ರೈತರ ಮಕ್ಕಳಿಗೆ ವರ್ಷದ ತೋಟಗಾರಿಕಾ ತರಬೇತಿಗೆ ಅರ್ಜಿ!

ಜಿಲ್ಲೆಯ ತೋಟಗಾರಿಕೆ ಇಲಾಖೆ!

ವತಿಯಿಂದ ತೋಟಗಾರಿಕೆ ತರಬೇತಿ ಕೇಂದ್ರ, ಲಾಲ್ ಬಾಗ್. ಬೆಂಗಳೂರು ಇಲ್ಲಿ 2025-26ನೇ ಸಾಲಿನಲ್ಲಿ ರೈತರ ಮಕ್ಕಳಿಗೆ ತೋಟಗಾರಿಕೆ ತರಬೇತಿಯನ್ನು (2025ರ ಮೇ 2 ರಿಂದ 2026ರ ಫೆಬ್ರವರಿ 28 ವರೆಗೆ) ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿಗಳನ್ನು ಕಚೇರಿಗೆ ಕೆಲಸದ ಸಮಯದಲ್ಲಿ ತೋಟಗಾರಿಕೆ ಉಪ ನಿರ್ದೇಶಕರು, (ಜಿಲ್ಲಾ ಪಂಚಾಯತ್) ಆಯಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿಲ್ಲಾ ಪಂಚಾಯತ್) ಹಾಗೂ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ರಾಜ್ಯ ವಲಯ) ಅವರ ಕಚೇರಿಯಿಂದ ಪಡೆದುಕೊಳ್ಳಬಹುದು ಅಥವಾ ಇಲಾಖೆಯ ವೆಬ್ ಸೈಟ್ https://horticulturedir.karnataka.gov.in ಮಾಡಿಕೊಳ್ಳಬಹುದು. download

ಅರ್ಜಿ ಸಲ್ಲಿಕೆ?

ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ ರೂ.30 ಮತ್ತು ಪರಿಶಿಷ್ಟ ಜಾತಿ ಮತ್ತು /ಪರಿಶಿಷ್ಟ ಪಂಗಡದ ಹಾಗೂ ಅಂಗವಿಕಲ ಅಭ್ಯರ್ಥಿಗಳಿಗೆ ರೂ.15 ಗಳ ಮೌಲ್ಯದ ಇಂಡಿಯನ್ ಪೋಸ್ಟಲ್ ಆರ್ಡರ್ (ಐಪಿಒ) ಡಿಮ್ಯಾಂಡ್ ಡ್ರಾಪ್ಸ್ (DD)/k-2 payment challan ಅನ್ನು ತೋಟಗಾರಿಕೆ ಉಪ ನಿರ್ದೇಶಕರು ಜಿಲ್ಲಾ ಪಂಚಾಯತ್ ಚಿಕ್ಕಬಳ್ಳಾಪುರ ರವರ ಹೆಸರಿನಲ್ಲಿ ಪಡೆದ ಅರ್ಜಿಯ ಜೊತೆಗೆ ಲಗತ್ತಿಸಬೇಕು. ಭರ್ತಿ ಮಾಡಿದ ಅರ್ಜಿಗಳನ್ನು ಏಪ್ರಿಲ್ 1 ರಂದು ಸಂಜೆ 5.30 ಗಂಟೆಯೊಳಗೆ ಈ ಕಚೇರಿಗೆ ಸಲ್ಲಿಸತಕ್ಕದ್ದು. ಅರ್ಹ ಅಭ್ಯರ್ಥಿಗಳಿಗೆ ಏಪ್ರಿಲ್ 8 ರಂದು ತೋಟಗಾರಿಕೆ ಉಪನಿರ್ದೇಶಕರ ಕಚೇರಿಯಲ್ಲಿ ಸಂದರ್ಶನ ನಡೆಸಲಾಗುವುದು.

ಹೆಚ್ಚಿನ ಮಾಹಿತಿಗಾಗಿ?

ತೋಟಗಾರಿಕೆ ಉಪ ನಿರ್ದೇಶಕರು, ಪಿ.ಆರ್.ಎಸ್.ತೋಟಗಾರಿಕೆ ಕ್ಷೇತ್ರ, ನಂದಿ ಕ್ರಾಸ್ ಚಿಕ್ಕಬಳ್ಳಾಪುರ ಅಥವಾ ತಾಲ್ಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ:today market rate 08/03/2025 ಇಂದಿನ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ https://krushiyogi.com/archives/656

ಇದನ್ನು ಓದಿ:gold rate today ಇಂದಿನ ಚಿನ್ನದ ಬೆಲೆ ಮತ್ತು ಬೆಳೆ ಬೆಲೆ ಹೇಗಿದೆ ನೋಡಿ https://krushiyogi.com/archives/652

Leave a Comment