ಈ ನಾಲ್ಕನೇ ವಿಧಾನ ತುಂಬಾ ಪ್ರಮುಖ ವಿಧಾನ ಮತ್ತು ಯಾವುದೇ ರೀತಿ ನೀವು ಬ್ಯಾಂಕಿಗೆ ಹೋಗುವುದು ಅವಶ್ಯಕತೆ ಇಲ್ಲ ನಿಮ್ಮ ಆಧಾರ್ ಕಾರ್ಡಿಗೆ ನಿಮ್ಮ ಮೊಬೈಲ್ ಸಂಖ್ಯೆ ಲಿಂಕ್ ಆಗಿದ್ದರೆ ಸಾಕು!
ಹಂತ 1: ನೀವು ಕರ್ನಾಟಕದಿಂದ ಹೊಸದಾಗಿ ಬಿಡುಗಡೆ ಮಾಡಿರುವ ಡಿಬಿಟಿ ಮೊಬೈಲ್ ಅಪ್ಲಿಕೇಶನ್ ಬಗ್ಗೆ ಮಾಹಿತಿ ಗೊತ್ತಿರಬಹುದು. ಈ ಒಂದು ಆಪ್ ಮೂಲಕ ನೀವು ನಿಮ್ಮ ಆಧಾರ್ ಸಂಖ್ಯೆಯನ್ನು ಬಳಕೆ ಮಾಡಿಕೊಂಡು ನಿಮ್ಮ ಖಾತೆಗೆ ಅಂದರೆ ಸರಕಾರದಿಂದ ಜಮಾ ಹಾಗೂ ಯಾವುದೇ ರೀತಿಯ ಹಣದ ಸ್ಟೇಟಸ್ ಅನ್ನು ಇಲ್ಲಿಯವರೆಗೆ ಎಷ್ಟಾಗಿದೆ ಎಂದು ಚೆಕ್ ಮಾಡಿಕೊಳ್ಳಬಹುದು.
ಹಂತ 2: ಸ್ಟೇಟಸ್ ಚೆಕ್ ಮಾಡಿಕೊಳ್ಳಲು ಮೊಟ್ಟಮೊದಲಿಗೆ ನೀವು ಗೂಗಲ್ ಪ್ಲೇ ಸ್ಟೋರ್ ಮೂಲಕ ನೀವು ಮೊಬೈಲ್ ಅಪ್ಲಿಕೇಶನ್ ಇನ್ಸ್ಟಾಲ್ ಮಾಡಿಕೊಳ್ಳಬೇಕು. ಇನ್ಸ್ಟಾಲ್ ಮಾಡಿಕೊಳ್ಳಬೇಕಾದರೆ ಮೊಟ್ಟಮೊದಲಿಗೆ ನೀವು ನಿಮ್ಮ ಪ್ಲೇ ಸ್ಟೋರ್ ಕರ್ನಾಟಕ ಡಿಬಿಟಿ ಅಥವಾ ಡಿ ಬಿ ಟಿ ಕರ್ನಾಟಕ ಕನ್ನಡ ಅಥವಾ ಇಂಗ್ಲೀಷ್ ಯಾವುದಾದರೂ ಒಂದನ್ನು ಸರ್ಚ್ ಮಾಡಿ ಈಗ ನಿಮ್ಮ ಕಣ್ಣೆದುರುಗಡೆ ಒಂದು ಅಪ್ಲಿಕೇಶನ್ ತೋರಿಸುತ್ತದೆ.
ಹಂತ 3: ಈಗ ಆಫ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಅಥವಾ ನಿಮಗೆ ಇನ್ಸ್ಟಾಲ್ ಮಾಡಿಕೊಳ್ಳಲು ತೊಂದರೆ ಆಗುತ್ತಿದ್ದರೆ ನಾವು ಇಲ್ಲಿ ಕೆಳಗಡೆ ಲಿಂಕ್ ನೀಡಿರುತ್ತೇವೆ ಇದು ಸರ್ಕಾರದಿಂದ ಅಧಿಕೃತವಾಗಿ ಬಿಡುಗಡೆ ಮಾಡಿರುವ ಕರ್ನಾಟಕ ನೇರ ನಗದು ವರ್ಗಾವಣೆ ಮೊಬೈಲ್ ಅಪ್ಲಿಕೇಶನ್ ಲಿಂಕ್
https://play.google.com/store/apps/details?id=com.dbtkarnataka
ಹಂತ 4: ಇನ್ಸ್ಟಾಲ್ ಮಾಡಿಕೊಂಡ ನಂತರ ಮೊಟ್ಟಮೊದಲಿಗೆ ನೀವು ಇದನ್ನು ರಿಜಿಸ್ಟರ್ ಆಗಬೇಕು ಅಥವಾ ಸೈನ್ ಅಪ್ ಮಾಡಬೇಕು, ತುಂಬಾ ಸುಲಭ ವಿಧಾನವಿರುತ್ತದೆ ನೀವು ನಿಮ್ಮ ಮೊಬೈಲ್ ನಲ್ಲಿ ಸ್ವಲ್ಪ ನಿಮಗೆ ಮೊಬೈಲ್ ಒತ್ತಾಡಲು ಬರುತ್ತಿದ್ದರೆ ತಕ್ಷಣವಾಗಿ ಇದನ್ನು ಮಾಡಬಹುದು ಮಾಡುವ ವಿಧಾನ ಕೆಳಗಡೆ ಹೇಳಿದ್ದೇವೆ ನೋಡಿ!
