ಮಣ್ಣು ರೈತನ  ಹೊನ್ನು

✓ಆತ್ಮೀಯ ರೈತ ಬಾಂಧವರೇ  ನಾವು ಯಾವುದೇ ಬೆಳೆಯನ್ನು ಬೆಳೆಯಬೇಕು ಅಂದರೆ
ಮಣ್ಣಿನ  ಆರೋಗ್ಯ , ಇದು ತುಂಬಾ ಮುಖ್ಯವಾದ ಪಾತ್ರ ವಹಿಸುತ್ತದೆ.

✓ನಾವು ಬೆಳೆ ಬೆಳೆಯುವ ಭೂಮಿಯಲ್ಲಿ ಮಣ್ಣಿನ ಆರೋಗ್ಯವನ್ನು ಯಾವ ರೀತಿ ಕಾಪಾಡಬೇಕು ಎಂದರೆ ನಾವು ನಮ್ಮ ದೇಹ ಯಾವ ರೀತಿ ಕಾಪಾಡ್ತೀವೋ ಆತರ ನಮ್ಮ ಮಣ್ಣಿನ  ಆರೋಗ್ಯವನ್ನು ಕಾಪಾಡಬೇಕು

✓ಹೆಲ್ತ್ ಇಸ್ ವೆಲ್ತ್  ಎಂಬ ಗಾದೆ ಮಾತು ನೀವು ಕೇಳಿರ್ತೀರಾ
ಇದೇ ರೀತಿ ಮಣ್ಣಿನ ಆರೋಗ್ಯವನ್ನು ಗುಣಮಟ್ಟದ ವಾದಲ್ಲಿ  ನಾವು ಒಳ್ಳೆ ಇಳುವರಿಯನ್ನು  ಪಡೆದು  ಹೆಚ್ಚಿನ ಲಾಭವನ್ನು ಗಳಿಸಬಹುದು.

✓ಮಣ್ಣಿನ ಸೌರೀಕರಣವು ಬಿಸಿ ಋತುವಿನಲ್ಲಿ ಪಾರದರ್ಶಕ ಪಾಲಿಥಿಲೀನ್‌ನೊಂದಿಗೆ ಮಣ್ಣನ್ನು ಮಲ್ಚಿಂಗ್ ಮಾಡುವ ಮೂಲಕ ಅದರ ಸೌರ ತಾಪನದ ಆಧಾರದ ಮೇಲೆ ಮಣ್ಣಿನ ಸೋಂಕುನಿವಾರಣೆಯ ವಿಧಾನವಾಗಿದೆ, ಇದರಿಂದಾಗಿ ಮಣ್ಣಿನಿಂದ ಹರಡುವ ಕೀಟಗಳನ್ನು ನಿಯಂತ್ರಿಸುತ್ತದೆ , ಈ ಪದ್ಧತಿಯನ್ನು ಸಾಮಾನ್ಯವಾಗಿ  ಏಪ್ರಿಲ್ ಅಥವಾ ಮೇ ತಿಂಗಳಲ್ಲಿ ಮಾಡಲಾಗುವುದು

  ✓ಹಸಿರು ಎಲೆ ಗೊಬ್ಬರ : ಸೆಣಬು ಅಥವಾ ಧನಿಚಾ  ಬಿತ್ತನೆ ಮಾಡಿ ಬೆಳೆಸಿ ಹೂ ಬರುವ ಹಂತದಲ್ಲಿ ರೋಟರಿ  ಹೊಡೆಯಬೇಕು  ಇದರಿಂದ ಮಣ್ಣಿನಲ್ಲಿ ಪೋಷಕಾಂಶಗಳನ್ನು ಹೆಚ್ಚಿಸುತ್ತದೆ  ಹಾಗೂ ಮಣ್ಣಿನ ಫಲವತ್ತತೆಯನ್ನು ಅದ್ದೂರಿಯಾಗಿ ಮಾಡುತ್ತದೆ

