ಅನ್ನಭಾಗ್ಯ ಅಕ್ಕಿಯ ಪೆಂಡಿಂಗ್
ಹಣ ಬಿಡುಗಡೆ

WhatsApp Group Join Now
Telegram Group Join Now

ಆತ್ಮೀಯ ರೈತ ಬಾಂಧವರೇ,
ಈಗಾಗಲೇ ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಪ್ರತಿ ಮನೆಗೂ ಉಚಿತವಾಗಿ ಅಕ್ಕಿಯನ್ನು ನೀಡುವ ಯೋಜನೆಯನ್ನು ಹಮ್ಮಿಕೊಂಡಿದೆ. 5 ಕೆಜಿ ಅಕ್ಕಿಯನ್ನು ಸರ್ಕಾರವು ಇನ್ನು ಐದು ಕೆಜಿ ಅಕ್ಕಿಯ ಹಣ ಅಂದರೆ 170ಗಳನ್ನು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಡಿಬೀಟಿಯ ಮುಖಾಂತರ ನೀಡಲಾಗುತ್ತಿದೆ. ಈ ಯೋಜನೆಯಿಂದ ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ತುಂಬಾ ಉಪಯೋಗವಾಗಿದೆ. ಉಚಿತವಾಗಿ 5 ಕೆಜಿ ಅಕ್ಕಿಯನ್ನು ನೀಡಿ ಬಡವರ ಹೊಟ್ಟೆಯನ್ನು ಯೋಜನೆ  ಪರಿಪೂರ್ಣಗೊಳಿಸಿದೆ. ಮೊದಲಿಗೆ 10 ಕೆಜಿ ಅಕ್ಕಿಯನ್ನು ಉಚಿತ ನೀಡುವುದೆಂದಾಗಿ ರಾಜ್ಯ ಸರ್ಕಾರ ಹೇಳಿತ್ತು, ಕೇಂದ್ರ ಸರ್ಕಾರದಿಂದ ಅಕ್ಕಿಯ ಸಪ್ಲೈ ಅದೇ ಇರುವ ಕಾರಣ 5 ಕೆಜಿ ಅಕ್ಕಿಯನ್ನು ಉಚಿತವಾಗಿ ನೀಡಿ ಉಳಿದ ಐದು ಕೆಜಿ ಅಕ್ಕಿ ಹಣದ ಬದಲಾಗಿ 170ಗಳನ್ನು ಮನೆಯ ಯಜಮಾನಿಯ ಖಾತೆಗೆ ಬಿಟಿ ಮುಖಾಂತರ ನೇರವಾಗಿ ಅವರ ಖಾತೆಗೆ ಹಣವನ್ನು ಹಾಕಲಾಗುತ್ತಿದೆ. ಫೆಬ್ರವರಿ ತಿಂಗಳದ ಅನ್ನಭಾಗ್ಯ ಅಕ್ಕಿಯ ಯೋಜನೆ ಹಣ ಬಂದಿಲ್ಲದ ಕಾರಣ ಜನರು ಆತಂಕಗಳಿಗಾಗಿದ್ದಾರೆ. ಮಾರ್ಚ್ ಒಳಗಾಗಿ ಮನೆಯ ಯಜಮಾನಿಗೆ ಅಥವಾ ಎರಡನೇ ಯಜಮಾನ ಖಾತೆಗೆ ಹಣ ಬರುವುದೆಂದು ಹೇಳಲಾಗಿದೆ.
