ಮಾರ್ಚ್ ತಿಂಗಳ ಅನ್ನಭಾಗ್ಯ ಯೋಜನೆ ಹಣ ಬಂದಿದೆಯೇ ಚೆಕ್ ಮಾಡಿಕೊಳ್ಳಿ.

ಆತ್ಮೀಯ ರೈತ ಬಾಂಧವರೇ, ನಿಮಗೆ ಒಂದು ಸಿಹಿ ಸುದ್ದಿ  ಸಾಮಾನ್ಯವಾಗಿ ಚುನಾವಣೆ ಮುಗಿದ ನಂತರ ಪ್ರಣಾಳಿಕೆಯಲ್ಲಿ ಘೋಷಿಸಿರುವ  ವಿಷಯಗಳನ್ನು ಜಾರಿಗೆ ತರುವುದು ತುಂಬಾ ವಿರಳ. ಆದರೆ ರಾಜ್ಯ ಸರ್ಕಾರ ಘೋಷಿಸಿರುವ ಎಲ್ಲಾ ಯೋಜನೆಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾಗಿದೆ.ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲಾ ಐದು ಗ್ಯಾರಂಟಿ ಯೋಜನೆಗಳನ್ನು ಇದು ಜಾರಿಗೆ ತಂದಿದೆ. ಅನ್ನಭಾಗ್ಯ ಯೋಜನೆಯಲ್ಲಿ ಸರ್ಕಾರಕ್ಕೆ ಅಕ್ಕಿಯನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ. ಕೇಂದ್ರ ಸರ್ಕಾರವು 5 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದು, ರಾಜ್ಯ ಸರ್ಕಾರ 5 ಕೆಜಿ ಅಕ್ಕಿಗೆ ಬದಲಾಗಿ ಅದರ ಹಣವನ್ನು ಮಹಿಳೆಯರ ಖಾತೆಗೆ ನೇರವಾಗಿ ಹಾಕುತ್ತಿದೆ. ಹೀಗೆ 34 ರೂಪಾಯಿಯಂತೆ 170ಗಳನ್ನು ಅವರ ಖಾತೆಗೆ ನೀಡುತ್ತಿದೆ. ಕೆಳಗೆ ಸೂಚಿಸಿರುವ ಕೆಲವು ವ್ಯಕ್ತಿಗಳಿಗೆ ಹಣ ಬರುವುದಿಲ್ಲ.

