ಜೇನು ಕೃಷಿ ತರಬೇತಿ ಜುಲೈ 15 ಕೊನೆ ದಿನ! ತೋಟಗಾರಿಕೆ ಇಲಾಖೆಯಿಂದ ಅರ್ಜಿ ಆಹ್ವಾನ

WhatsApp Group Join Now
Telegram Group Join Now

ಧಾರವಾಡ: ರೈತರಿಗೆ ಜೇನು ಕೃಷಿ ತರಬೇತಿ ಅವಕಾಶ

ಧಾರವಾಡ ತೋಟಗಾರಿಕೆ ಇಲಾಖೆ ಮತ್ತು ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರ (ಕುಂಬಾಪೂರ ಫಾರ್ಮ) ರವರ ಸಹಯೋಗದಲ್ಲಿ ರೈತರಿಗಾಗಿ ಸಮಗ್ರ ಜೇನು ಕೃಷಿ ತರಬೇತಿ ಕಾರ್ಯಕ್ರಮವನ್ನು ಜುಲೈ 18, 2025 ರಂದು ಆಯೋಜಿಸಲಾಗಿದೆ.

ಈ ತರಬೇತಿಯು ರೈತರ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಮತ್ತು ವೈಜ್ಞಾನಿಕ ಜೇನು ಕೃಷಿಯ ವಿವಿಧ ಆಯಾಮಗಳನ್ನು ಒಳಗೊಂಡಿದೆ.

ಇದನ್ನು ಓದಿ: ರೈತರಿಗೆ ಬಂಪರ್ ಸುದ್ದಿ: 50% ರಿಯಾಯಿತಿಯಲ್ಲಿ ಕೃಷಿ ಯಂತ್ರೋಪಕರಣಗಳು! ಇಂದೇ ಅರ್ಜಿ ಹಾಕಿ! 

ತರಬೇತಿಯ ವಿವರಗಳು

ತರಬೇತಿಯಲ್ಲಿ ಒಳಗೊಂಡಿರುವ ಪ್ರಮುಖ ವಿಷಯಗಳು

  •  ವೈಜ್ಞಾನಿಕ ಜೇನು ಸಾಕಾಣಿಕೆ ಪದ್ಧತಿಗಳು
  • ಮತ್ತೆಜೇನಿನ ಉತ್ಪನ್ನಗಳ ಉತ್ಪಾದನೆ
  • ರಾಣಿ ಕಣಗಳ ಉತ್ಪಾದನೆ
  • ಇಳುವರಿ ಹೆಚ್ಚಿಸುವಲ್ಲಿ ಜೇನು ನೊಣಗಳ ಪಾತ್ರ
  • ಸ್ಥಳಾಂತರ ಜೇನು ಕೃಷಿ
  • ಜೇನಿನ ಶತ್ರುಗಳ ನಿರ್ವಹಣೆ
    ಅಳ್ನಾವರದ ಮಧುವನ ಕೇಂದ್ರದಲ್ಲಿ ಜೇನು ಕೃಷಿಯ ಪ್ರಾತ್ಯಕ್ಷಿಕೆಯನ್ನೂ ನೀಡಲಾಗುವುದು.

ಪ್ರಯೋಜನಗಳು ಮತ್ತು ನೋಂದಣಿ

ತರಬೇತಿಯಲ್ಲಿ ಭಾಗವಹಿಸುವ ರೈತರಿಗೆ ರಿಯಾಯಿತಿ ದರದಲ್ಲಿ ಜೇನು ಪೆಟ್ಟಿಗೆಗಳನ್ನು ವಿತರಿಸಲಾಗುವುದು.
ಆಸಕ್ತ ರೈತರು ಜುಲೈ 15, 2025 ರೊಳಗಾಗಿ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.

ಹೆಚ್ಚಿನ ಮಾಹಿತಿ ಮತ್ತು ನೋಂದಣಿಗಾಗಿ, ಪ್ರಾದೇಶಿಕ ತೋಟಗಾರಿಕಾ ಸಂಶೋಧನಾ ಮತ್ತು ವಿಸ್ತರಣೆ ಕೇಂದ್ರದ ವಿಸ್ತರಣಾ ಮುಂದಾಳು ಡಾ. ಪಲ್ಲವಿ ಜಿ. ರವರನ್ನು ಮೊಬೈಲ್ ಸಂಖ್ಯೆ: 7892770955 ಗೆ ಸಂಪರ್ಕಿಸಬಹುದು.

ಇದನ್ನು ಓದಿ: ಗ್ರಾಹಕರೇ ಗಮನಿಸಿ: ಇಂದು ಚಿನ್ನ-ಬೆಳ್ಳಿ ಬೆಲೆಯಲ್ಲಿ ಭಾರಿ ಬದಲಾವಣೆ! ನಿಮ್ಮ ನಗರದ ದರ ಇಲ್ಲಿದೆ 
WhatsApp Group Join Now
Telegram Group Join Now

Leave a Comment