ರಾಜ್ಯ ಸರ್ಕಾರದ ಕೋರಿಕೆ ಮೇರೆಗೆ ಕೇಂದ್ರ ಸರ್ಕಾರ ಕುಸುಬಿಯನ್ನು ಬೆಂಬಲ ಬೆಲೆಯಲ್ಲಿ ಖರೀದಿಸಲು ಸಮ್ಮತಿಸಿದ್ದು, ಕ್ವಿಂಟಾಲ್‌ಗೆ ₹5,940 ನಿಗದಿಪಡಿಸಲಾಗಿದೆ. ರೈತರು ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡದೆ ಬೆಂಬಲ ಬೆಲೆ ಖರೀದಿ ಕೇಂದ್ರಗಳ ಸದುಪಯೋಗಪಡೆದುಕೊಳ್ಳಬೇಕು ಎಂದು ಕೃಷಿ ಮಾರುಕಟ್ಟೆ ಸಚಿವರಾದ ಶಿವಾನಂದ ಎಸ್. ಪಾಟೀಲ್ ತಿಳಿಸಿದ್ದಾರೆ.
ಯಾವ ಯಾವ ಜಿಲ್ಲೆಗಳಲ್ಲಿ ಬೆಂಬಲ ಬೆಲೆಯಲ್ಲಿ ಖರೀದಿ ಮಾಡುತ್ತಾರೆ.
1) ಕಲಬುರಗಿ
2) ಧಾರವಾಡ
3) ದಾವಣಗೆರೆ
4) ಗದಗ
5) ಬೆಳಗಾವಿ
6) ಬೀದರ್
7) ಚಿತ್ರದುರ್ಗ
8) ಕೊಪ್ಪಳ
9) ವಿಜಯಪುರ
ಬೆಂಬಲ ಬೆಲೆಯಲ್ಲಿ ಮಾರಾಟ ಮಾಡಲು ಬೇಕಾಗಿರೋ ದಾಖಲೆಗಳು.
- ಆಧಾರ್ ಕಾರ್ಡ
- RTC/ಪಹಣಿ
- ಮೊಬೈಲ್ ನಂಬರ್
- FID ನಂಬರ್
- ಬ್ಯಾಂಕ್ ಅಕೌಂಟ್
- ಪ್ಯಾನ್ ಕಾರ್ಡ್