ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರಿಸಲು ಅರ್ಜಿ ಆಹ್ವಾನ

ಗಂಗಾ ಕಲ್ಯಾಣ ಯೋಜನೆ

ಗ್ರಾಮೀಣ ಪ್ರದೇಶದಲ್ಲಿ ವಾಸಿಸುವ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಕೊಳವೆಬಾವಿಯನ್ನು ಕೊರೆದು, ಪಂಪ್ ಮೋಟಾರ್ ಹಾಗೂ ವಿದ್ಯುದ್ಧೀಕರಣ ಮಾಡಿ ನೀರನ್ನು ಒದಗಿಸಲಾಗುತ್ತದೆ, ಈ ಯೋಜನೆಯು ಸಂಪೂರ್ಣ ಸಹಾಯಧನ ಯೋಜನೆಯಾಗಿದೆ.

ವೈಯಕ್ತಿಕ ಕೊಳವೆ ಬಾವಿ ಯೋಜನೆಗೆ ಸರ್ಕಾರವು ರೂ.3.75 ಲಕ್ಷಗಳನ್ನು 1. ಬೆಂಗಳೂರು ಗ್ರಾಮಾಂತರ 2. ಕೋಲಾರ 3. ಚಿಕ್ಕಬಳ್ಳಾಪುರ 4. ರಾಮನಗರ 5. ತುಮಕೂರು ಜಿಲ್ಲೆಗಳಿಗೆ ನಿಗದಿಪಡಿಸಿರುತ್ತದೆ ಮತ್ತು ಇತರೆ ಜಿಲ್ಲೆಗಳಿಗೆ ರೂ.2.25 ಲಕ್ಷಗಳನ್ನು ನಿಗದಿಪಡಿಸಿರುತ್ತದೆ.

ಅರ್ಹತೆ

  1. ಅರ್ಜಿದಾರರು ಸರ್ಕಾರಿ ಆದೇಶದಲ್ಲಿ ವಿವರಿಸಿದಂತೆ ಧಾರ್ಮಿಕ ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದವರಾಗಿರಬೇಕು.
  2. ಪ್ರತಿ ಫಲಾನುಭವಿಗೆ 1 ಎಕರೆ 20 ಗುಂಟೆ (1 ಎಕರೆ 50 ಸೆಂಟ್ಸ್) ಎಕರೆಯಿಂದ 5 ಎಕರೆಯವರೆಗೆ ಖುಷ್ಕಿ ಜಮೀನಿರಬೇಕು,ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಇಂತಹ ಜಿಲ್ಲೆಗಳಲ್ಲಿ ಜಮೀನಿನ ಲಭ್ಯತೆ ಬಹಳ ಕಡಿಮೆ ಇರುವುದರಿಂದ ಕನಿಷ್ಠ 1 ಎಕರೆ ಜಮೀನನ್ನು ಹೋದಿರತಕ್ಕದ್ದು.
  3. ಅರ್ಜಿದಾರರು ಕರ್ನಾಟಕ ರಾಜ್ಯದ ಖಾಯಂ ನಿವಾಸಿಗಳಾಗಿರಬೇಕು.
  4. ಅರ್ಜಿದಾರರು ಸಣ್ಣ /ಅತಿ ಸಣ್ಣ ಹಿಡುವಳಿದಾರ ರೈತರಾಗಿರಬೇಕು.
  5. ಎಲ್ಲಾ ಮೂಲಗಳಿಂದ ಕೌಟುಂಬಿಕ ಆದಾಯ ರೂ.6.00 ಲಕ್ಷ ಮೀರಬಾರದು.
  6. ಅರ್ಜಿದಾರರ ವಯಸ್ಸು 18 ರಿಂದ 55 ವರ್ಷಗಳ ನಡುವೆ ಇರಬೇಕು.

ದಾಖಲೆಗಳು

1.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಜಾತಿ ಪ್ರಮಾಣಪತ್ರ
2.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಆದಾಯ ಪ್ರಮಾಣಪತ್ರ
3.ಆಧಾರ್ ಕಾರ್ಡ್ ಪ್ರತಿ (ನಿವಾಸದ ಪುರಾವೆ)
4.ಇತ್ತೀಚಿನ ಆರ್‌ಟಿಸಿ ಪ್ರತಿ
5.ಸಕ್ಷಮ ಪ್ರಾಧಿಕಾರದಿಂದ ನೀಡಲಾದ ಸಣ್ಣ/ ಅತಿ ಸಣ್ಣ ಹಿಡುವಳಿದಾರ ಪ್ರಮಾಣಪತ್ರ
6.ಬ್ಯಾಂಕ್ ಪಾಸ್ ಬುಕ್ ಪ್ರತಿ
7.ಭೂ-ಕಂದಾಯ ಪಾವತಿಸಿದ ರಸೀದಿ
8.ಸ್ವಯಂ ಘೋಷಣೆ ಪತ್ರ
9.ಖಾತರಿ ನೀಡುವವರ ಸ್ವಯಂ ಘೋಷಣೆ ಪತ್ರ

ಈ ಯೋಜನೆಗೆ ಅರ್ಜಿ ಸಲ್ಲಿಸಲು ಈ ಕೇಂದ್ರಗಳಿಗೆ ಭೇಟಿ ನೀಡಿ.

ಗ್ರಾಮ ಒನ್, ಕರ್ನಾಟಕ ಒನ್, ಮತ್ತು ಬೆಂಗಳೂರು ಒನ್ ನಂತಹ ಸೇವಾ ಕೇಂದ್ರಗಳಲ್ಲೂ ಆನ್ಲೈನ್ ಅರ್ಜಿ ಸಲ್ಲಿಸಬಹುದು.

ಗಮನಿಸಿ

ಈ ಅರ್ಹತೆಗಳು ಸರ್ಕಾರದಿಂದ ಕಾಲಕಾಲಕ್ಕೆ ಬದಲಾಗುತ್ತಿರುತ್ತವೆ, ಆದ್ದರಿಂದ ಅರ್ಜಿ ಸಲ್ಲಿಸುವ ಮೊದಲು ಅಧಿಕೃತ ಮಾಹಿತಿಯನ್ನು ಪರಿಶೀಲಿಸುವುದು ಸೂಕ್ತ.

 ಇದನ್ನು ಓದಿ:ರೈತರಿಗೆ ಗುಡ್ ನ್ಯೂಸ್ ಕೃಷಿ ಇಲಾಖೆಯಿಂದ 28 ಸಾವಿರ ರೂ.ವರೆಗೆ ಸಹಾಯಧನ ಸೌಲಭ್ಯಕ್ಕೆ ಅರ್ಜಿ ಆಹ್ವಾನ.! 

 ಇದನ್ನು ಓದಿ: today market rate 05/03/2025 ಇಂದಿನ ಮಾರುಕಟ್ಟೆ ಬೆಲೆ ಹೇಗಿದೆ ನೋಡಿ?

Admin
Author

Admin

2 thoughts on “ಗಂಗಾ ಕಲ್ಯಾಣ ಯೋಜನೆಯಡಿ ಉಚಿತ ಬೋರ್ವೆಲ್ ಕೊರಿಸಲು ಅರ್ಜಿ ಆಹ್ವಾನ

Leave a Reply

Your email address will not be published. Required fields are marked *