ಪಹಣಿ ಮತ್ತು ಆಧಾರ್ ಕಾರ್ಡ್ ನಲ್ಲಿ ಹೆಸರನ್ನು ಹೇಗೆ ತಿದ್ದುಪಡಿ ಮಾಡಿಕೊಳ್ಳಬಹುದು?

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೇ, ನಿಮ್ಮ ಪಹಣಿಯಲ್ಲಿ ಮತ್ತು ಆಧಾರ್ ಕಾರ್ಡ್ ನಲ್ಲಿ ನಿಮ್ಮ ಹೆಸರು ಬೇರೆ ಬೇರೆ ಇದೆಯೇ? ಸರಿ ಮಾಡಿಕೊಳ್ಳುವುದು ಹೇಗೆ? ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯಲ್ಲಿರುವ ಹೆಸರನ್ನು ಹೊಂದಿಸಿಕೊಳ್ಳುವುದು ಹೇಗೆ ಎಂಬುದನ್ನು  ನೋಡೋಣ.
ಆಧಾರ್ ಕಾರ್ಡ್ ಮತ್ತು ಪಹಣಿಯಲ್ಲಿ ಒಂದೇ ತೆರನಾಗಿ ಯಾವ ರೀತಿ ಹೆಸರು ಹೊಂದಿಸಿಕೊಳ್ಳುವುದು ಎಂಬುದನ್ನು ಅದಕ್ಕೆ ಯಾವ ಯಾವ ದಾಖಲೆಗಳು ಬೇಕು ಎಂಬುದನ್ನು ನೋಡೋಣ.
ಬೇಕಾಗುವ ದಾಖಲೆಗಳು :
1. ಆಧಾರ್ ಕಾರ್ಡ್
2.20 ರೂಪಾಯಿ ಸ್ಟ್ಯಾಂಪ್ ಪೇಪರ್ ನ ಡಿಕ್ಲರೇಷನ್ ಅನ್ನು ತಹಸೀಲ್ದಾರರಿಗೆ ನೀಡಬೇಕು.
3.ಪಹಣಿ
4. ಹೆಸರನ್ನು ತಿದ್ದುಪಡಿ ಮಾಡುವ ಕುರಿತು ಒಂದು ಅರ್ಜಿಯನ್ನು ಬರೆಯಬೇಕಾಗುತ್ತದೆ.
ದಾಖಲೆಗಳನ್ನು ತೆಗೆದುಕೊಂಡು ಹೋಗಿ ನೀವು ನಿಮ್ಮ ತಹಸೀಲ್ದಾರ್ ಆಫೀಸರ್ ನ ಅವಕ ಶಾಖೆಯಲ್ಲಿ ನೀಡಬೇಕು.
ನೀವು ನೀಡಿರುವ ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಇದು ಹದಿನೈದು ದಿನದ ಒಳಗಾಗಿ  ಭೂಮಿ ಕೇಂದ್ರದಲ್ಲಿ ಎಂಟ್ರಿ ಯಾಗಿ ಸುಮಾರು 15 ದಿನದ ಒಳಗಾಗಿ ನಿಮ್ಮ ಆಧಾರ್ ಕಾರ್ಡ್ ನಲ್ಲಿರುವಂತೆ ಪಹಣಿಯಲ್ಲಿಯೂ ನಿಮ್ಮ ಹೆಸರು ಒಂದೇ ತರ ಆಗುತ್ತದೆ.
ಗಮನದಲ್ಲಿಲ್ಲಿಡಬೇಕಾದ ಅಂಶಗಳು :
1. ಸಣ್ಣ ತಿದ್ದುಪಡಿಗಳಿಗೆ ಮಾತ್ರ ಅವಕಾಶ. ಹೆಸರನ್ನು.ಪೂರ್ತಿ ಬದಲಾಯಿಸುವುದಾಗಲಿ ಅಥವಾ ಹೊಸ ಹೆಸರನ್ನು ಸೇರ್ಪಡೆ ಮಾಡುವುದಾಗಲಿ ಮಾಡಲಾಗುವುದಿಲ್ಲ.
2. ಹೆಸರು ಬದಲಾವಣೆ ಅಥವಾ ಪ್ರಮುಖ ತಿದ್ದುಪಡಿಗಳನ್ನು ಒಂದನಿಗೆ ಸಬ್ ರೆಜಿಸ್ಟರ್ ಆಫೀಸ್ ಗೆ ಹೋಗಬೇಕಾಗುತ್ತದೆ.
3. ಜಮೀನುನಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳ ಬಗ್ಗೆ ಮಾಹಿತಿ ಬೇಕಾದರೆ ನಿಮ್ಮ ಆಧಾರ್ ಕಾರ್ಡ್ ಮತ್ತು ಪಹಣಿಗಳನ್ನು ಲಿಂಕ್ ಮಾಡಿಸಿ. ಭೂಮಿ ಕೇಂದ್ರಕ್ಕೆ ಹೋಗಿ ನಿಮ್ಮ ಮೊಬೈಲ್ ನಂಬರನ್ನು ಲಿಂಕ್ ಮಾಡಿಸಿ. ವಹಿವಾಟಿನ ಬಗ್ಗೆ ನಿಮಗೆ ಮೆಸೇಜ್ ಬರುತ್ತದೆ.
4. ಬದಲಾವಣೆಗೆ ಇರುವ ಇನ್ನೊಂದು ಮಾರ್ಗವೆಂದರೆ ನಿಮ್ಮ ಜಮೀನಿನ ದಾಖಲೆಯ ಪ್ರಕಾರ ಆಧಾರ್ ಕಾರ್ಡ್ ನಲ್ಲಿ ತಿದ್ದುಪಡಿ ನಿಮ್ಮ ಆಯ್ಕೆ.

WhatsApp Group Join Now
Telegram Group Join Now

Leave a Comment