ರೈತರಿಗೆ ಗುಡ್ ನ್ಯೂಸ್ ಕೃಷಿ ಇಲಾಖೆಯಿಂದ 28 ಸಾವಿರ ರೂ.ವರೆಗೆ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ.!

ಈ ಯೋಜನೆಯಡಿಯಲ್ಲಿ, ರೈತರಿಗೆ ಹನಿ ನೀರಾವರಿ, ತುಂತುರು ನೀರಾವರಿ ಮತ್ತು ಇತರ ನೀರಾವರಿ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಸಹಾಯಧನವನ್ನು ನೀಡಲಾಗುತ್ತದೆ.

ಪ್ರಧಾನಮಂತ್ರಿ ಕೃಷಿ ಸಿಂಚಾಯಿ ಯೋಜನೆಯು (PMKSY) ನೀರಿನ ಬಳಕೆಯನ್ನು ಹೆಚ್ಚಿಸಲು ಮತ್ತು ಕೃಷಿ ಉತ್ಪಾದನೆಯನ್ನು ಹೆಚ್ಚಿಸಲು ಸರ್ಕಾರವು ಜಾರಿಗೆ ತಂದಿರುವ ಒಂದು ಪ್ರಮುಖ ಯೋಜನೆಯಾಗಿದೆ.

ಕೃಷಿ ಇಲಾಖೆಯಿಂದ ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಪರಿಶಿಷ್ಠ ಜಾತಿ ವರ್ಗದ ರೈತರಿಗೆ ತುಂತುರು ನೀರಾವರಿ ಘಟಕಗಳ ವಿತರಣೆಯಡಿ ಅರ್ಜಿ ಆಹ್ವಾನಿಸಲಾಗಿದೆ.

2024-25ನೇ ಸಾಲಿನ ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಲ್ಲಿ ತುಂತುರು ನೀರಾವರಿ ಘಟಕಗಳ ವಿತರಣೆಗೆ ಕೊಪ್ಪಳ ತಾಲ್ಲೂಕಿಗೆ ಪರಿಶಿಷ್ಠ ಜಾತಿ ವರ್ಗದ ರೈತರಿಗೆ 651 ಹೆಕ್ಟರ್‌ಗಳಿಗೆ ಗುರಿಯನ್ನು ನಿಗದಿಪಡಿಸಿದ್ದು, ಇಲ್ಲಿಯವರೆಗೆ 192 ಹೆಕ್ಟರ್ ಘಟಕಗಳನ್ನು ವಿತರಣೆ ಮಾಡಲಾಗಿದೆ.

ಇದನ್ನು ಓದಿ:ಗೃಹಲಕ್ಷ್ಮಿ ಯೋಜನೆಯ ಹಣ ಬಿಡುಗಡೆ ನಿಮ್ಮ ಖಾತೆಗೆ 2,000 ಹಣ ಬಂದಿದೆಯಾ ಹೀಗೆ ಚೆಕ್ ಮಾಡಿ!

ರೈತರು 2 ಹೆಕ್ಟರ್‌ಗಳವರೆಗೆ ತುಂತುರು ನೀರಾವರಿ ಘಟಕಗಳನ್ನು ಪಡೆಯಲು ಅವಕಾಶವಿರುತ್ತದೆ. ಈ ರೈತರು 75 ಎಂ.ಎಂ.ಗೆ 1 ಹೆಕ್ಟರ್‌ಗೆ ರೈತ ವಂತಿಕೆ 4667 ರೂ. ಹಾಗೂ ಸಹಯಧನ 21,775 ಇದ್ದು ರೂ., 2 ಹೆಕ್ಟರ್‌ಗೆ ರೈತ ವಂತಿಕೆ 6540 ರೂ. ಮತ್ತು ಸಹಾಯಧನ 31,191 ರೂ.ಇದೆ. 63 ಎಂ.ಎಂ.ಗೆ 1 ಹೆಕ್ಟರ್‌ಗೆ ರೈತ ವಂತಿಕೆ 4139 ರೂ. ಹಾಗೂ ಸಹಾಯಧನ 19429 ರೂ. ಇದ್ದು, 2 ಹೆಕ್ಟರ್‌ಗೆ ರೈತ ವಂತಿಕೆ 5772 ಮತ್ತು ಸಹಾಯಧನ 28050 ರೂ.ಇರುತ್ತದೆ.

ರೈತರು ಈ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳಲು ಸಂಬಂಧಪಟ್ಟ ರೈತ ಸಂಪರ್ಕ ಕೇಂದ್ರಗಳಿಗೆ ಭೇಟಿ ನೀಡಿ ನಿಗದಿತ ನಮೂನೆಯಲ್ಲಿ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿಯನ್ನು ಸಲ್ಲಿಸಿ ಯೋಜನೆಯ ಸದಪಯೋಗವನ್ನು ಪಡೆದುಕೊಳ್ಳುವಂತೆ ಕೊಪ್ಪಳ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಗತ್ಯವಿರುವ ದಾಖಲೆಗಳು

  1. ಪಹಣಿ (ಆರ್‌ಟಿಸಿ)
  2. ಭೂಮಿಯ ಮಾಲೀಕತ್ವದ ಪುರಾವೆ
  3. ಆಧಾರ್ ಕಾರ್ಡ್
  4. ಮತದಾರರ ಗುರುತಿನ ಚೀಟಿ
  5. ರೇಷನ್ ಕಾರ್ಡ್
  6. ಬ್ಯಾಂಕ್ ಪಾಸ್ ಬುಕ್
  7. ಪಾಸ್‌ಪೋರ್ಟ್ ಗಾತ್ರದ ಭಾವಚಿತ್ರಗಳು
  8. ಫ್ರೂಟ್ಸ್ ಐಡಿ
  9. ಜಂಟಿ ಪಹಣಿಯಿದ್ದರೆ ಒಪ್ಪಿಗೆ ಪ್ರಮಾಣ ಪತ್ರ
  10. ಜಾತಿ ಪ್ರಮಾಣ ಪತ್ರ

ಹೆಚ್ಚಿನ ಮಾಹಿತಿಗಾಗಿ ನಿಮ್ಮ ಹತ್ತಿರದ ಕೃಷಿ ಇಲಾಖೆಯನ್ನು ಸಂಪರ್ಕಿಸಿ.

ಇದನ್ನು ಓದಿ:ಬೆಂಬಲ ಬೆಲೆಯಲ್ಲಿ ಕುಸುಬಿ ಖರೀದಿ ಈ ಜಿಲ್ಲೆಯವರಿಗೆ ಮಾತ್ರ ಅವಕಾಶ

Admin
Author

Admin

Leave a Reply

Your email address will not be published. Required fields are marked *