ಬೆಳೆಗಳ ಕುರಿತು ನಿಖರ ತೀರ್ಮಾನ ಕೈಗೊಳ್ಳಲು ನೆರವು ನೀಡುವ ಡಿಜಿಟಲ್ ಕೃಷಿ ಸೇವೆಗಳ ಕೇಂದ್ರ ಸ್ಥಾಪನೆ
ತೋಟಗಾರಿಕಾ ಬೆಳೆಗಳಿಗೆ ಉತ್ತೇಜನ
195 ಕೋಟಿ ವೆಚ್ಚದಲ್ಲಿ ಸಮಗ್ರ ತೋಟಗಾರಿಕಾ ಅಭಿವೃದ್ಧಿ ಯೋಜನೆ-2 ಜಾರಿ
ರಾಜ್ಯದ ಒಟ್ಟು 20 GI ಟ್ಯಾಗ್ ಹೊಂದಿರುವ ಬೆಳೆಗಳು ಹಾಗೂ ಇತರೆ ದೇಸಿ ತಳಿಗಳ ಬೀಜ ಬ್ಯಾಂಕ್ ಸ್ಥಾಪನೆ
ತೋಟಗಾರಿಕಾ ಪ್ರವಾಸೋದ್ಯಮಕ್ಕೆ ಉತ್ತೇಜನ
ರೇಷ್ಮೆ ಕೃಷಿಯಲ್ಲಿ ಹೊಸ ಮೈಲಿಗಲ್ಲು
ಮಧ್ಯಮ ವರ್ಗದ ರೇಷ್ಮೆ ನೂಲು ಬಿಚ್ಚಾಣಿಕೆದಾರರಿಗೆ 120 ಕೊನೆಗಳ ಸ್ವಯಂಚಾಲಿತ ರೀಲಿಂಗ್ ಘಟಕಗಳ ಸ್ಥಾಪನೆಗೆ ಪ್ರೋತ್ಸಾಹ
ರಾಮನಗರ ಮತ್ತು ಶಿಡ್ಲಘಟ್ಟ ಹೈ-ಟೆಕ್ ರೇಷ್ಮೆ ಗೂಡಿನ ಮಾರುಕಟ್ಟೆಯ ಎರಡನೇ ಹಂತದ ಕಾಮಗಾರಿ ₹250 ಕೋಟಿ ವೆಚ್ಚದಲ್ಲಿ ಅನುಷ್ಠಾನ
ಸರ್ಕಾರಿ ರೇಷ್ಮೆ ಗೂಡಿನ ಮಾರುಕಟ್ಟೆಗಳಲ್ಲಿ ಗುಣಮಟ್ಟ ಪರೀಕ್ಷೆ ಮತ್ತು ಶ್ರೇಣೀಕರಣಕ್ಕಾಗಿ Assayer ಗಳ ನಿಯೋಜನೆ
ಹಸನಾದ ಹೈನುಗಾರರ ಬದುಕು
ಅನುಗ್ರಹ’ ಯೋಜನೆಯಡಿ ಪರಿಹಾರ ಮೊತ್ತ ಹೆಚ್ಚಳ; ಎಮ್ಮೆ ಮತ್ತು ಎತ್ತುಗಳಿಗೆ ₹15,000, ಕುರಿ ಮತ್ತು ಮೇಕೆ ₹7500 ಕುರಿ/ ಮೇಕೆ ಮರಿಗಳಿಗೆ ₹5000 ಗಳಿಗೆ ಹೆಚ್ಚಳ
50 ನೂತನ ಪಶು ಚಿಕಿತ್ಸಾಲಯಗಳ ಪ್ರಾರಂಭಕ್ಕೆ ಕ್ರಮ
2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣ
ಸಹಕಾರಿ ವ್ಯವಸ್ಥೆಯ ಬಲವರ್ಧನೆ
37 ಲಕ್ಷ ರೈತರಿಗೆ ₹28,000 ಕೋಟಿ ಸಾಲ ವಿತರಣೆಯ ಗುರಿ
