ಟಾಗಿದೆ ಎಂದು ನೀವು ಚೆಕ್ ಮಾಡಬಹುದು.
ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ
https://krushiyogi.com/archives/670
ಇದನ್ನು ಓದಿ:ಹವಮಾನ ಇಲಾಖೆ ಮುನ್ಸೂಚನೆ ಮುಂದಿನ ವಾರದಲ್ಲಿ 3 ದಿನ ಭಾರೀ ಮಳೆಮುಂದಿನ ವಾರದಲ್ಲಿ 3 ದಿನ ಭಾರೀ ಮಳೆ https://krushiyogi.com/archives/666
2 thoughts on “ಅಂಗೈಯಲ್ಲಿ ಭೂಮಿ ಅಳತೆ ಮಾಡಲು ಮೊಬೈಲ್ ಇದ್ದರೆ ಸಾಕು ಸರ್ವೆಯರ್ ಬೇಕಾಗಿಲ್ಲ!”