ಹೆಚ್ಚುತ್ತಿರುವ ಬಿಸಿಲು :ಕಂಗಾಲಾದ ಜನತೆ

ಆತ್ಮೀಯ ರೈತ ಭಾಂದವರೇ,
ಹೆಚ್ಚುತ್ತಿರುವ ಬಿಸಿಲಿನ ಜಳದಿಂದಾಗಿ ಜನತೆ ಕಂಗಲಾಗಿದೆ. ಪಶು ಪಕ್ಷಿ ಗಳಿಗೆ ನೀರು ಕಡಿಮೆ ಆಗುತ್ತಿದೆ. ಇಂತದ ಸ್ಥಿತಿಯಲ್ಲಿ ಜನರು ಎಚ್ಚರದಿಂದ್ ಇರ್ಬೇಕು.ಪ್ರಸಕ್ತ ಸಾಲಿನ ಬೇಸಿಯ ತಾಪವು ದಿನೇ ದಿನೆ ತಾರಕಕ್ಕೇರುತ್ತಿದ್ದು, ಬಿಸಿಲನಾಡಿನಲ್ಲಿ ಗರಿಷ್ಠ ತಾಪಮಾನವು ತಾಂಡವಾಡುತ್ತಿರುವುದರಿಂದ ಜನರ ಬದುಕಿನಲ್ಲಿ ಏರುಪೇರಾಗುತ್ತಿದೆ.ನಗರ ಸೇರಿದಂತೆ ಜಿಲ್ಲೆಯಾದ್ಯಂತ ಬೇಸಿಗೆಯ ಸೂರ್ಯನ ತಾಪವು ಗರಿಷ್ಠ ಪ್ರಮಾಣ ತಲುಪುತ್ತಿರು ವುದು ಹಲವಾರು ಸಮಸ್ಯೆಗಳನ್ನು ತಂದೊಡ್ಡುವಂತೆ ಮಾಡುತಿದೆ. ಬೇಸಿಗೆ ಆರಂಭದಿಂದಲೂ 40 ಡಿಗ್ರಿ ಸೆಲ್ಸಿಯಸ್ ಹಾಸುಪಾಸಿನಲ್ಲಿ ದಾಖಲಾಗುತ್ತಿದ್ದ ಗರಿಷ್ಠ ಉಷ್ಣಾಂಶವು ಕಳೆದ ಹತ್ತು ದಿನಗಳಿಂದ 42 ಡಿಗ್ರಿಯಲ್ಲಿತ್ತು. ಶನಿವಾರ 43 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು ಇದು ಪ್ರಸಕ್ತ ಸಾಲಿನ ಅತ್ಯಂತ ಗರಿಷ್ಠ ತಾಪಮಾನವಾಗಿದೆ. ಇನ್ನು ರಾತ್ರಿ ಸಮಯದಲ್ಲಿ ಸಹ ವಾತಾವರಣದಲ್ಲಿ ಒಣಗಾಳಿ ಹೆಚ್ಚಾಗುರುತ್ತಿರುವುದರಿಂದ 25 ರಿಂದ 27 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶವು ದಾಖಲಾಗುತ್ತಿ ರು ವುದು ಜಿಲ್ಲೆ ಜನಸಾಮಾನ್ಯರು ಬೇಸಿಗೆಯ ಹಲ ವಾರು ಸಮಸ್ಯೆ ಅನುಭವಿಸುವಂತೆ ಮಾಡಿದೆ.

ಹೆಚ್ಚಳಕ್ಕೆ ಕಾರಣ: ಬಿಸಿಲನಾಡು ರಾಯಚೂರಿನಲ್ಲಿ ಕಳೆದ ನಾಲೈದು ವರ್ಷಗಳಿಂದ ಗರಿಷ್ಠತಾಪಮಾನವು ಏರಿಕೆಯಾಗುತ್ತಲೆನೇ ಬರುತ್ತಿದೆ. ಕಳೆದ 2016ರಲ್ಲಿ 43.10 ಗರಿಷ್ಠ ಸೆಲ್ಸಿಯಸ್ ತಾಪಮಾನ ದಾಖಲಾಗಿತ್ತು.ನಂತರದಬೇಸಿಗೆಯಲ್ಲಿ ಗರಿಷ್ಠ ಉಷ್ಣಾಂಶ40 ರಿಂದ 42 ವರೆಗೆ ದಾಖಲಾಗಿತ್ತು ಮತ್ತೆ 2019ರಲ್ಲಿ ಗರಿಷ್ಠ ಉಷ್ಣಾಂಶವು 43 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿತ್ತು. ಆದರೆ ಈ ವರ್ಷ ಏಪ್ರಿಲ್ ಆರಂಭದಲ್ಲಿಯೇ 43 ಗಡಿಯನ್ನು ದಾಟಿರುವ ತಾಪಮಾನ ಮುಂದಿನ ದಿನಗಳಲ್ಲಿ ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳನ್ನು ಗೋಚರಿಸುವಂತೆ ಮಾಡಿದೆ.ಕಳೆದ ವರ್ಷದಲ್ಲಿ ಮುಂಗಾರು-ಹಿಂಗಾರು ಲ್ಸಿಯಸ್ ಮಳೆಗಳು ಸಂಪೂರ್ಣವಾಗಿ ಕೈಗೊಟ್ಟ ಪರಿಣಾಮ ಒಗೆಯಲ್ಲಿ ಎಲ್ಲೆಡೆತೀವ್ರ ಬರ ಆವರಿಸಿದ್ದರಿಂದ ಜಲಮೂಲಗಳು ಅಲಾಗಿತ್ತು ಬತ್ತಿ ಹೋಗುತ್ತಿದ್ದು, ಅಂತರ್ಜಲ ಪ್ರಮಾಣವು ಸಹ 43 ಡಿಗ್ರಿ ಕಡಿಮೆಯಾಗಿದ್ದರಿಂದ ಏಪ್ರಿಲ್ ಮೊದಲ ಲಾಗಿತ್ತು. ವಾರದಲ್ಲಿಯೇ ಬೇಸಿಗೆಯ ಬಿಸಿಲು ಹೆಚ್ಚಳ ಕಾರಣವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಏನೇ ಇದ್ದರು ಪ್ರಸಕ್ತ ಬೇಸಿಗೆ ಸೂರ್ಯನ ಶಾಖಕ್ಕೆ ಜಿಲ್ಲೆಯ ತೆಗಳನ್ನು ಎಲ್ಲ ವರ್ಗದ ಮಂದಿ ಮೆತ್ತಗಾಗುತ್ತಿದ್ದಾರೆ.
ಜನತೆ ಎಚ್ಚರ ವಹಿಸಿ ಬಿಸಿಲಿನಿಂದ ಜಾಗರುಕರಾಗಬೇಕು.

Leave a Comment

Open chat
Hello 👋
Can we help you?