ಕರ್ನಾಟಕ ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವಿವಿಧ ಜಿಲ್ಲೆಗಳಲ್ಲಿ ಅಂಗನವಾಡಿ ಕಾರ್ಯಕರ್ತೆ ಮತ್ತು ಸಹಾಯಕಿಯರ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ. ಈ ಹುದ್ದೆಗಳು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳಾ ಮತ್ತು ಮಕ್ಕಳ ಸೇವೆಗಳಿಗೆ ಮಹತ್ವದ ಸಹಕಾರ ನೀಡುತ್ತವೆ.
ಹುದ್ದೆಗಳ ವಿವರಗಳು:
ಅಂಗನವಾಡಿ ಕಾರ್ಯಕರ್ತೆ: ಪಿಯುಸಿ (12ನೇ ತರಗತಿ) ಅಥವಾ ಡಿಪ್ಲೊಮಾ ಇಸಿಸಿಇ ಅಥವಾ ತತ್ಸಮಾನ ಶಿಕ್ಷಣ ಪಾಸಾಗಿರಬೇಕು.
ಅಂಗನವಾಡಿ ಸಹಾಯಕಿ: ಎಸ್.ಎಸ್.ಎಲ್.ಸಿ (10ನೇ ತರಗತಿ) ಪಾಸಾಗಿರಬೇಕು.
ವಯೋಮಿತಿ:
ಸಾಮಾನ್ಯ ಅಭ್ಯರ್ಥಿಗಳು: 19 ರಿಂದ 35 ವರ್ಷ.
ಇತರೆ ಹಿಂದುಳಿದ ವರ್ಗದವರು (OBC): ಗರಿಷ್ಠ 38 ವರ್ಷ.
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ/ಪ್ರವರ್ಗ-1 ಅಭ್ಯರ್ಥಿಗಳು: ಗರಿಷ್ಠ 40 ವರ್ಷ.
ವೇತನ ಶ್ರೇಣಿ:
ಕಾರ್ಯಕರ್ತೆ: ರೂ.10,000/- ರಿಂದ ರೂ.15,000/- ವರೆಗೆ ಮಾಸಿಕ ಗೌರವಧನ.
ಸಹಾಯಕಿ: ರೂ.5,000/- ಮಾಸಿಕ ಗೌರವಧನ.
ಅರ್ಜಿಯನ್ನು ಹೀಗೆ ಸಲ್ಲಿಸಿ:
1. ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://karnemakaone.kar.nic.in/abcd/
2. ನೋಂದಣಿ ಮಾಡಿ, ಅರ್ಜಿ ನಮೂನೆಯನ್ನು ಭರ್ತಿ ಮಾಡಿ.
3. ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ: ಫೋಟೋ, ಸಹಿ, ಜನ್ಮ ದಿನಾಂಕದ ಪ್ರಮಾಣ ಪತ್ರ, ಗುರುತಿನ ಪುರಾವೆ, ವಿದ್ಯಾರ್ಹತೆಯ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ).
4. ಅರ್ಜಿಯನ್ನು ಪರಿಶೀಲಿಸಿ ಮತ್ತು ಸಲ್ಲಿಸಿ.
ಅಗತ್ಯ ದಾಖಲೆಗಳು:
1. ಜನನ ಪ್ರಮಾಣ ಪತ್ರ ಅಥವಾ ಜನ್ಮ ದಿನಾಂಕದ ಪುರಾವೆ.
2. ವಿದ್ಯಾರ್ಹತೆ ಪ್ರಮಾಣ ಪತ್ರಗಳು.
3. ವಾಸಸ್ಥಳ ದೃಢೀಕರಣ ಪತ್ರ.
4. ಜಾತಿ ಪ್ರಮಾಣ ಪತ್ರ (ಅನ್ವಯಿಸಿದರೆ).
5. ವಿಕಲಚೇತನ ಪ್ರಮಾಣ ಪತ್ರ (ಅನ್ವಯಿಸಿದರೆ).
6. ಇತರೆ ಸಂಬಂಧಿತ ದಾಖಲೆಗಳು.
ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಪ್ರತಿ ಜಿಲ್ಲೆಯ ಅಧಿಸೂಚನೆ ಪ್ರಕಾರ ಭಿನ್ನವಾಗಿರಬಹುದು. ಆದ್ದರಿಂದ, ಅಧಿಕೃತ ವೆಬ್‌ಸೈಟ್‌ನಲ್ಲಿ ನಿಮ್ಮ ಜಿಲ್ಲೆಯ ಅಧಿಸೂಚನೆಯನ್ನು ಪರಿಶೀಲಿಸಿ.
ಬೆಂ.ಗ್ರಾಜಿಲ್ಲೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲ್ಲೂಕುಗಳ ಸಮಗ್ರ ಶಿಶು ಅಭಿವೃದ್ಧಿ ಯೋಜನಾ ವ್ಯಾಪ್ತಿಯ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಅಂಗನವಾಡಿ ಕಾರ್ಯಕರ್ತೆ/ಮಿನಿ ಅಂಗನವಾಡಿ ಕಾರ್ಯಕರ್ತೆ ಮತ್ತು ಅಂಗನವಾಡಿ ಸಹಾಯಕಿಯರ ಗೌರವಸೇವೆಯ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ.
ದಾವಣಗೆರೆ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ಹರಿಹರ ತಾಲ್ಲೂಕಿನ ಶಿಶು ಅಭಿವೃದ್ಧಿ ಯೋಜನೆ ವ್ಯಾಪ್ತಿಯಲ್ಲಿ ಬರುವ ಅಂಗನವಾಡಿ ಕೇಂದ್ರಗಳಲ್ಲಿ ಖಾಲಿ ಇರುವ ಒಟ್ಟು 5 ಅಂಗನವಾಡಿ ಕಾರ್ಯಕರ್ತೆ, 44 ಅಂಗನವಾಡಿ ಸಹಾಯಕಿಯರ ಹುದ್ದೆಗಳಿಗೆ ನೇಮಕ ಮಾಡಲು ಅರ್ಹ ಮಹಿಳಾ ಹಾಗೂ ಲಿಂಗತ್ವ ಅಲ್ಪಸಂಖ್ಯಾತ ಮಹಿಳಾ ಅಭ್ಯರ್ಥಿಗಳಿಂದ ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿ ಹರಿಹರ ದೂ.ಸಂ: 08192-241431 ನ್ನು ಸಂಪರ್ಕಿಸಲು ಉಪನಿರ್ದೇಶಕರಾದ ರಾಜಾನಾಯ್ಕ ತಿಳಿಸಿದ್ದಾರೆ.
ಇದನ್ನು ಓದಿ:ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್ ಈ ರೇಶನ್ ಕಾರ್ಡ್ಗಳಿಗೆ 5+10 ಕೆಜಿ ಅಕ್ಕಿ ಉಚಿತವಾಗಿ ಬಂದಿದೆ.*
https://krushiyogi.com/archives/869
ಇದನ್ನು ಓದಿ:ಒಂಟಿ ಮನೆ ಮತ್ತು ಅಮೃತ ಮಹೋತ್ಸವ ಯೋಜನೆ ಅಡಿ ಉಚಿತ ಪ್ಲಾಟ್ ಖರೀದಿ ಮಾಡಲು ಅರ್ಜಿ ಅವನಿಸಲಾಗಿದೆ*
https://krushiyogi.com/archives/839
1 COMMENTS