ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು ಇಲ್ಲಿದೆ ನೋಡಿ?

ಅನ್ನದಾತರ ಮೊಗದಲ್ಲಿ ಮಂದಹಾಸ

  • ರಾಜ್ಯದಲ್ಲಿ 5,000 ಕಿರು ಸಂಸ್ಕರಣಾ ಘಟಕಗಳ ಸ್ಥಾಪನೆ
  • ಕೃಷಿ ಭಾಗ್ಯ ಯೋಜನೆಯಡಿ 12 ಸಾವಿರ ಕೃಷಿ ಹೊಂಡ ನಿರ್ಮಾಣ
  • ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪನೆ

ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ

  • 195 ಕೋಟಿ ವೆಚ್ಚದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿ
  • ರಾಜ್ಯದ ಒಟ್ಟು 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ
  • ತೋಟಗಾರಿಕಾ ಪ್ರವಾಸೋದ್ಯಮಕ್ಕೆ ಉತ್ತೇಜನ

ರೇಷ್ಮೆ ಕೃಷಿಯಲ್ಲಿ ಹೊಸ ಮೈಲಿಗಲ್ಲು

  • ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ
  • ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ₹250 ಕೋಟಿ ವೆಚ್ಚದಲ್ಲಿ ಅನುಷ್ಠಾನ
  • ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣಕ್ಕಾಗಿ Assayer ಗಳ ನಿಯೋಜನೆ

ಹಸನಾದ ಹೈನುಗಾರರ ಬದುಕು

  • ಅನುಗ್ರಹ’ ಯೋಜನೆಯಡಿ ಪರಿಹಾರ ಮೊತ್ತ ಹೆಚ್ಚಳ; ಎಮ್ಮೆ ಮತ್ತು ಎತ್ತುಗಳಿಗೆ ₹15,000, ಕುರಿ ಮತ್ತು ಮೇಕೆ ₹7500 ಕುರಿ/ ಮೇಕೆ ಮರಿಗಳಿಗೆ ₹5000 ಗಳಿಗೆ ಹೆಚ್ಚಳ
  • 50 ನೂತನ ಪಶು ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಕ್ರಮ
  • 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣ

ಸಹಕಾರಿ ವ್ಯವಸ್ಥೆಯ ಬಲವರ್ಧನೆ

  • 37 ಲಕ್ಷ ರೈತರಿಗೆ ₹28,000 ಕೋಟಿ ಸಾಲ ವಿತರಣೆಯ ಗುರಿ
  • 3 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಸಂಪೂರ್ಣ ಗಣಕೀಕರಣಕ್ಕೆ ಕ್ರಮ
  • ಕಲ್ಯಾಣ ಕರ್ನಾಟಕದಲ್ಲಿ ₹60 ಕೋಟಿ ವೆಚ್ಚದಲ್ಲಿ ಗ್ರಾಮೀಣ ಉಗ್ರಾಣಗಳ ನಿರ್ಮಾಣ

ಕೃಷಿ ಭೂಮಿಗೆ ಜೀವಜಲ

  • ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ತೀರುವಳಿ ದೊರೆತ ಕೂಡಲೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು
  • ಈ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯಡಿ ಕೇಂದ್ರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭ
  • ಕೃಷ್ಣಾ, ಕಾವೇರಿ ಮತ್ತು ಇತರ ನದಿಗಳ ಕಣಿವೆಯಡಿ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕ್ರಮ

ಸಮೃದ್ದ ಅಂತರ್ಜಲ, ಸಂಪದ್ಭರಿತ ಕರ್ನಾಟಕ

  • ಎತ್ತಿನಹೊಳೆ ಯೋಜನೆಯಡಿ ಮಧುಗಿರಿ ತಾಲ್ಲೂಕಿನ 45 ಹಾಗೂ ಕೊರಟಗೆರೆ ತಾಲೂಕಿನ 62 ಕೆರೆ ತುಂಬಿಸುವ ಯೋಜನೆ ₹553 ಕೋಟಿ ಮೊತ್ತದಲ್ಲಿ ಅನುಷ್ಠಾನ
  • ಹೆಚ್.ಎನ್. ವ್ಯಾಲಿ 2ನೇ ಹಂತದ ಯೋಜನೆಯಡಿ ₹70 ಕೋಟಿ ಮೊತ್ತದಲ್ಲಿ 24 ಕೆರೆ ಹಾಗೂ ₹93.50 ಕೋಟಿ ಮೊತ್ತದಲ್ಲಿ ಬೆಂಗಳೂರು ಪೂರ್ವ ತಾಲೂಕಿನ 18 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ಕ್ರಮ
  • ಕೆರೆಗಳ ಆಧುನಿಕರಣ, ಅಣೆಕಟ್ಟು ಮತ್ತು ಪಿಕಪ್, ಕಿಂಡಿ ಅಣೆಕಟ್ಟು, ಏತನೀರಾವರಿ, ನಿಷ್ಕ್ರಿಯ ಯೋಜನೆಗಳ ಪುನರುಜ್ಜಿವನ ಇತ್ಯಾದಿ ಯೋಜನೆಗಳಡಿ 2,000 ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳ ಆರಂಭ
ಇದನ್ನು ಓದಿ:ನಿಮ್ಮ ಜಮೀನು ಮತ್ತೆ ಅಳತೆ ಅಥವಾ ಸರ್ವೇ ಮಾಡಬೇಕಾ? ಸರ್ವೆಯರಗಳು ಸಿಗುತ್ತಿಲ್ಲವೇ? ಇಲ್ಲಿದೆ ನೋಡಿ ಹೊಸ ಟೆಕ್ನಾಲಜಿ
ಇದನ್ನು ಓದಿ:ರೈತರ ಈ ವರ್ಷದ ಮುಂಗಾರು ಮತ್ತು ಹಿಂಗಾರು ಮಳೆ ಹೇಗೆ ಬರಲಿದೆ ಗೊತ್ತಾ? ಯಾವ ಮಳೆ ಜಾಸ್ತಿ ಆಗಲಿದೆ ಮತ್ತು ಈ ವರ್ಷದ ಮಳೆ ಪ್ರಾರಂಭವಾಗುವುದು ಯಾವ ತಿಂಗಳಲ್ಲಿ?

1 thought on “ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು ಇಲ್ಲಿದೆ ನೋಡಿ?”

Leave a Comment