ಆತ್ಮೀಯರೇ ನೀವು ಜಮೀನು ಹೊಂದಿದ್ದೀರಿ ಹಾಗೂ ನಿಮ್ಮ ಜಮೀನಿನ ಸಾಲ ಎಷ್ಟಿದೆ ಅಂದರೆ ಅದನ್ನು ಮಾರಾಟ ಮಾಡಲು ಅಥವಾ ಹೊಸ ಜಮೀನವನ್ನು ತೆಗೆದುಕೊಳ್ಳಲು ಸರಕಾರದ ಯಾವುದೇ ರೀತಿ ಸಾಲ ಇರಬಾರದು ಅದಕ್ಕಾಗಿ ಈಗಾಗಲೇ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲವಿದೆ ಅದನ್ನು ಆನ್ಲೈನಲ್ಲಿ ಚೆಕ್ ಮಾಡಿಕೊಳ್ಳಬಹುದು. ನಿಮ್ಮ ವೈಯಕ್ತಿಕ ಮಾಡಿರುವ ಸಾಲ ಬಿಟ್ಟು ನಿಮ್ಮ ಜಮೀನಿನ ಮೇಲೆ ಇರುವ ಸಾಲ ಎಷ್ಟು ಅದನ್ನು ನೀವು ತಿಳಿದುಕೊಳ್ಳಬೇಕು ಮತ್ತು ನೀವು ಇತರರಿಂದ ಜಮೀನು ಖರೀದಿ ಮಾಡುವಾಗ ಸಹ ಇದನ್ನು ನೋಡಿಕೊಂಡೆ ಜಮೀನು ಖರೀದಿ ಮಾಡಬೇಕು ಇಲ್ಲದಿದ್ದರೆ ಮುಂದೊಂದು ದಿನಗಳಲ್ಲಿ ಆ ಸಾಲವು ನೀವೇ ಬರಿಸಬೇಕಾಗಬಹುದು.
ಆನ್ಲೈನ್ ನಲ್ಲಿ ನಿಮ್ಮ ಜಮೀನಿನ ಮೇಲೆ ಎಷ್ಟು ಸಾಲ ಇದೆ ಚೆಕ್ ಮಾಡುವುದು ಹೇಗೆ?
ಇದನ್ನು ನೀವು ಆನ್ಲೈನ್ ನಲ್ಲಿ ಚೆಕ್ ಮಾಡಿ ಕೊಳ್ಳಲು ಮೊದಲಿಗೆ ಸರ್ಕಾರದ ಅಧಿಕೃತ ಜಾಲತಾಣ ಭೂಮಿ ಆನ್ಲೈನ್ ವೆಬ್ಸೈಟ್ ಗೆ ನೀವು ಬೇಟಿ ನೀಡಬೇಕು ಇದರಲ್ಲಿ ನೀವು ಮೊದಲಿಗೆ ನಿಮ್ಮ ಪಹಣಿ ಪತ್ರವನ್ನು ಚೆಕ್ ಮಾಡಿಕೊಳ್ಳಬೇಕು. ನಿಮ್ಮ ವೈಯಕ್ತಿಕ ಸಾಲವನ್ನು ಬಿಟ್ಟು ಉಳಿದ ಯಾವುದೇ ರೀತಿಯ ಬ್ಯಾಂಕುಗಳಲ್ಲಿ ಪಡೆದುಕೊಂಡಿರುವ ಸಾಲವನ್ನು ನಿಮ್ಮ ಪಹಣಿ ಪತ್ರದಲ್ಲಿ ನಿಮ್ಮ ಸರ್ವೇ ನಂಬರ್ ಒಂದಿಗೆ ಕೂಡಿಸುತ್ತಾರೆ ಹೀಗಾಗಿ ಅದನ್ನು ನೀವು ಮೊದಲು ಪರಿಶೀಲಿಸಿಕೊಳ್ಳಬೇಕು ಅದಕ್ಕಾಗಿ ನೀವು ಪಹಣಿ ಪತ್ರವನ್ನು ವೀಕ್ಷಿಸಬೇಕು ಅದಕ್ಕಾಗಿ ಪಹಣಿ ಪತ್ರ ನಿಮ್ಮ ಬಳಿ ಇಲ್ಲದೆ ಇದ್ದರೂ ಸಹ ಆನ್ಲೈನಲ್ಲಿ ನಿಮ್ಮ ಸರ್ವೇ ನಂಬರ್ ಹಾಕಿ ಪಾಣಿಪತ್ರವನ್ನು ತೆಗೆಯಬಹುದು.
