ಭಾರತ್ ಬ್ರಾಂಡ್ ಅಕ್ಕಿ ಮಾರುಕಟ್ಟೆಗೆ, ಕೇಂದ್ರ ಸರ್ಕಾರದ ಘೋಷಣೆ

: ಭಾರತ್ ಬ್ರಾಂಡ್ ಯೋಜನೆಯಡಿ ಭಾರತ್ ರೈಸ್ ಬಿಡುಗಡೆ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹಸಿರು ನಿಶಾನೆ ತೋರಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು ನಮ್ಮ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಜಿ ಅವರ ಮಹತ್ವಾಕಾಂಕ್ಷೆಯ ಯೋಜನೆಯಡಿ ಸಮಗ್ರ ಭಾರತದಲ್ಲಿ ಒಂದೇ ಬ್ರಾಂಡಿನಡಿಯಲ್ಲಿ ದಿನನಿತ್ಯ ಬೇಕಾಗುವ ಆಹಾರ ಸಾಮಗ್ರಿಗಳನ್ನು ರಿಯಾಯತಿ ದರದಲ್ಲಿ ನೀಡಲಾಗುತ್ತಿದೆ.

ಈ ವರೆಗೆ ಭಾರತ್‌ ಬ್ಯಾಂಡ್ ಅಡಿಯಲ್ಲಿ ಕಡ್ಲೆ ಬೇಳೆ ರೂ. 60 ಪ್ರತಿ ಕೆಜಿ, ಗೋದಿ ಹಿಟ್ಟು ರೂ. 27.50 ಪ್ರತಿ ಕೆ.ಜಿಹಾಗೂ ಮೂಂಗ್ ದಾಲ್ ಅನ್ನು ಪ್ರತಿ ಕೆಜಿ ಗೆ ರೂ. 93 ರಂತೆ ವಿತರಣೆ ಮಾಡಲಾಗುತ್ತಿದೆ ಎಂದರು. ಈ ಯೋಜನೆಯ ಮುಂದುವರೆದ ಭಾಗವಾಗಿ ಭಾರತ ಬ್ರಾಂಡ್ ಯೋಜನೆಯಡಿ ಅಕ್ಕಿಯನ್ನು ಪ್ರತಿ ಕೆ.ಜಿಗೆ ರೂ. 29ರಂತೆ ಸರಬರಾಜು ಮಾಡಲು ಹಸಿರು ನಿಶಾನೆ ತೋರಿಸಲಾಗುತ್ತಿದೆ.

ಜನಸಾಮಾನ್ಯರ ಹಿತದೃಷ್ಟಿಯಿಂದ ಈ ಯೋಜನೆಯನ್ನು ರೂಪಿಸಿದ ಸನ್ಮಾನ್ಯ ಪ್ರಧಾನಿ ಗಳಾದ ನರೇಂದ್ರ ಮೋದಿಜಿ ಅವರನ್ನು ಹಾಗೂ ಕೇಂದ್ರ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವರಿಗೆ ಅಭಿನಂದನೆಯನ್ನು ಸಲ್ಲಿಸುತ್ತೇನೆ ಎಂದು ಯಡಿಯೂರಪ್ಪ ಹೇಳಿದರು. ಇಂತಹ ಒಂದು ಒಳ್ಳೆಯ ಕಾರ್ಯಕ್ರಮಕ್ಕೆ ಚಾಲನೆ ನೀಡಲು ನನಗೆ ಹೆಮ್ಮೆಯುಂಟಾಗುತ್ತಿದೆ.

Leave a Reply

Your email address will not be published. Required fields are marked *