ಮೈಲಾರ ಕಾರ್ಣಿಕ 2025|ಹೂವಿನಹಡಗಲಿಯ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ! ಕೊಡ ತುಂಬಿ ತುಳುಕಿತಲೆ ಪರಾಕ್

ತುಂಬಿದ ಕೊಡ ತುಳಿಕಿತಲೇ ಪರಾಕ್. ಮಳೆ ಬೆಳೆ ಕುರಿತು ಹೂವಿನಹಡಗಲಿ(ವಿಜಯನಗರ): ತುಂಬಿದ ಕೊಡ ತುಳಿಕಿತಲೇ ಪರಾಕ್… ಇದು ಈ ವರ್ಷದ ಮೈಲಾರದ ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ. ಸುಕ್ಷೇತ್ರ ಮೈಲಾರದಲ್ಲಿ ಶುಕ್ರವಾರ ಸಂಜೆ ವಂಶಪಾರಂಪರ್ಯ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಅಶೀರ್ವಾದ ಪಡೆದ ಕಾರ್ಣಿಕದ ಗೊರವಯ್ಯ ರಾಮಣ್ಣ, 15 ಅಡಿ ಎತ್ತರದ ಬಿಲ್ಲನೇರಿ ಲಕ್ಷಾಂತರ ಭಕ್ತರ ನಡುವೆ ಸದ್ದಲೇ… ಎಂದು ಮೇಲಿನಂತೆ ಕಾರ್ಣಿಕ ನುಡಿದರು.

ಜಗತ್ಪ್ರಸಿದ್ಧ ಹೂವಿನಹಡಗಲಿ ಮೈಲಾರಲಿಂಗೇಶ್ವರ ನ ಕಾರ್ಣಿಕ ನುಡಿ!

ಗೊರವಯ್ಯನ ದೇವವಾಣಿ ಕೇಳಿದ ಭಕ್ತ ಸಮೂಹ ಕೇಕೆ ಹಾಕುತ್ತಲೇ ಸ್ವಾಮಿ ಮೈಲಾರಲಿಂಗೇಶ್ವರನ ಘೋಷವಾಕ್ಯ ಕೂಗುತ್ತ ಸಂತಸದಿಂದ ಕುಣಿದು ಕುಪ್ಪಳಿಸಿದರು. ಈ ಬಾರಿಯ ಕಾರ್ಣಿಕವನ್ನು ನೆರೆದಿದ್ದ ಭಕ್ತರು ವಿವಿಧ ಬಗೆಯಲ್ಲಿ ವಿಶ್ಲೇಷಿಸಿದರು. ನಾಡಿನಲ್ಲಿ ಮಳೆ-ಬೆಳೆ ಸಮೃದ್ಧವಾಗುತ್ತದೆ. ರೈತರ ಮುಖದಲ್ಲಿ ಇನ್ನಷ್ಟು ಸಂತಸ ಬರುತ್ತೆ.

ರಾಜ್ಯ-ದೇಶದಲ್ಲಿ ಎಲ್ಲ ವರ್ಗದ ಜನರಿಗೆ ಒಳ್ಳೆದಾಗಲಿದೆ. ರಾಜಕೀಯ ಕ್ಷೇತ್ರದಲ್ಲಿ ಮಿಶ್ರಫಲ ದೊರಕುತ್ತದೆ. ಎಂದು ಭಕ್ತರು ಅರ್ಥೈಸಿಕೊಂಡರು. ಕಾಗಿನೆಲೆ ಕನಕಗುರು ಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಇದ್ದರು.

ಮೈಲಾರಲಿಂಗೇಶ್ವರನ ಕಾರ್ಣಿಕ ನುಡಿ ವಿಡಿಯೋ ನೋಡಿ

ಇದನ್ನು ಓದು:ಗೃಹಲಕ್ಷ್ಮಿ ಯೋಜನೆಯ ಅನರ್ಹರ ಪಟ್ಟಿಯನ್ನು ಚೆಕ್ ಮಾಡುವುದು ಹೇಗೆ ?
https://krushiyogi.com/archives/500

ಇದನ್ನು ಓದಿ:New Ration Card Application ಹೊಸ ರೇಷನ್ ಕಾರ್ಡ್ ಅರ್ಜಿ ಆಹ್ವಾನ ಬೇಗ ಅರ್ಜಿ ಸಲ್ಲಿಸಿ https://krushiyogi.com/archives/493

1 thought on “ಮೈಲಾರ ಕಾರ್ಣಿಕ 2025|ಹೂವಿನಹಡಗಲಿಯ ಮೈಲಾರ ಲಿಂಗೇಶ್ವರನ ಕಾರ್ಣಿಕ ನುಡಿ! ಕೊಡ ತುಂಬಿ ತುಳುಕಿತಲೆ ಪರಾಕ್”

Leave a Comment