ರಾಜ್ಯದಲ್ಲಿ ಹೈನೋದ್ಯಮಕ್ಕೆ ವಿಶೇಷ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಂಡಿದೆ. ರೈತರ ಆರ್ಥಿಕ ಸದೃಢತೆಗಾಗಿ ಹಾಲು ಉತ್ಪಾದನೆ ಮತ್ತು ಸಂಸ್ಕರಣಾ ವೆಚ್ಚಗಳನ್ನು ಪರಿಗಣಿಸಿ ನಂದಿನಿ ಹಾಲು ಮತ್ತು ಮೊಸರಿನ ದರ ಪರಿಷ್ಕರಣೆ ಮಾಡಲಾಗಿದೆ.
ಮುಂಬರುವ ಏಪ್ರಿಲ್ 1ರಿಂದ ರಾಜ್ಯದಲ್ಲಿ ನಂದಿನಿ ಹಾಲಿನ ದರವು ₹4 ಹೆಚ್ಚಳವಾಗಲಿದ್ದು, ಇಲ್ಲಿ ಏರಿಕೆಯಾಗುವ ದರದ ಲಾಭವು ರೈತರನ್ನು ತಲುಪಲಿದೆ. ದರ ಏರಿಕೆಯ ನಂತರವೂ ಒಂದು ಲೀಟರ್ ಹಾಲಿನ ಬೆಲೆ ₹46 ಆಗಲಿದ್ದು, ಇದು ಬೇರೆಲ್ಲಾ ರಾಜ್ಯಗಳಿಗಿಂತಲೂ ಕಡಿಮೆಯಿರಲಿದೆ.
ನಾಡಿನ ಲಕ್ಷಾಂತರ ಹಾಲು ಉತ್ಪಾದಕರ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ಧಿಗೆ ಬಲ ತುಂಬುವ ಏಕೈಕ ಉದ್ದೇಶದ ಈ ಪ್ರಯತ್ನಕ್ಕೆ ಸಾರ್ವಜನಿಕರು ಬೆಂಬಲವಾಗಿ ನಿಲ್ಲುತ್ತೀರೆಂಬ ವಿಶ್ವಾಸ ನಮಗಿದೆ.
ಏಪ್ರಿಲ್ 1 ರಿಂದಲೇ ಹಾಲಿನ ಪರಿಷ್ಕೃತ ದರ ಜಾರಿ..
ಈಗಾಗಲೇ ಸರ್ಕಾರ KSRTC, ಮೆಟ್ರೋ ಟಿಕೆಟ್ ದರ ಹೆಚ್ಚಳ ಮಾಡಿ ಜನರ ಜೇಬಿಗೆ ಕತ್ತರಿ ಹಾಕಿತ್ತು. ಈಗ ಮತ್ತೆ ಸರ್ಕಾರ ನಂದಿನಿ ಹಾಲಿನ ದರ 1 ಲೀಟರ್‌ಗೆ ₹4 ಏರಿಕೆ ಮಾಡಿ ರಾಜ್ಯದ ಜನರ ಆಕ್ರೋಶಕ್ಕೆ ಗುರಿಯಾಗಿದೆ. ಇಂದು ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. KMFನ 16 ಹಾಲು ಒಕ್ಕೂಟಗಳ ಅಧ್ಯಕ್ಷರು ಪ್ರತಿ ಲೀಟರ್‌ಗೆ ₹5 ಏರಿಕೆ ಮಾಡುವಂತೆ ಬೇಡಿಕೆ ಇಟ್ಟಿದ್ದರು. ಏಪ್ರಿಲ್ 1ರಿಂದ ನಂದಿನಿ ಹಾಲಿನ ಪರಿಷ್ಕೃತ ದರ ಅನ್ವಯ ಆಗಲಿದೆ ಎಂದು ಸಚಿವ ಕೆ ವೆಂಕಟೇಶ್ ಹೇಳಿದ್ದಾರೆ.