ಗ್ರಾಮ ಒನ್ ಕೇಂದ್ರ ಸ್ಥಾಪಿಸಲು ಅರ್ಜಿ ಆಹ್ವಾನ

ಗ್ರಾಮಒನ್ ಕೇಂದ್ರಗಳ ಸ್ಥಾಪನೆಗೆ ಅರ್ಜಿ ಆಹ್ವಾನ

ಕಾರವಾರ, ಫೆ.6: ಜಿಲ್ಲೆಯಲ್ಲಿ 227 ಗ್ರಾಮ ಪಂಚಾಯತ್ ಗಳಿದ್ದು, 210 ಪಂಚಾಯತ್‌ಗಳಲ್ಲಿ ಗ್ರಾಮಒನ್ ಕೇಂದ್ರ ಈಗಾಗಲೇ ಅನುಷ್ಠಾನಗೊಂಡಿದ್ದು, ಉಳಿದ 17 ಗ್ರಾಮ ಪಂಚಾಯತ್‌ಗಳಲ್ಲಿ ಹೊಸದಾಗಿ ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಭಟ್ಕಳ ತಾಲೂಕು ವ್ಯಾಪ್ತಿಯಲ್ಲಿ 1, ದಾಂಡೇಲಿಯಲ್ಲಿ 3, ಕಾರವಾರದಲ್ಲಿ 2, ಕುಮಟಾದಲ್ಲಿ 1, ಶಿರಸಿಯಲ್ಲಿ 2, ಜೋಯಡಾದಲ್ಲಿ 6, ಯಲ್ಲಾಪುರದಲ್ಲಿ 2 ಗ್ರಾಮಒನ್ ಕೇಂದ್ರಗಳನ್ನು ಸ್ಥಾಪಿಸಲು ಅರ್ಹ ಫ್ರಾಂಚೈಸಿಗಳಿಂದ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಫೆ.15 ಕೊನೆಯ ದಿನವಾಗಿದೆ.

ಅರ್ಹ ಫ್ರಾಂಚೈಸಿಗಳು ವೆಬ್‌ಸೈಟ್: https://www.karnatakaone.gov.in/ Public/GramOneFranchisee Team

ಲಿಂಕ್ ಮೂಲಕ ಗ್ರಾಮ ಒನ್ ಫ್ರಾಂಚೈಸಿ ಕೇಂದ್ರಗಳ ಸ್ಥಾಪನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ

ಇದು ಕೇವಲ ಮೇಲಿನ ಸ್ಥಳಗಳಿಗೆ ಅನ್ವಯವಾಗುತ್ತದೆ.

Admin
Author

Admin

Leave a Reply

Your email address will not be published. Required fields are marked *