ರೇಷನ್ ಕಾರ್ಡ್ ಮನೆಯ ಯಜಮಾನಿಯ ಹೆಸರಿನಲ್ಲಿದ್ದು ಬ್ಯಾಂಕ್ ಖಾತೆ ಯಜಮಾನನ ಹೆಸರಿನಲ್ಲಿದ್ದರೆ ಅಂತಹದರಲ್ಲಿ ಹಣ ಬರುವುದಿಲ್ಲ. ಒಂದಕ್ಕೊಂದು ಹೊಂದಾಣಿಕೆಯಾಗದ ಕಾರಣ ಅನ್ನ ಭಾಗ್ಯ ಯೋಜನೆ ಹಣ ಬರುತ್ತಿಲ್ಲ. ಇದರಿಂದ ಗೃಹಲಕ್ಷ್ಮಿ ಮತ್ತು ಅನ್ನ ಭಾಗ್ಯ ಯೋಜನೆ ಹಣಗಳು ಬರುತ್ತಿಲ್ಲ. ತಾಂತ್ರಿಕ ದೋಷಗಳು ಇರುವ ಕಾರಣ ಡಿಬಿಟಿಯ ಮುಖಾಂತರ ನೇರವಾಗಿ ಹಣ ಜಮೆ ಆಗುತ್ತಿಲ್ಲ. ಯಾವುದೇ ಸಮಸ್ಯೆ ಇಲ್ಲದಿರುವವರು ಪ್ರತಿ ತಿಂಗಳು ಹಣವನ್ನು ಪಡೆದುಕೊಳ್ಳುತ್ತಿದ್ದಾರೆ. ಅನ್ನ ಭಾಗ್ಯ ಯೋಜನೆ ಹಣ ಬಂದಿದೆ ಇಲ್ಲವ ಎಂಬುದನ್ನು ಡಿಪಿ ಸ್ಟೇಟಸ್ ಮೂಲಕ ಚೆಕ್ ಮಾಡಬಹುದು. ಇದಕಾಗಿ ಆಹಾರ ಇಲಾಖೆಯ ವೆಬ್ಸೈಟ್ ಲಿಂಕನ್ನು ಕೊಡಲಾಗಿದೆ. ಈ ಲಿಂಕ್ ನಲ್ಲಿ ನೀವು ನಿಮಗೆ ಯಾವ ತಿಂಗಳು ಹಣ ಬಂದಿದೆ ಬಂದಿಲ್ಲ ಎಂಬುದನ್ನು ಚೆಕ್ ಮಾಡಿಕೊಳ್ಳಬಹುದು.. ರಾಜ್ಯ ಸರ್ಕಾರವು ಕೆಜಿ ಅಕ್ಕಿ ಬದಲಾಗಿ 170ಗಳನ್ನು ಮನೆಯ ಯಜಮಾನಿಯ ಖಾತೆಗೆ ನೀಡುತ್ತಿದೆ. ಅದ ಕಾರಣ ರೇಷನ್ ಕಾರ್ಡನ್ನು ಮನೆ ಯಜಮಾನಿಯ ಹೆಸರಿಗೆ ಬಯಸುವುದು ಕಡ್ಡಾಯವಾಗಿದೆ.

ಖಾತೆಗೆ ಹಣ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಹೇಗೆ ಚೆಕ್ ಮಾಡಿಕೊಳ್ಳುವುದು ಎಂಬುದನ್ನು ನೋಡೋಣ.
ಒಂದೇ ನಿಮಿಷದಲ್ಲಿ ನಿಮ್ಮ ಮೊಬೈಲ್ ನಲ್ಲಿ ನೋಡಿಕೊಳ್ಳಬಹುದು.
ahara. kar. nic. in ನಲ್ಲಿ ಚೆಕ್ ಮಾಡಿಕೊಳ್ಳಿ.


ನಿಮ್ಮ ಖಾತೆಗೆ ಡಿವಿಟಿ ಮುಖಾಂತರ ನೇರವಾಗಿ ನಿಮ್ಮ ಖಾತೆಯನ್ನು ಬಂದು ಸೇರುತ್ತದೆ. ಎಸ್ಎಂಎಸ್ ಮೂಲಕ ಕೂಡ ನೀವು ಖಾತ್ರಿಪಡಿಸಿಕೊಳ್ಳಬಹುದು.ನಿಮ್ಮ ಅಕೌಂಟ್ ಗೆ ಹಣ ಜಮೆಯಾದ ತಕ್ಷಣ ನಿಮ್ಮ ಮೊಬೈಲ್ ಗೆ ಮೆಸೇಜ್ ಬರುತ್ತದೆ. ರೇಷನ್ ಕಾರ್ಡ್ ಅಥವಾ ಬ್ಯಾಂಕ್ ಖಾತೆಯಲ್ಲಿನ ಎಲ್ಲಾ ಲೋಪ ದೋಷಗಳನ್ನು ಸರಿಯಾಗಿ ಮಾಡಿಕೊಳ್ಳುವುದರ ಮೂಲಕ ಯೋಜನೆಯ ಉಪಯೋಗವನ್ನು ನೀವು ಪಡೆದುಕೊಳ್ಳಬಹುದು ಎಂದು ತಿಳಿಸಿದೆ.

Admin
Author

Admin

Leave a Reply

Your email address will not be published. Required fields are marked *