government schemes

ವಿವಿಧ ಕೌಶಲ್ಯ ಅಭಿವೃದ್ಧಿಗೆ ಅರ್ಜಿ ಆಹ್ವಾನ


ಆತ್ಮೀಯ ರೈತ ಬಾಂಧವರೇ,
SBI&ASF ಗ್ರಾಮೀಣ ಸ್ವಯಂ ಉದ್ಯೋಗ ತರಬೇತಿ ಸಂಸ್ಥೆ (ಗಿಟ್‌ರ್ಡ್)ಹುಲಕೋಟಿ, ಗದಗ ಮತ್ತು ಅಗ್ರೀಕಲ್ಬರಲ್ ಸೈನ್ಸ್ ಫೌಂಡೇಶನ್ ಹುಲಕೋಟಿ ಸಂಯುಕ್ತಾಶ್ರಯದಲ್ಲಿ ಕುರಿ ಸಾಕಾ ಣಿಕೆ, ಕೋಳಿ ಸಾಕಾಣಿಕೆ, ಮೊಬೈಲ್‌ ರಿಪೇರಿ ತರ ಬೇತಿ, ಆರಿ ವರ್ಕ್‌ಸ್ ಈ ಉಚಿತ ತರಬೇತಿ ಏಪ್ರಿಲ್‌ನಲ್ಲಿ ಆರಂಭವಾಗಲಿದ್ದು. ಆದ್ದರಿಂದ ಆಸಕ್ತರು, ನಿರುದ್ಯೋಗಿ ಯುವಕ, ಯುವತಿಯರು, ಸ್ವ-ಸಹಾಯ ಗುಂಪಿನವರು ಮತ್ತು ಸಾಮಾನ್ಯ ಜನರು 19 ರಿಂದ 44 ವಯಸ್ಸಿನೊಳಗಿನ ಗ್ರಾಮೀಣ ಭಾಗದವರಿಂದ ಅರ್ಜಿ ಆಹ್ವಾನಿಸಿದೆ.

ಈ ಉಚಿತ ತರಬೇತಿಗಳು ಆರ್‌ಸೆಟಿ (ಗಿಟ್‌ಸರ್ಡ್) ಕೃಷಿ ವಿಜ್ಞಾನ ಕೇಂದ್ರದ ಆವರಣ ಹುಲಕೋಟಿ ಸಂಸ್ಥೆಯಲ್ಲಿ ಆಯೋಜಿಸಲಾಗುವುದು, ತರಬೇತಿಯು ಊಟ, ವಸತಿಯೊಂದಿಗೆ ಉಚಿತವಾಗಿರುತ್ತದೆ. ಕೇಂದ್ರ ಸರ್ಕಾರದಿಂದ ತರಬೇತಿಯ ಪ್ರಮಾಣ ಪತ್ರ ಸಿಗುತ್ತದೆ. ಮಹಿಳೆಯರಿಗೆ ಪ್ರತ್ಯೇಕ ವಸತಿ ಸೌಲಭ್ಯವಿರುತ್ತದೆ. ತರಬೇತಿ ಪಡೆಯಲು ಇಚ್ಚಿಸುವವರು ಕಡ್ಡಾಯವಾಗಿ ಗ್ರಾಮೀಣ ಪ್ರದೇಶದಲ್ಲಿ ವಾಸವಾಗಿರಬೇಕು, ಬಿಪಿಎ ಲ್ ರೇಶನ್ ಕಾರ್ಡ್, ಎ.ಎ.ವೈ, ಪಿ.ಎಚ್.ಎಚ್, ಆದ್ಯತಾ ಕುಟುಂಬ ರೇಶನ್ ಕಾರ್ಡ್ ಅಥವಾ ನರೇಗಾ (ಜಾಬ್) ಕಾರ್ಡ್ ಇವುಗಳಲ್ಲಿ ಯಾವುದಾದರು ಒಂದನ್ನು ಹೊಂದಿರಬೇಕು.
(ಆಧಾರಕಾರ್ಡ್, ಫೋ ಟೋ-ರೇಶನ್‌ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಈ ಎಲ್ಲ 2ಸೆಟ್ ನಕಲು ಪ್ರತಿಗಳನ್ನು ಸಲ್ಲಿಸಬೇಕು) ಆರ್ಸೆಟಿ ಹುಲಕೋಟಿ, ಗದಗ ಸಂಸ್ಥೆಯಲ್ಲಿ ದೊರೆಯುವ ಅರ್ಜಿ ಫಾರಂನಲ್ಲಿ ತುಂಬಿ ನಿರ್ದೇ ಶಕರು ಆರ್‌ಸೆಟಿ ಸಂಸ್ಥೆ ಹುಲಕೋಟಿ, ಕೃಷಿ ವಿಜ್ಞಾನಕೇಂದ್ರ ಆವರಣ, ಹುಲಕೋಟಿ ಗದಗ ಇವರಿಗೆ ಅರ್ಜಿ ಸಲ್ಲಿಸಬೇಕು ಅಥವಾ ಹೆಚ್ಚಿನ ಮಾಹಿತಿಗಾಗಿ ದೂರ ವಾಣಿ ಸಂಖ್ಯೆ 9480880201, 8880169996, 9632287949, 9632635268 ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.


ಈ ಮಾಹಿತಿಯು ಗದಗ ಜಿಲ್ಲೆಗೆ ಮಾತ್ರ ಅನ್ವಯವಾಗಿದ್ದು, ಮೇಲಿನ ಮೊಬೈಲ್ ನಂಬರ್ ಗೆ ಸಂಪರ್ಕಿಸಿ ಪೂರ್ಣ ವಿವರವನ್ನು ಪಡೆದುಕೊಳ್ಳಬಹುದು.

LEAVE A RESPONSE

Your email address will not be published. Required fields are marked *

Open chat
Hello 👋
Can we help you?