3 ಸಾವಿರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಸಂಪೂರ್ಣ ಗಣಕೀಕರಣಕ್ಕೆ ಕ್ರಮ
ಕಲ್ಯಾಣ ಕರ್ನಾಟಕದಲ್ಲಿ ₹60 ಕೋಟಿ ವೆಚ್ಚದಲ್ಲಿ ಗ್ರಾಮೀಣ ಉಗ್ರಾಣಗಳ ನಿರ್ಮಾಣ
ಕೃಷಿ ಭೂಮಿಗೆ ಜೀವಜಲ
ಮೇಕೆದಾಟು ಸಮತೋಲನ ಜಲಾಶಯ ಯೋಜನೆಯ ಪೂರ್ವ ಸಿದ್ಧತಾ ಕಾರ್ಯ ಅಂತಿಮಗೊಂಡಿದ್ದು, ಕೇಂದ್ರ ಸರ್ಕಾರದ ಸಕ್ಷಮ ಪ್ರಾಧಿಕಾರದ ತೀರುವಳಿ ದೊರೆತ ಕೂಡಲೇ ಯೋಜನೆಯನ್ನು ಅನುಷ್ಠಾನಗೊಳಿಸಲಾಗುವುದು
ಈ ಕಳಸಾ-ಬಂಡೂರಿ ನಾಲಾ ತಿರುವು ಯೋಜನೆಯಡಿ ಕೇಂದ್ರದ ಅನುಮೋದನೆ ದೊರೆತ ಕೂಡಲೇ ಕಾಮಗಾರಿ ಪ್ರಾರಂಭ
ಕೃಷ್ಣಾ, ಕಾವೇರಿ ಮತ್ತು ಇತರ ನದಿಗಳ ಕಣಿವೆಯಡಿ ವಿವಿಧ ಯೋಜನೆಗಳಡಿ ಬಾಕಿ ಇರುವ ಕಾಮಗಾರಿ ಪೂರ್ಣಗೊಳಿಸಲು ಕ್ರಮ
ಸಮೃದ್ದ ಅಂತರ್ಜಲ, ಸಂಪದ್ಭರಿತ ಕರ್ನಾಟಕ
ಎತ್ತಿನಹೊಳೆ ಯೋಜನೆಯಡಿ ಮಧುಗಿರಿ ತಾಲ್ಲೂಕಿನ 45 ಹಾಗೂ ಕೊರಟಗೆರೆ ತಾಲೂಕಿನ 62 ಕೆರೆ ತುಂಬಿಸುವ ಯೋಜನೆ ₹553 ಕೋಟಿ ಮೊತ್ತದಲ್ಲಿ ಅನುಷ್ಠಾನ
ಹೆಚ್.ಎನ್. ವ್ಯಾಲಿ 2ನೇ ಹಂತದ ಯೋಜನೆಯಡಿ ₹70 ಕೋಟಿ ಮೊತ್ತದಲ್ಲಿ 24 ಕೆರೆ ಹಾಗೂ ₹93.50 ಕೋಟಿ ಮೊತ್ತದಲ್ಲಿ ಬೆಂಗಳೂರು ಪೂರ್ವ ತಾಲೂಕಿನ 18 ಕೆರೆ ತುಂಬಿಸುವ ಯೋಜನೆ ಪೂರ್ಣಗೊಳಿಸಲು ಕ್ರಮ
ಕೆರೆಗಳ ಆಧುನಿಕರಣ, ಅಣೆಕಟ್ಟು ಮತ್ತು ಪಿಕಪ್, ಕಿಂಡಿ ಅಣೆಕಟ್ಟು, ಏತನೀರಾವರಿ, ನಿಷ್ಕ್ರಿಯ ಯೋಜನೆಗಳ ಪುನರುಜ್ಜಿವನ ಇತ್ಯಾದಿ ಯೋಜನೆಗಳಡಿ 2,000 ಕೋಟಿ ರೂ. ಮೊತ್ತದ ಹೊಸ ಕಾಮಗಾರಿಗಳ ಆರಂಭ
2 thoughts on “ಈ ಬಾರಿ ಬಜೆಟ್ ನಲ್ಲಿ ರೈತರಿಗೆ ಸಿಕ್ಕಿದ್ದೇನು ಇಲ್ಲಿದೆ ನೋಡಿ?”