ಈ 4ರೂಲ್ಸ್ ಪಾಲಿಸದಿದ್ದರೆ 6ನೆ ಕಂತಿನ ಹಣ ಬರುವುದಿಲ್ಲ
ಗೃಹಲಕ್ಷ್ಮಿ ಹಣ ಪಡೆಯಬೇಕಾದರೆ ನಾಲ್ಕು ಹೊಸ ರೂಲ್ಸ್ ಗಳು ಜಾರಿ. ಏನು ಅವು ನಾಲ್ಕು ಹೊಸ ರೂಲ್ಗಳು :
ರಾಜ್ಯದ್ಯಂತ ಪ್ರತಿ ಮನೆಯಲ್ಲಿ ವಾಸಿಸುವ ಎಲ್ಲಾ ಮಹಿಳೆಯರಿಗೂ 2000 ರೂಪಾಯಿದಂತೆ ಗೃಹ ಲಕ್ಷ್ಮಿ ಯೋಜನೆಯಡಿ ಹಣವನ್ನು ನೀಡಲಾಗುತ್ತಿದೆ. ಈಗಾಗಲೇ ಐದು ಕಂತಿನ ಹಣ ಎಲ್ಲರಿಗೂ ದೊರೆತಿದ್ದು, ಆರನೇ ಕಂತಿನ ಹಣ ತಮ್ಮ ಅಕೌಂಟಿಗೆ ಜಮಾ ಆಗಬೇಕಾದರೆ ಎಲ್ಲಾ ಮಹಿಳೆಯರು ಈ ಕೆಲಸವನ್ನು ಕಡ್ಡಾಯವಾಗಿ ಮಾಡಲೇಬೇಕು. ತಾಂತ್ರಿಕ ಕಾರಣಗಳಿಂದಾಗಿ ಈ ಹಿಂದೆ ಸಲ್ಲಿಸಿದ ಅರ್ಜಿಗಳು ತಿರಸ್ಕರಿಸಿದ ಕಾರಣ ಮುಂದೆ ಹೊಸ ಅರ್ಜಿಗಳನ್ನು ಸಲ್ಲಿಸುವುದರ ರ ಮೂಲಕ 5 ಕಂಚಿನ ಹಣವನ್ನು ಪಡೆಯಬಹುದು ಎಂದು ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.
ಆರನೇ ಕಂತಿನ ಹಣ ಬರಬೇಕಾದರೆ ಏನು ಮಾಡಬೇಕು?
* ಇಲ್ಲಿಯತನಕ ಯಾರು ಈ ಕೆವೈಸಿ ಮಾಡಿಸಿಲ್ಲವೂ, ಅವರು ಹತ್ತಿರದ ಬಾಪೂಜಿ ಕೇಂದ್ರ ಅಥವಾ ಗ್ರಾಮವನ್ ಕೇಂದ್ರಗಳಿಗೆ ಭೇಟಿ ನೀಡಿ ಈ ಕೆಲಸವನ್ನು ಮಾಡಿಸಿಕೊಳ್ಳಬೇಕು.
* ಎನ್‌ಪಿಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳಿ. ಇನ್ನುವರೆಗೂ ಒಂದು ಕಂತಿನ ಹಣವನ್ನು ಪಡೆಯಲಾಗದ ಫಲಾನುಭವಿಗಳು ಮಾಡಿಸಿಕೊಳ್ಳಬೇಕು ಮತ್ತು ಇದು ಅವರಿಗೆ ಅನ್ವಯಿಸುತ್ತದೆ. ಇಲ್ಲಿಯವರೆಗೆ ಗೆ ಐದು ಕಂತಿನ ಹಣ ಪಡೆದುಕೊಂಡ ಫಲಾನುಭವಿಗಳು ಏನ್ ಪಿ ಸಿಐ ಮ್ಯಾಪಿಂಗ್ ಮಾಡಿಸಿಕೊಳ್ಳುವ ಅಗತ್ಯವಿಲ್ಲ.
* ಬ್ಯಾಂಕ್ ನಲ್ಲಿರುವ ತಾಂತ್ರಿಕ ಕಾರಣಗಳಿಂದ ಗುರಹಲಕ್ಷ್ಮಿ ಯೋಜನೆಯ ಹಣ ನಿಮ್ಮ ಅಕೌಂಟಿಗೆ ಜಮಾ ಆಗಿರುವುದಿಲ್ಲ, ಅಥವಾ ಮೊಬೈಲ್ ನಂಬರ್ ಲಿಂಕ್ ಆಗಿರುವುದಿಲ್ಲ. ಆಧಾರ್ ಲಿಂಕ್ ಆಗಿರುವುದಿಲ್ಲ. ಈ ಎಲ್ಲಾ ತಾಂತ್ರಿಕ ಕಾರಣಗಳಿಂದ ಹಣ ಬರುವುದು ಸ್ಥಗಿತಗೊಂಡಿರುತ್ತದೆ. ನಿಮ್ ಖಾತೆ ಇರುವ ಬ್ಯಾಂಕಿಗೆ ಹೋಗಿ ಈ ಕೆಲಸವನ್ನು ಕೂಡಲೇ ಮಾಡಬೇಕು.
* ಬ್ಯಾಂಕ್ ಖಾತೆ ಸ್ಟೇಟಸ್ ಅನ್ನು ಪರಿಶೀಲಿಸಿ, ತೊಂದರೆಗಳು ಕಂಡುಬಂದಲ್ಲಿ ಬ್ಯಾಂಕಿಗೆ ಹೋಗಿ ಅದನ್ನು ಸರಿಪಡಿಸಿಕೊಳ್ಳಿ. ಬ್ಯಾಂಕ್ ಖಾತೆಯಲ್ಲಿ ಸೇರುವ ಕಾರಣ ಹಣವನ್ನು ಹಾಕಿರಲಾಗಿರುವುದಿಲ್ಲ.
* ಚಾಲ್ತಿರುವ ಬ್ಯಾಂಕ್ ಖಾತೆಯ ವಿವರಗಳನ್ನು ನೀಡುವುದು ಉತ್ತಮವಾದ ಕೆಲಸ .