ನರೇಗಾ ಯೋಜನೆ ಅಡಿ ಕೂಲಿ ಮೊತ್ತವನ್ನು ಹೆಚ್ಚಿಸಿದ ಸರ್ಕಾರ

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೇ,
ನೀವು ನರೇಗಾ ಯೋಜನೆ ಇಡೀ ಕೆಲಸ ಮಾಡುತ್ತಿರುವಿರಾ? ಯೋಜನೆ ಬಗ್ಗೆ ನಿಮಗೆಷ್ಟು ಗೊತ್ತು? ಹುಲಿ ಕಾರಕ ಕೆಲಸ ಮಾಡುತ್ತಿದ್ದರೆ ನಿಮಗೆ ಇಲ್ಲೊಂದು ಸಿಹಿ ಸುದ್ದಿ.

ನರೇಗಾ ಯೋಜನೆ ಅಡಿ ಕೆಲಸ ಮಾಡುತ್ತಿರುವ ಕೂಲಿ ಕಾರ್ಮಿಕರಿಗೆ ಮೊತ್ತ ಹೆಚ್ಚು ಮಾಡಲಾಗಿದೆ. ನರೇಗಾ ಯೋಜನೆಯ ಗ್ರಾಮೀಣ ಪ್ರದೇಶಗಳಿಗೆ ಸೀಮಿತವಾಗಿದ್ದು, ಮಹಾತ್ಮಾ ಗಾಂಧಿ ನರೇಗಾ ಯೋಜನೆ ಅಡಿ ಕೌಶಲ್ಯವಿಲ್ಲದ ಅಂದರೆ ಕೂಲಿ ಕಾರ್ಮಿಕರಾದ ವ್ಯಕ್ತಿಗಳಿಗೆ ನೂರು ದಿನಗಳ ಕಾಲ ಕೆಲಸವನ್ನು ನೀಡಲಾಗುತ್ತದೆ. ಇದಕ್ಕೆ ದಿನಕ್ಕೆ ಇಷ್ಟು ಎಂದು ಕೂಲಿ ಎನ್ನು ನಿಗದಿಪಡಿಸಲಾಗಿರುತ್ತದೆ. ಗ್ರಾಮೀಣ ಜನರ ಜೀವನವನ್ನು ಸುಧಾರಿಸುವ ಕ್ರಮಗಳಲ್ಲಿ ಒಂದಾಗಿದೆ. ಹೊಲ ಇಲ್ಲದ ಕೂಲಿ ಕಾರ್ಮಿಕರು ಈ ಯೋಜನೆಯಲ್ಲಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸಬಹುದು. ಬರ ಕಾಲದಿಂದಾಗಿ ಹೊಲದಲ್ಲಿ ಕೆಲಸ ಇಲ್ಲದ ಕಾರಣ ಯಾರಿಗೂ ಕೆಲಸ ಸಿಗುತ್ತಿಲ್ಲ. ಹೀಗಾಗಿ ಕೂಲಿ ಕಾರ್ಮಿಕರು ಊರನ್ನು ಬಿಟ್ಟು ನಗರ ಪ್ರದೇಶಗಳಿಗೆ ವಲಸೆ ಹೋಗುತ್ತಿದ್ದಾರೆ. ಇದನ್ನು ತಪ್ಪಿಸಲು ಏಪ್ರಿಲ್ ಒಂದರಿಂದ  ಖಾತ್ರಿ ಯೋಜನೆ ಅಡಿ  ವಿವಿಧ ಕೆಲಸಗಳನ್ನು ಶುರು ಮಾಡುದಾಗಿ ಸರ್ಕಾರವು ಹೇಳಿದೆ. ಇರುವ ಕುಲಿ ಕಾರ್ಮಿಕರಿಗೆ ನೇರವಾಗಿ ಗ್ರಾಮ ಪಂಚಾಯಿತಿ ವತಿಯಿಂದ ಮಾಡಲಾಗುವ ಕೆಲಸಗಳಲ್ಲಿ ಕೂಲಿ ನೀಡುವ ಮುಖಾಂತರ ಕೆಲಸವನ್ನು ನೀಡಲಾಗುತ್ತದೆ.
ಬರಗಾಲವಿದೆ ಎಂದು ಗ್ರಾಮೀಣ ಪ್ರದೇಶದ ರೈತ, ಕೃಷಿ ಕೂಲಿಕಾರರಿಗೆ ಭಯಬೇಡ. ಏ.1 ರಿಂದ ಉದ್ಯೋಗ ಖಾತ್ರಿ ಕೆಲಸ ಆರಂಭವಾ ಗುತ್ತಿದ್ದು, ಯೋಜನೆಯಡಿ ಅನೇಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ಅವಕಾಶವಿದೆ. ಗ್ರಾಮೀಣ ಪ್ರದೇಶಗಳ ಕಡುಬಡವರು ಸಹ ಯೋಜನೆ ಸದುಪಯೋಗಪಡೆದುಕೊಳ್ಳಬೇಕು. ಇದರಿಂದ ಗ್ರಾಮೀಣ ಜನರು ಕುಳೆ ಹೋಗುವುದನ್ನು ತಪ್ಪಿಸಲು ಸರ್ಕಾರವು ಈ ಯೋಜನೆಯನ್ನು ಜಾರಿ ತಂದಿದೆ. ಈ ಯೋಜನೆಯ ಅಡಿ ಕಡುಬಡವರಾದವರು ಈ ಯೋಜನೆಯಲ್ಲಿ ಕೆಲಸ ಮಾಡಿ ತಮ್ಮ ಜೀವನವನ್ನು ಸಾಗಿಸಬಹುದಾಗಿದೆ.

ಈಗ ಸರ್ಕಾರ ಇನ್ನೊಂದು ಸಿಹಿ ಸುದ್ದಿ ನೀಡಿದೆ ನರೇಗಾ ಕುಡಿಯಲಿನ ಮೊತ್ತವನ್ನು ಹೆಚ್ಚಳ ಮಾಡಲಾಗಿದೆ.ಉದ್ಯೋಗ ಖಾತ್ರಿ ಯೋಜನೆ ಯಡಿ ಕೂಲಿ ಅನುದಾನವನ್ನು ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಶೇ.10ರಷ್ಟು ಏರಿಕೆ ಮಾಡಿದೆ. ಇದರಿಂದಾಗಿ ಕೂಲಿ ಮೊತ್ತ 316 ರುಪಾಯಿನಿಂದ 349 ರುಪಾಯಿಗೆ ಅಂದರೆ33  ರುಪಾಯಿ ಹೆಚ್ಚಳವಾಗಲಿದೆ. ಒಂದು ಸಣ್ಣ ಬದಲಾವಣೆ ಕೂಲಿ ಕಾರ್ಮಿಕನ ಮುಖದಲ್ಲಿ ನಗುತರಲಿದೆ.

WhatsApp Group Join Now
Telegram Group Join Now

Leave a Comment