ಪಿಎಂ ಕಿಸಾನ್ ನಿಧಿ ನಾಳೆ ಖಾತೆಗಳಿಗೆ ಜಮಾ..
ಪಿಎಂ ಕಿಸಾನ್ ನಿಧಿಯ 19ನೇ ಕಂತನ್ನು ನಾಳೆ ಫಲಾನುಭವಿಗಳ ಖಾತೆಗಳಿಗೆ ಜಮಾ ಮಾಡಲಿದೆ.
ಬಿಹಾರದ ಭಾಗಲ್ಪುರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ನಿಧಿಯನ್ನು ಬಿಡುಗಡೆ ಮಾಡಲಿದ್ದಾರೆ. ದೇಶದ 9.8 ಕೋಟಿ ರೈತರ ಖಾತೆಗಳಿಗೆ 22 ಸಾವಿರ ಕೋಟಿ ರೂ.ಗಳನ್ನು ಜಮಾ ಮಾಡಲಾಗುವುದು. ನಿಮ್ಮ ಹೆಸರು ಫಲಾನುಭವಿಗಳ ಪಟ್ಟಿಯಲ್ಲಿ ಇದೆಯಾ ಎಂಬುದನ್ನು ಚೆಕ್ ಮಾಡಿ.
ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಫಲಾನುಭವಿಯ ಸ್ಟೇಟಸ್ ನೋಡುವುದು ಹೇಗೆ?
ಅಧಿಕೃತ ವೆಬ್ಸೈಟ್ https://pmkisan.gov.in/ ಗೆ ಭೇಟಿ ನೀಡಿ.
‘ನೋ ಯುವರ್ ಸ್ಟೇಟಸ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ನಿಮ್ಮ ನೋಂದಣಿ ಸಂಖ್ಯೆ, ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ‘ಡೇಟಾ ಪಡೆಯಿರಿ’ ಆಯ್ಕೆಯನ್ನು ಆರಿಸಿ. ನಿಮ್ಮ ಸ್ಟೇಟಸ್ ನಿಮಗೆ ತೋರಿಸುತ್ತದೆ.
ಫಲಾನುಭವಿಗಳ ಪಟ್ಟಿಯಲ್ಲಿ ನಿಮ್ಮ ಹೆಸರನ್ನು ನೋಡಬಹುದು.
ಪಿಎಂ ಕಿಸಾನ್: eKYC ಮಾಡಿಸುವುದು ಹೇಗೆ?
eKYC ಮಾಡುವ ಡೈರೆಕ್ಟ್ ಲಿಂಕ್ ಇಲ್ಲಿದೆ ನೋಡಿ https://pmkisan.gov.in/aadharekyc.aspx
ಹಂತ 1- PM-Kisanನ ಅಧಿಕೃತ ವೆಬ್ಸೈಟ್ಗೆ ಹೋಗಿ.
ಹಂತ 2- ಬಲಭಾಗದಲ್ಲಿರುವ eKYC ಆಯ್ಕೆಯ ಮೇಲೆ ಕ್ಲಿಕ್ ಮಾಡಿ.
ಹಂತ 3- ಆಧಾರ್ ಕಾರ್ಡ್ ಸಂಖ್ಯೆ, ಕ್ಯಾಪ್ಟಾ ಕೋಡ್ ನಮೂದಿಸಿ ಮತ್ತು ಸರ್ಚ್ ಮೇಲೆ ಕ್ಲಿಕ್ ಮಾಡಿ.
ಹಂತ 4- ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಮೊಬೈಲ್ ಸಂಖ್ಯೆ ನಮೂದಿಸಿ.
ಹಂತ 5- ‘Get OTP’ ಮೇಲೆ ಕ್ಲಿಕ್ ಮಾಡಿ ಮತ್ತು OTP ನಮೂದಿಸಿ.
OTP ಆಧಾರಿತ eKYC ಸಾಧ್ಯವಾಗದಿದ್ದರೆ, ಬಯೋಮೆಟ್ರಿಕ್ ಆಧಾರಿತ eKYCಗಾಗಿ CSC ಕೇಂದ್ರಗಳನ್ನು ಸಂಪರ್ಕಿಸಬೇಕು.
1 thought on “ಸೋಮವಾರವೇ `PM ಕಿಸಾನ್ ಯೋಜನೆ’ಯ ₹22 ಸಾವಿರ ಕೋಟಿ ಬಿಡುಗಡೆ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರಿದೆಯಾ ಚೆಕ್ ಮಾಡಿಕೊಳ್ಳಿ”