ಹಂತ 5: ಈಗ ನೀವು ರಿಜಿಸ್ಟರ್ ಮೇಲೆ ಕ್ಲಿಕ್ ಮಾಡಬೇಕು ಕ್ಲಿಕ್ ಮಾಡಿದ ನಂತರ ನಿಮ್ಮ ಆಧಾರ್ ಕಾರ್ಡ್ ಸಂಖ್ಯೆಯನ್ನು ಅಲ್ಲಿ ಸರಿಯಾಗಿ 12 ಸಂಖ್ಯೆಯ ಅಂಕಿಯನ್ನು ನಮೂದಿಸಬೇಕು ನಂತರ ಓಟಿಪಿ ಮೇಲೆ ಕ್ಲಿಕ್ ಮಾಡಬೇಕು. ಓಟಿಪಿ ನಿಮ್ಮ ಆಧಾರ್ ರಿಜಿಸ್ಟರ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುತ್ತದೆ ಮತ್ತು 6 ಅಂಕಿಯ ಸಂಖ್ಯೆ ಆಗಿರುತ್ತದೆ. ತಕ್ಷಣವಾಗಿ ಆ ಸಂಖ್ಯೆಯನ್ನು ಅಲ್ಲಿ ನಮೂದಿಸಬೇಕು ಮತ್ತು ಒಂದು ನಾಲ್ಕು ಗುಪ್ತ ಅಂಕಿಯನ್ನು ಇಡಲು ಹೇಳುತ್ತದೆ ಅದನ್ನು ಇಡಬೇಕು.
ಹಂತ 6: ರಿಜಿಸ್ಟರ್ ಆದ ನಂತರ ತಕ್ಷಣವೇ ನಾಲ್ಕು ಗುಪ್ತಂಕಿಯನ್ನು ಬಳಕೆ ಮಾಡಿಕೊಂಡು ಈಗ ಕರ್ನಾಟಕ ಡಿಬೇಟಿ ಮೊಬೈಲ್ ಅಪ್ಲಿಕೇಶನ್ ಲಾಗಿನ್ ಆಗಬಹುದು ಲಾಗಿನ್ ಆದ ಕೂಡಲೇ ನಿಮ್ಮ ಆಧಾರ್ ಕಾರ್ಡ್ ನಿಮ್ಮ ಡಿ ವಿ ಟಿ ಅಪ್ಲಿಕೇಶನ್ ನೊಂದಿಗೆ ಲಿಂಕ್ ಆಗುತ್ತದೆ ಈಗ ನೀವು ಪೇಮೆಂಟ್ ಹಿಸ್ಟರಿ ಮೇಲೆ ಕ್ಲಿಕ್ ಮಾಡಿದರೆ ಸಾಕು ಸಂಪೂರ್ಣವಾಗಿ ಕೇವಲ ಇದೆ ಅಲ್ಲದೆ ಅಂದರೆ ಗೃಹಲಕ್ಷ್ಮಿ ಅಲ್ಲದೆನೆ ಯಾವುದೇ ರೀತಿಯ ಸರಕಾರದಿಂದ ಜಮಾ ಆಗಿರುವ ಹಣವನ್ನು ಮೊಬೈಲ್ ನಲ್ಲಿಯೇ ಬ್ಯಾಂಕಿಗೆ ಹೋಗದೆ ನೋಡುವ ಅವಕಾಶ ಈ ವಿಧಾನ ನೋಡಿಕೊಂಡು ತಿಳಿಯಬಹುದು.
ಒಂದು ವೇಳೆ ಹಣ ಬರದಿದ್ದರೆ ಏನು ಮಾಡಬೇಕು?
ಒಂದು ವೇಳೆ ನೀವು ಆಪ್‌ನಲ್ಲಿ ಚೆಕ್ ಮಾಡಿದಾಗ ಹಣ ಜಮಾ ಆ ಗದಿದ್ದರೆ, ಈ ಕೆಳಗಿನವುಗಳನ್ನು ಪರಿಶೀಲಿಸಿ:
Status ಚೆಕ್ ಮಾಡಿ: ಆಪ್‌ನಲ್ಲಿ ‘Payment Failure’ ಎಂದು ತೋರಿಸುತ್ತಿದ್ದರೆ, ಅದಕ್ಕೆ ಕಾರಣವನ್ನೂ ಅಲ್ಲಿಯೇ ನೀಡಿರುತ್ತಾರೆ (ಉದಾಹರಣೆಗೆ: Bank Account Closed ಅಥವಾ KYC Pending).
ಬ್ಯಾಂಕ್ ಸಂಪರ್ಕಿಸಿ: ಆಧಾರ್ ಲಿಂಕ್ ಆಗಿದ್ದರೂ ಹಣ ಬರದಿದ್ದರೆ, ಒಮ್ಮೆ ನಿಮ್ಮ ಬ್ಯಾಂಕಿಗೆ ಭೇಟಿ ನೀಡಿ “Direct Benefit Transfer (DBT)” ಸಕ್ರಿಯವಾಗಿದೆಯೇ ಎಂದು ಖಚಿತಪಡಿಸಿಕೊಳ್ಳಿ.
ಗ್ರಾಮ ಒನ್/ಬೆಂಗಳೂರು ಒನ್: ಸಮೀಪದ ಸೇವಾ ಕೇಂದ್ರಗಳಿಗೆ ಭೇಟಿ ನೀಡಿ ನಿಮ್ಮ ಅರ್ಜಿಯ ಸ್ಥಿತಿಯನ್ನು ಪುನಃ ಪರಿಶೀಲಿಸಬಹುದು.