ಮನೆಯಲ್ಲಿ ಕುಳಿತುಕೊಂಡು ಅನ್ನಭಾಗ್ಯ ಯೋಜನೆಯ
ಹಣ ಚೆಕ್ ಮಾಡಿಕೊಳ್ಳಿ
ಆತ್ಮೀಯ ರೈತ ಬಾಂಧವರೇ,
ನಿಮ್ಮ ಹೆಸರಿನಲ್ಲಿ ರೇಷನ್ ಕಾರ್ಡ್ ಇದೆ ನೀವು ರೇಷನ್ ಅಕ್ಕಿಯನ್ನು ಉಚಿತವಾಗಿ ಪಡೆಯುತ್ತಿದ್ದಿರೆ?ಅನ್ನಭಾಗ್ಯ ಯೋಜನೆಯ ಫಲಾನುಭವಿಗಳು ನೀವಾಗಿರುವಿರಾ? ನಿಮಗಿದೆ ಇಲ್ಲೊಂದು ಸಿಹಿ ಸುದ್ದಿ ನೋಡೋಣ ಬನ್ನಿ ಅದು ಏನಂತ…ನಿಮ್ಮ ಖಾತೆಗೆ ಅನ್ನ ಭಾಗ್ಯ ಯೋಜನೆಯ ಹಣದ ಮೊತ್ತ ಜಮೆ ಆಗಿದೆ ಅಥವಾ ಇಲ್ಲವೇ ಎಂಬುದನ್ನು ಹೇಗೆ ಚೆಕ್ ಮಾಡಬಹುದು.
ಎಲೆ ಕುಳಿತುಕೊಂಡು ಕೇವಲ ಎರಡು ನಿಮಿಷದಲ್ಲಿ ನಿಮ್ಮ ಖಾತೆಗೆ ಹಣ ಜಮೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ಶೀಘ್ರವಾಗಿ ತಿಳಿದುಕೊಳ್ಳಬಹುದು.
ಬಿಪಿಲ್ ರೇಷನ್ ಕಾರ್ಡ್ ಹೊಂದಿರುವ ಎಲ್ಲ ಕರ್ನಾಟಕದ ಜನತೆಗೂ ರಾಜ್ಯ ಸರ್ಕಾರವು ಅಕ್ಕಿಯ ಬದಲಾಗಿ ಅವರಿಗೆ ಮುಖಾಂತರ ನೇರವಾಗಿ ಹಣವನ್ನು ವರ್ಗಾಯಿಸುತ್ತಿದೆ.
ಹಣ ಬಂದಿದೆ ಅಥವಾ ಎಂದು ಹೇಗೆ ಚೆಕ್ ಮಾಡುವುದು ಎಂಬುದನ್ನು ಈಗ ನೋಡೋಣ ಬನ್ನಿ.
1.ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಕ್ರೋಮ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ.
2.ahaar karnatak ಎಂದು ಟೈಪ್ ಮಾಡಿ.
3. ಇದರಲ್ಲಿ ಒಂದನೇ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.
4. ಒಂದು ಮೇನ್ ಪೇಜ್ ಓಪನ್ ಆಗುತ್ತದೆ.
5. ಅದಾದ ಮೇಲೆ ಎಡಗಡೆಯ ಮೂಲೆಯಲ್ಲಿ ಒಂದು ಆಪ್ಷನ್ ಕಾಣುತ್ತದೆ.
6.ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಬಹಳಷ್ಟು ಆಯ್ಕೆಗಳು ಓಪನ್ ಆಗುತ್ತದೆ.
7. ಅದರಲ್ಲಿ ಈ ಸರ್ವಿಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
8. ನಂತರ ತ್ರೀ ಡಾಟ್ ಇರುವದರ ಮೇಲೆ ಕ್ಲಿಕ್ ಮಾಡಿ.
9. ಡಿ ಬಿ ಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಯಾವ ಜಿಲ್ಲೆಯವರು ಎಂಬುದನ್ನು ಇದು ಕೇಳುತ್ತದೆ ನೀವು ಸಂಬಂಧಪಟ್ಟ ಜಿಲ್ಲೆಯಲ್ಲಿ ಕ್ಲಿಕ್ ಮಾಡಿ.
* ನಿಮಗೆ ಎಲ್ಲಿ ಹಲವಾರು ಆಯ್ಕೆಗಳು ಕಾಣುತ್ತವೆ. ರಲ್ಲಿ ನೀವು ಡಿಬಿಟಿ ಸ್ಟೇಟಸ್ ಅನ್ನು ಆಯ್ಕೆ ಮಾಡಿಕೊಳ್ಳಿ.
* ನಂತರ ನಿಮಗೆ ಅದು ಒಂದಿಷ್ಟು ಪ್ರಶ್ನೆಗಳನ್ನು ಕೇಳುತ್ತದೆ ಅದರಂತೆ ನೀವು ಮುಂದುವರಿಸಬೇಕು.
ಮೊದಲಿಗೆ ನೀವು ವರ್ಷವನ್ನು ತುಂಬಬೇಕು. ನಂತರ ತಿಂಗಳನ್ನು ನಮೂದಿಸಬೇಕು. ಆದಮೇಲೆ ಆರ್‌ಸಿ ನಂಬರ್ ಅನ್ನು ಎಂಟರ್ ಮಾಡಬೇಕು. ನಂತರ ಕ್ಯಾಪ್ಚವನ್ನು ನಮೂದಿಸಿ ಗೊ ಮೇಲೆ ಕ್ಲಿಕ್ ಮಾಡಬೇಕು.
ಅಲ್ಲಿ ರೇಷನ್ ಕಾರ್ಡ್ ಹೋಲ್ಡರ್ ನ ಹೆಸರು ಮತ್ತು ಅಕೌಂಟಿಗೆ ಎಷ್ಟು ಅಮೌಂಟ್ ಜಮೆಯಾಗಿದೆ ಎಂಬುದನ್ನು ಅದು ತೋರಿಸುತ್ತದೆ. ಮನೆಯಲ್ಲಿ ಕುಳಿತುಕೊಂಡು ಅತಿ ಶೀಘ್ರವಾಗಿ ಆ ತಿಂಗಳ ಹಣ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ನೋಡಿಕೊಳ್ಳಬಹುದು.