ಅನ್ನಭಾಗ್ಯಕ್ಕೆ ಯೋಚನೆ ಹಣವನ್ನು ಬ್ಯಾಂಕ್ ನಲ್ಲಿ ಪೋಸ್ಟ್ ಆಫೀಸ್ ನಲ್ಲಿ ಖಾತೆಯನ್ನು ತೆರೆಯುವುದರ ಮೂಲಕ ಅಲ್ಲಿ ಜಮೆ ಮಾಡಿಕೊಳ್ಳಬಹುದು. ಪೋಸ್ಟ್ ಆಫೀಸ್ ನಲ್ಲಿ ಖಾತೆ ತೆಗೆಯುವುದು ಒಂದು ಸುಲಭವಾದ ವಿಧಾನವಾಗಿದ್ದು ಇಲ್ಲಿ ಖಾತೆ ತೆಗೆದು ಸುಲಭವಾಗಿ ನಿಮ್ಮ ಖಾತೆಗೆ ಜಮೆ ಮಾಡಿಸಿಕೊಳ್ಳಬಹುದು.
ನಿಮ್ಮ ಖಾತೆಗೆ ಹಣ ವರ್ಗಾವಣೆ ಆಗಿದೆಯೋ ಅಥವಾ ಇಲ್ಲವೋ ಎಂಬುದನ್ನು ನೀವು ಮನೆಯಲ್ಲಿ ಕುಳಿತುಕೊಂಡು ನಿಮ್ಮ ಮೊಬೈಲ್ ನಲ್ಲಿ ಚೆಕ್ ಮಾಡಿಕೊಳ್ಳಬಹುದು. ಅದನ್ನು ಹೇಗೆ ಚೆಕ್ ಮಾಡುವ ವಿಧಾನ ಹೇಗೆ ಎಂಬುದನ್ನು ಇಲ್ಲಿ ನೋಡೋಣ ಬನ್ನಿ.
1.ಮೊಬೈಲ್ ಅಥವಾ ಲ್ಯಾಪ್ಟಾಪ್ ನಲ್ಲಿ ಕ್ರೋಮ್ ಅಪ್ಲಿಕೇಶನ್ ಅನ್ನು ಓಪನ್ ಮಾಡಿ.
2.ahaar karnatak ಎಂದು ಟೈಪ್ ಮಾಡಿ.
3. ಇದರಲ್ಲಿ ಒಂದನೇ ಆಪ್ಷನ್ ಸೆಲೆಕ್ಟ್ ಮಾಡಿಕೊಳ್ಳಿ.
4. ಒಂದು ಮೇನ್ ಪೇಜ್ ಓಪನ್ ಆಗುತ್ತದೆ.
5. ಅದಾದ ಮೇಲೆ ಎಡಗಡೆಯ ಮೂಲೆಯಲ್ಲಿ ಒಂದು ಆಪ್ಷನ್ ಕಾಣುತ್ತದೆ.
6.ಆ ಆಪ್ಷನ್ ಮೇಲೆ ಕ್ಲಿಕ್ ಮಾಡಿದರೆ ಅಲ್ಲಿ ಬಹಳಷ್ಟು ಆಯ್ಕೆಗಳು ಓಪನ್ ಆಗುತ್ತದೆ.
7. ಅದರಲ್ಲಿ ಈ ಸರ್ವಿಸ್ ಎಂಬ ಆಪ್ಷನ್ ಮೇಲೆ ಕ್ಲಿಕ್ ಮಾಡಿ.
8. ನಂತರ ತ್ರೀ ಡಾಟ್ ಇರುವದರ ಮೇಲೆ ಕ್ಲಿಕ್ ಮಾಡಿ.
9. ಡಿ ಬಿ ಟಿ ಸ್ಟೇಟಸ್ ಮೇಲೆ ಕ್ಲಿಕ್ ಮಾಡಿ.
ಯಾವ ಜಿಲ್ಲೆಯವರು ಎಂಬುದನ್ನು ಇದು ಕೇಳುತ್ತದೆ ನೀವು ಸಂಬಂಧಪಟ್ಟ ಜಿಲ್ಲೆಯಲ್ಲಿ ಕ್ಲಿಕ್ ಮಾಡಿ.
ಹೀಗೆ ನೀವು ವೆಬ್ ಸೈಟ್ ನಲ್ಲಿ ಹೋಗಿ ನಿಮಗೆ ಹಣ ಬಂದಿದೆಯೋ ಅಥವಾ ಇಲ್ಲವೋ ಎಂಬುದನ್ನು ಬೇಗನೇ ಚೆಕ್ ಮಾಡಿಕೊಳ್ಳಬಹುದು ಮತ್ತು ಇದು ನಿಮಗೆ ರೀತಿಯ ಅಪ್ಡೇಟ್ಗಳನ್ನು ನೀಡುತ್ತದೆ.





WhatsApp Group Join Now
Telegram Group Join Now

Leave a Comment