ಹಂತ 1:
ಅಧಿಕೃತವಾಗಿ ಪ್ರಸ್ತುತ ವರ್ಷದ ಪಹಣಿ ಪತ್ರವನ್ನು ನೀವು ಕೆಳಗಡೆ ನೀಡಿರುವ ಲಿಂಕ್ ಅನ್ನು ಕ್ಲಿಕ್ ಮಾಡುವ ಮೂಲಕ ಡೌನ್ಲೋಡ್ ಮಾಡಿಕೊಳ್ಳ ಬಹುದು ಮತ್ತು ವೀಕ್ಷಿಸಬಹುದಾಗಿದೆ.
https://landrecords.karnataka.gov.in/
ಹಂತ 2:
ಇದರಲ್ಲಿ ಮಾಹಿತಿ ಕೇಳಿರುವಂತೆ ನೀವು ನಿಮ್ಮ ಜಿಲ್ಲೆ ತಾಲೂಕು ಹೋಬಳಿ ನಿಮ್ಮ ಊರನ್ನು ಆಯ್ಕೆ ಮಾಡಿ ನಂತರ ಸರ್ವೇ ನಂಬರನ್ನು ಹಾಕಬೇಕು ಸರ್ವೇ ನಂಬರ್ ಹಾಕಿದಾಗ ನಿಮ್ಮ ಹೆಸರು ತನ್ನಿಂದ ತಾನೇ ತೋರಿಸುತ್ತದೆ, ನಿಮ್ಮ ಹೆಸರು ತೋರಿಸಿದ ನಂತರ ಅದನ್ನು ಆಯ್ಕೆ ಮಾಡಿಕೊಂಡು ನಂತರ ನಿಮ್ಮ ಇಸಾ ನಂಬರ್ ಆಯ್ಕೆ ಮಾಡಿಕೊಳ್ಳಬೇಕು. ಆಯ್ಕೆ ಮಾಡಿಕೊಂಡು ನಂತರ ಒಂದು ಆಯ್ಕೆ ಇರುತ್ತದೆ ಅದರ ಮೇಲೆ ನೀವು ಕ್ಲಿಕ್ ಮಾಡಬೇಕು.
ಹಂತ 3:
ಈಗ ಬಲಭಾಗದ ಕೆಳಗಡೆ ವ್ಯೂ ಎಂದು ಆಯ್ಕೆ ಅದರ ಮೇಲೆ ಕ್ಲಿಕ್ ಮಾಡಿದಾಗ ಈಗ ನೀವು ಪ್ರಸ್ತುತ ಇವತ್ತಿನವರೆಗೆ ಪಹಣಿ ಪತ್ರದ ಡೀಟೇಲ್ಸ್ ಅನ್ನು ಡೌನ್ಲೋಡ್ ಮಾಡುತ್ತೀರಿ ಮತ್ತು ಅದನ್ನು ವೀಕ್ಷಣೆ ಮಾಡುತ್ತೀರಿ ಅದನ್ನು ವೀಕ್ಷಿಸುತ್ತಾ ಹೋಗಬೇಕು ಮತ್ತೆ ಪಾಣಿ ಪತ್ರವನ್ನು ಗಮನಿಸಿ ಪಹಣಿ ಪತ್ರದ ಮೇಲುಗಡೆ ಬಲಬಾಗದಲ್ಲಿ ಮೊದಲಿಗೆ ನಿಮ್ಮ ಹೆಸರು ನಂತರ ನಿಮ್ಮ ಸಾಲ ಎಷ್ಟಿದೆ ತೋರಿಸುತ್ತದೆ ಮತ್ತು ಅದರೊಂದಿಗೆ ನಿಮ್ಮ ಜಮೀನಿನ ಮೇಲೆ ಏರಿರುವ ಭೋಜ ಹಾಗೂ ನೀವು ಸೊಸೈಟಿಗಳಿಂದ ಪಡೆದಿರುವ ಸಾಲ ಆಗಿರಬಹುದು ಮತ್ತು ಪ್ರತ್ಯೇಕ ಬ್ಯಾಂಕುಗಳಿಂದ ಪಡೆದಿರುವ ಸಾಲಗಳನ್ನು ಅಲ್ಲಿ ಮೆಂಷನ್ ಮಾಡಲಾಗುತ್ತದೆ.
