News

ಗ್ರಾಹಕರೇ ನಾಳೆ ಕರ್ನಾಟಕ ಸಂಪೂರ್ಣ ಬಂದ್! ಏನೋ ಚಾಲೂ ಏನು ಬಂದಿರುತ್ತದೆ?

ಕರ್ನಾಟಕ ಬಂದ್ – ಮಾರ್ಚ್ 22, 2025: ಸಂಪೂರ್ಣ ಮಾಹಿತಿ

ಬಂದ್‌ಗೆ ಕಾರಣ:

ಇತ್ತೀಚೆಗೆ ಬೆಳಗಾವಿಯಲ್ಲಿ ಕನ್ನಡ ಭಾಷೆ ಮಾತನಾಡದ ಕಾರಣಕ್ಕಾಗಿ ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆದಿತ್ತು. ಈ ಘಟನೆಯ ವಿರುದ್ಧ ಕಿಡಿಕಾರಿದ ಕನ್ನಡ ಪರ ಸಂಘಟನೆಗಳ ಒಕ್ಕೂಟ ಈ ಘಟನೆಯನ್ನು ಖಂಡಿಸಿ ಮಾರ್ಚ್ 22ರಂದು ಕರ್ನಾಟಕ ಬಂದ್ಗೆ ಕರೆ ನೀಡಿದೆ.

ಬಂದ್ ಬೆಂಬಲಿಸಿದವರು:

ಕನ್ನಡ ಪರ ಸಂಘಟನೆಗಳ ಒಕ್ಕೂಟ
ಕರ್ನಾಟಕ ರಾಜ್ಯ ಸಂಘಟನೆಗಳು

ಬಂದ್ ನಲ್ಲಿ ಇರಬಹುದಾದ ಪರಿಣಾಮಗಳು:

1. ಚಿತ್ರಮಂದಿರ ಪ್ರದರ್ಶನಗಳು:
ಬೆಳಗಿನ ಪ್ರಥಮ ಪ್ರದರ್ಶನಗಳು ಬಂದ್ ಆಗುವ ಸಾಧ್ಯತೆಗಳಿವೆ.
2. ಖಾಸಗಿ ವಾಹನ ಸೇವೆಗಳು:
ಕ್ಯಾಬ್, ಆಟೋ, ಖಾಸಗಿ ಬಸ್ ಸೇವೆಗಳು ಬಂದ್‌ಗೆ ಬೆಂಬಲ ನೀಡುವ ಸಾಧ್ಯತೆ ಇದೆ.

3. ಶಾಲೆ ಮತ್ತು ಕಾಲೇಜುಗಳು:

ಶಾಲೆಗಳು ಮತ್ತು ಕಾಲೇಜುಗಳು ಬಂದ್ ಆಗುವ ಸಾಧ್ಯತೆಗಳಿವೆ.
ಪರೀಕ್ಷೆಗಳು ಮುಂದೂಡಲ್ಪಡುವ ಸಾಧ್ಯತೆ ಇದೆ.

4. ಹೋಟೆಲ್ ಮತ್ತು ರೆಸ್ಟೋರೆಂಟ್‌ಗಳು:

ಹೋಟೆಲ್ ಮಾಲೀಕರಿಂದ ಸಂಪೂರ್ಣ ಬೆಂಬಲ ಸಿಗುವ ನಿರೀಕ್ಷೆ ಇಲ್ಲ.

ಸರ್ಕಾರದ ನಿಲುವು:

ರಾಜ್ಯ ಸರ್ಕಾರ ಕರ್ನಾಟಕ ಬಂದ್‌ಗೆ ಬೆಂಬಲ ನೀಡುವುದಿಲ್ಲ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದ್ದಾರೆ.

ಸಾರ್ವಜನಿಕ ವ್ಯವಸ್ಥೆ ಪಾಳುಮಡುವಂತಾಗದಂತೆ ಪೊಲೀಸ್ ಭದ್ರತೆ ಹೆಚ್ಚಿಸಲಾಗುವುದು ಎಂದು ಹೇಳಿದ್ದಾರೆ.

ಬಂದ್ ನ ಸಮಯ:

ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದೆ.

ಬಂದ್‌ನ ಇತರೆ ಮಾಹಿತಿ:

ಬೀದಿ ವ್ಯಾಪಾರ: ಎಂದಿನಂತೆ ನಡೆಯುವ ನಿರೀಕ್ಷೆ ಇದೆ
ಆಟೋ ಚಾಲಕರ ಸಂಘ: ಬಂದ್‌ಗೆ ಬೆಂಬಲ ನೀಡಿಲ್ಲ.
ಅಪರಿಹಾರ್ಯ ಸೇವೆಗಳು: ಆಸ್ಪತ್ರೆಗೆ ಸಂಬಂಧಿಸಿದ ಸೇವೆಗಳು, ಅಂಬುಲೆನ್ಸ್, ಔಷಧ ಅಂಗಡಿಗಳು ಬಂದ್‌ನಿಂದ ವಿನಾಯಿತಿ ಹೊಂದಿರಬಹುದು.

ಸೂಚನೆ:

ಸಾರ್ವಜನಿಕರು ಅಗತ್ಯ ಪ್ರಯಾಣ ಮತ್ತು ಕೆಲಸಗಳನ್ನು ಬಂದ್ ಮುಂಚಿತವಾಗಿ ಮುಗಿಸಿಕೊಳ್ಳಲು ಸಲಹೆ ನೀಡಲಾಗಿದೆ.

ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿ ಮಾಡುವ ಸಾಧ್ಯತೆ ಇದೆ.

ಇದನ್ನು ಓದಿ:ರಾಜ್ಯದಲ್ಲಿ ಇನ್ನೂ ನಾಲ್ಕು ದಿನ ಮಳೆ ಅಲರ್ಟ್ ಘೋಷಣೆ? ಗಾಳಿ ಸಹಿತ ಮಳೆಯ ಅಲರ್ಟ್
https://krushiyogi.com/archives/808

ಇದನ್ನು ಓದಿ:ಉಚಿತವಾಗಿ 10 ದಿನಗಳವರೆಗೆ ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿ ಪಡೆಯಲು ಅರ್ಜಿ ಆಹ್ವಾನ! https://krushiyogi.com/archives/799

2 COMMENTS

LEAVE A RESPONSE

Your email address will not be published. Required fields are marked *

Open chat
Hello 👋
Can we help you?