✓ಭೂಮಿ ಉಳುಮೆ ಮಾಡಿದ ನಂತರ
ಜೈವಿಕ  ಗೊಬ್ಬರಗಳು ,ರೈಜೋಬಿಯಂ 1lit/acr, ಅಜೋಸ್ಪಿರಿಲಿಯಮ್ 1kg/acr ಅಜೋಟೋಬ್ಯಾಕ್ಟರ್ , ಟ್ರೈಕೊಡರ್ಮ, ಸ್ಯೂಡೋಮೊನೋಸ್ ಫ್ಲೋರೊಸೆನ್ಸ್  ಮತ್ತು ಮೆಟ್ರೇಜಿಯಂ

✓ಫಾಸ್ಫೇಟ್ ಕರಗಿಸುವ ಬ್ಯಾಕ್ಟೀರಿಯಾ (ಉದಾ:- Hyro Plus G 4-8 ಕೆಜಿ/ಎಕರೆ)ಮತ್ತು ಮೈಕೋರಿಝಾ (ಉದಾ:- Hyro my+ / Ralligold / chemfree 4-8 ಕೆಜಿ/ಎಕರೆ)
PSB ಭೂಮಿಯಲ್ಲಿ  ಲಭ್ಯವಿಲ್ಲದ ರಂಜಕವನ್ನು  ಲಭ್ಯವಿರುವ ರಂಜಕದ ರೂಪಕ್ಕೆ ಕರಗಿಸಲು ಸಹಾಯ ಮಾಡುತ್ತದೆ
 
✓ಭೂಮಿಯನ್ನು ಉಳಿಮೆ ಮಾಡುವಾಗ  ಬೇವಿನ ಹೆಂಡಿ 100-200kg/acr  ಮತ್ತು   ತಿಪ್ಪೆ ಗೊಬ್ಬರ 5-10ton/acr  ಬಳಸಬೇಕು

✓ರೈತ ಮಿತ್ರರೇ ನಾವು ಯಾವುದೇ ಬೆಳೆಯನ್ನು ಬೆಳೆಯಬೇಕು ಅಂತಂದ್ರೆ ಮೊದಲು ನಾವು ಮಣ್ಣಿನ ಪರೀಕ್ಷೆಯನ್ನು ಮಾಡಿಸಬೇಕು ಮಣ್ಣಿನ ಪರೀಕ್ಷೆಯನ್ನು ನಮ್ಮ ಸ್ಥಳೀಯ ಕೃಷಿ ವಿಜ್ಞಾನ ಕೇಂದ್ರ ಅಥವಾ ರೈತ ಸಂಪರ್ಕ ಕೇಂದ್ರದಲ್ಲಿ ತೆಗೆದುಕೊಳ್ಳಬಹುದು

  ✓ಇದರಿಂದ ನಿಮಗೆ ರಾಸಾಯನಿಕ ಗೊಬ್ಬರಗಳನ್ನು   ಬೆಳಗ್ಗೆ ಅನುಗುಣವಾಗಿ ಸರಿಯಾದ ಪ್ರಮಾಣದಲ್ಲಿ  ಬಳಸಿ  ಮಣ್ಣಿನ ಆರೋಗ್ಯವನ್ನು ಕಾಪಾಡಬಹುದು

✓ಮಣ್ಣಿನ ಆರೋಗ್ಯವನ್ನು  ಕಾಪಾಡಲು , ಸರಿಯಾದ  ಮುಖ್ಯ ಬೆಳೆಆಯ್ಕೆಯನ್ನು ಮಾಡಬೇಕು  ಹಾಗೂ ಸರಿಯಾದ ಅಂತರ ಬೆಳೆಯನ್ನು ಬೆಳೆಯಬೇಕು , ಇದರ ಜೊತೆಗೆ ನಾವು ಹನಿ ನೀರಾವರಿ ಪದ್ಧತಿಯನ್ನು  ಅಳವಡಿಸಿಕೊಳ್ಳಬೇಕು.

ಧನ್ಯವಾದಗಳು

Leave a Reply

Your email address will not be published. Required fields are marked *