ಈ ರೀತಿಯಾಗಿ ನಿಮ್ಮ ಪ್ರತ್ಯೇಕ ಸಾಲ ಬಿಟ್ಟು ನಿಮ್ಮ ಜಮೀನಿನ ಸರ್ವೆ ನಂಬರ್ ಸಾಲವನ್ನು ಗಮನಿಸಿಕೊಳ್ಳಬೇಕು ಮತ್ತು ಯಾವುದೇ ರೀತಿ ಜಮೀನಿಗೆ ಸಂಬಂಧಪಟ್ಟ ಭೂಮಿ ಅಳತೆ ಮಾಡುವುದಾಗಲಿ ಅಥವಾ ಭೂಮಿಯನ್ನು ಇನ್ನೊಬ್ಬರ ಹೆಸರಿಗೆ ವರ್ಗಾವಣೆ ಮಾಡುವುದಾಗಲಿ ಅಥವಾ ಮಾರಾಟ ಮಾಡುವುದಾಗಲಿ ಅಥವಾ ಭೂಮಿ ಖರೀದಿ ಮಾಡುವುದಾಗಲಿ ಯಾವುದಾದರೂ ಒಂದು ಕೆಲಸವನ್ನು ನೀವು ಮಾಡಬೇಕಾದರೆ ಅದರಲ್ಲಿ ಸಂಪೂರ್ಣವಾಗಿ ಪುಣ್ಯ ಸಾಲ ಇದ್ದರೆ ಮಾತ್ರ ಅದನ್ನು ಮಾಡಬಹುದು ಇಲ್ಲದಿದ್ದರೆ ಏನು ಮಾಡಲು ಸಾಧ್ಯವಿಲ್ಲ ಈಗಲೇ ಎಷ್ಟಿದೆ ಎಂದು ತಿಳಿದುಕೊಂಡು ನಂತರ ಅದಕ್ಕೆ ತಕ್ಕಂತೆ ಕ್ರಮಗಳನ್ನು ಕೈಗೊಳ್ಳಬೇಕು.
ಇದನ್ನು ಓದಿ:ನಿಮ್ಮ ಜಮೀನು ಮತ್ತೆ ಅಳತೆ ಅಥವಾ ಸರ್ವೇ ಮಾಡಬೇಕಾ? ಸರ್ವೆಯರಗಳು ಸಿಗುತ್ತಿಲ್ಲವೇ? ಇಲ್ಲಿದೆ ನೋಡಿ ಹೊಸ ಟೆಕ್ನಾಲಜಿ
https://krushiyogi.com/archives/690
ಇದನ್ನು ಓದಿ:ರೈತರ ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗೆ ಬರಲಿದೆ ಗೊತ್ತಾ? ಯಾವ ಮಳೆ ಜಾಸ್ತಿ ಆಗಲಿದೆ ಮತ್ತು ಈ ವರ್ಷದ ಮಳೆ ಪ್ರಾರಂಭವಾಗುವುದು ಯಾವ ತಿಂಗಳಲ್ಲಿ?
https://krushiyogi.com/archives/685
[…] ಇದನ್ನು ಓದಿ:ನೀವು ಜಮೀನು ಹೊಂದಿದ್ದೀರಿ ಹಾಗೂ ನಿಮ್ಮ ಜಮೀನಿನ ಸಾಲ ಎಷ್ಟಿದೆ? https://krushiyogi.com/archives/724 […]